ಸಾವಿರಾರು ಗರ್ಭಿಣಿಯರು ಹೆರಿಗೆಗಾಗಿ ಅರ್ಜೆಂಟೀನಾಗೆ ಹೋಗೋದೇಕೆ?  – ಟೂರ್ ನೆಪದಲ್ಲಿ ಪಾಸ್ ಪೋರ್ಟ್ ಲೆಕ್ಕ!

ಸಾವಿರಾರು ಗರ್ಭಿಣಿಯರು ಹೆರಿಗೆಗಾಗಿ ಅರ್ಜೆಂಟೀನಾಗೆ ಹೋಗೋದೇಕೆ?  – ಟೂರ್ ನೆಪದಲ್ಲಿ ಪಾಸ್ ಪೋರ್ಟ್ ಲೆಕ್ಕ!

ಹಕ್ಕಿಗಳು ಸಾಮಾನ್ಯವಾಗಿ ಮೊಟ್ಟೆ ಇಟ್ಟು‌ಮರಿ ಮಾಡಲು ಒಂದು ಪ್ರದೇಶದಿಂದ  ಇನ್ನೊಂದು ಪ್ರದೇಶಕ್ಕೆ ಹೋಗುತ್ತವೆ. ರಷ್ಯಾದಲ್ಲಿ ಕಳೆದ ಕೆಲ ತಿಂಗಳಲ್ಲಿ ವಿಚಿತ್ರ ಘಟನೆ ನಡೆಯುತ್ತಿದೆ. ಇಲ್ಲಿನ 5,000 ಸಾವಿರಕ್ಕೂ ಹೆಚ್ಚು ಗರ್ಭಿಣಿಯರು ಅರ್ಜೆಂಟೀನಾಗೆ ಪ್ರಯಾಣ ಬೆಳೆಸಿದ್ದಾರೆ‌. ಕಾರಣ ಕೇಳಿದ್ರೆ ನೀವು ಶಾಕ್ ಆಗೋದು ಪಕ್ಕಾ.

ಕೆಲ ತಿಂಗಳುಗಳಿಂದ ರಷ್ಯಾದ ಗರ್ಭಿಣಿಯರು ತಮ್ಮ ಮಗುವಿಗೆ ಜನ್ಮ ನೀಡಲು ಅರ್ಜೆಂಟೀನಾಗೆ ತೆರಳುತ್ತಿದ್ದಾರಂತೆ. ಕಳೆದ ಗುರುವಾರ ಒಂದೇ ವಿಮಾನದಲ್ಲಿ 33 ಗರ್ಭಿಣಿಯರು ಅರ್ಜೆಂಟೀನಾಗೆ ತೆರಳಿದ್ದಾರೆ ಅಂತಾ ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಾಳೆ ಏರ್ ಶೋಗೆ ಪ್ರಧಾನಿ ಮೋದಿ ಚಾಲನೆ – ಯುದ್ಧವಿಮಾನಗಳ ಶಕ್ತಿಪ್ರದರ್ಶನಕ್ಕೆ ಹೇಗಿದೆ ಸಿದ್ಧತೆ..!?

ಇಷ್ಟಕ್ಕೂ ಗರ್ಭಿಣಿಯರ ಸಾಮೂಹಿಕ ವಲಸೆ ಕೇವಲ ತಾತ್ಕಾಲಿಕ. ಮಗುವಿಗೆ ಅರ್ಜೆಂಟೀನಾದಲ್ಲಿ ಜನ್ಮ‌ ನೀಡಿದ ಮೇಲೆ ವಾಪಸ್ ತಾಯ್ನಾಡಿಗೆ ಮರಳುತ್ತಾರೆ ಎಂದು ಅರ್ಜೆಂಟೀನಾದ ವಲಸೆ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿದ ಮೇಲೆ ಹೀಗೆ ಗರ್ಭಿಣಿಯರ ವಲಸೆ ಹೆಚ್ಚಿದೆಯಂತೆ!

ಅರ್ಜೆಂಟೀನಾಗೆ ರಷ್ಯಾದ ಗರ್ಭಿಣಿಯರು ಹೋಗೋದೇಕೆ?

ರಷ್ಯಾದಿಂದ ಅರ್ಜೆಂಟೀನಾಗೆ ಬಂದಿಳಿಯುತ್ತಿರುವ ಗರ್ಭಿಣಿಯರಲ್ಲಿ ಹೆಚ್ಚಿನವರು ಹೆರಿಗೆಗೆ ಕೆಲವೇ ವಾರಗಳು ಮಾತ್ರ ಬಾಕಿ ಇದ್ದಾಗ ಬರುತ್ತಾರಂತೆ. ಅರ್ಜೆಂಟೀನಾದಲ್ಲಿ ಮಗು ಹುಟ್ಟಿದರೆ ಆ ದೇಶದ ಪ್ರಜೆ ಎಂದು ಪಾಸ್ ಪೋರ್ಟ್ ಸಿಗುತ್ತದೆ. ಇದು ಮಗುವಿಗೆ ಭವಿಷ್ಯದಲ್ಲಿ ತುಂಬಾ ಸಹಕಾರಿ ಆಗುತ್ತದೆ ಎಂದು ರಷ್ಯಾದ ತಾಯಂದಿರು ಈ ಪ್ಲ್ಯಾನ್ ಮಾಡ್ತಿದ್ದಾರಂತೆ‌.

ಅರ್ಜೆಂಟೀನಾ ಪಾಸ್ಪೋರ್ಟ್ ವಿಶೇಷವೇನು?

ಅರ್ಜೆಂಟೀನಾದ ಪಾಸ್‌ಪೋರ್ಟ್ ಪಡೆದರೆ ಸಿಗುವ ವೀಸಾ ಫ್ರೀ ಎಂಟ್ರಿಯೇ ಇಲ್ಲಿ‌ ಪ್ರಮುಖ ಆಕರ್ಷಣೆ. ಅರ್ಜೆಂಟೀನಾದ ಪಾಸ್‌ಪೋರ್ಟ್ ಹೊಂದಿದ್ದರೆ 171 ದೇಶಗಳಿಗೆ ವೀಸಾ-ಫ್ರೀ ಎಂಟ್ರಿ ಸಿಗುತ್ತದೆ. ಆದರೆ ರಷ್ಯಾದ ವೀಸಾ ಹೊಂದಿದವರಿಗೆ 87 ದೇಶಗಳಿಗೆ ಮಾತ್ರ ವೀಸಾ-ಫ್ರೀ ಎಂಟ್ರಿ ಸಿಗುತ್ತದೆ. ಅರ್ಜೆಂಟೀನಾದಲ್ಲಿ ಹುಟ್ಟುವ ಮಗುವಿಗೆ ಆ ದೇಶದ ಪೌರತ್ವ ಸುಲಭವಾಗಿ ಸಿಗುವುದರಿಂದ ರಷ್ಯಾದ ಗರ್ಭಿಣಿಯರು ಡೆಲಿವರಿಗಾಗಿ ಅರ್ಜೆಂಟೀನಾಗೆ ಪ್ರವಾಸ ಹೋಗ್ತಾರೆ ಅಂತಾ ವರದಿಯಾಗಿದೆ.

ರಷ್ಯಾದ ಗರ್ಭಿಣಿಯರು ಪ್ರವಾಸದ ನೆಪದಲ್ಲಿ ಅರ್ಜೆಂಟೀನಾಗೆ ಬರುತ್ತಿರುತ್ತಾರೆ. ಆದರೆ ಯಾವುದೇ‌ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ಲ್ಯಾನ್ ಮಾಡಿಕೊಂಡಿರುವುದಿಲ್ಲವಂತೆ. ಹೀಗೆ ಅನುಮಾನ ಬಂದವರಲ್ಲಿ‌ ಮೂವರನ್ನು ಬಂಧಿಸಲಾಗಿತ್ತು.‌ ಹಾಗಿದ್ದರೂ ಅರ್ಜೆಂಟೀನಾದ ವಲಸೆ ನೀತಿಯಲ್ಲಿ ಪ್ರವಾಸಕ್ಕೆ ನಿರ್ದಿಷ್ಟ ಕಾರಣಗಳು ಬೇಕಿಲ್ಲದಿರುವುದರಿಂದ ರಷ್ಯನ್‌ ಮಹಿಳೆಯರು‌ ನಿರಂತರವಾಗಿ ಅರ್ಜೆಂಟೀನಾಗೆ ಹೋಗ್ತಿದ್ದಾರೆ. ರಷ್ಯಾದಲ್ಲಿ ಯುದ್ಧದ ಸಮಯದಲ್ಲಿ ಯುವಕರು ಕಡ್ಡಾಯ ಮಿಲಿಟರಿ ಸೇವೆ ಮಾಡಬೇಕಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲೂ ರಷ್ಯಾ‌ ನಾಗರೀಕರು ಈ ಹೊಸ ಪ್ಲ್ಯಾನ್ ರೂಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದೊಂತರಾ ಡೆಲಿವರಿ ಟೂರಿಸಂ ಆಗಿರೋದು ವಿಶೇಷ.

suddiyaana