ಹೆರಿಗೆ ರಜೆ ಮತ್ತು ಭತ್ಯೆಗಾಗಿ 17 ಭಾರಿ ಗರ್ಭಿಣಿ! – ಸುಳ್ಳಿನ ಕೋಟೆ ಕಟ್ಟಿದ ಮಹಿಳೆ ಜೈಲು ಪಾಲು!

ಹೆರಿಗೆ ರಜೆ ಮತ್ತು ಭತ್ಯೆಗಾಗಿ 17 ಭಾರಿ ಗರ್ಭಿಣಿ! – ಸುಳ್ಳಿನ ಕೋಟೆ ಕಟ್ಟಿದ ಮಹಿಳೆ ಜೈಲು ಪಾಲು!

ಕೆಲ ಕಂಪನಿಗಳು ತನ್ನ ಉದ್ಯೋಗಿಗಳಿಗಾಗಿ ಕೆಲವು ಸೌಲಭ್ಯಗಳನ್ನು ನೀಡುತ್ತವೆ. ಅನೇಕರು ಇದನ್ನು ಸದುಪಯೋಗ ಪಡಿಸಿಕೊಂಡರೆ, ಕೆಲವರು ಅದನ್ನು ದುರಪಯೋಗಪಡಿಸಿಕೊಳ್ಳುತ್ತಾರೆ. ಇಲ್ಲೊಬ್ಬಳು ಮಹಿಳೆ ಭಾರಿ ದೊಡ್ಡ ಡ್ರಾಮ ಮಾಡಿದ್ದಾಳೆ. ಹೆರಿಗೆ ರಜೆ ಹಾಗೂ ಭತ್ಯೆಗಾಗಿ 17 ಬಾರಿ ತಾನು ಗರ್ಭಿಣಿ ಅಂತಾ ನಾಟಕವಾಡಿದ್ದಾಳೆ.

ಇದನ್ನೂ ಓದಿ:   ಮಂಡ್ಯದಲ್ಲಿ ಪಾರುಪತ್ಯ ಸಾಧಿಸಲು ಕಾಂಗ್ರೆಸ್ ರಣತಂತ್ರ – ಸುಮಲತಾ, ಹೆಚ್‌ಡಿಕೆಗೆ ಕಾದಿದ್ಯಾ ಶಾಕ್?

ಹೌದು, ಅಚ್ಚರಿಯಾದ್ರೂ ಸತ್ಯ. ಕೆಲ ಕಂಪನಿಗಳು ಪುರುಷರಿಗಿಂತ ಮಹಿಳೆಯರಿಗೆ ಕೊಂಚ ಹೆಚ್ಚಿನ ಸೇವೆ, ಸೌಲಭ್ಯವನ್ನು ನೀಡುತ್ತದೆ. ಹೆರಿಗೆ ಸಮಯದಲ್ಲಿ ರಜೆ, ಭತ್ಯೆ ನೀಡುತ್ತವೆ. ಇದೀಗ ಇಟಲಿ ಮೂಲದ ಮಹಿಳೆ ರಜೆ ಪಡೆಯಲು ಮತ್ತು ಸರ್ಕಾರ ಗರ್ಭಿಣಿಯರಿಗಾಗಿ ಮತ್ತು ಹೆರಿಗೆಗೆಂದು ನೀಡುವ ಭತ್ಯೆಯನ್ನು ಲಪಟಾಯಿಸಲು 17 ಬಾರಿ ಸುಳ್ಳು ಹೇಳಿದ್ದಾರೆ. ತಾನು ಗರ್ಭಿಣಿ ಎಂದು ಹೇಳುವ ಮೂಲಕ ವಂಚಿಸಿದ್ದಾಳೆ.

50 ವರ್ಷ ವಯಸ್ಸಿನ ಬಾರ್ಬರಾಯೊಲೆ ಎಂಬಾಕೆ 24 ವರ್ಷದಲ್ಲಿ 17 ಸಲ ಗರ್ಭಿಣಿ ಎಂದು ಸುಳ್ಳು ಹೇಳಿ ಯಾಮಾರಿಸಿದ್ದಾಳೆ. ತನಗೆ 12 ಬಾರಿ ಗರ್ಭಪಾತವಾಗಿದೆ ಹಾಗೂ 5 ಮಕ್ಕಳಿದ್ದಾರೆ ಎಂದು ನಾಟಕವಾಡಿದ್ದಾಳೆ. ಸದ್ಯ 50ರ ಮಹಿಳೆ ತಾನು ಹೇಳಿದ್ದ ಸುಳ್ಳಿನಿಂದಾಗಿ ಸಿಕ್ಕಿಬಿದ್ದಿದ್ದು ಜೈಲು ಪಾಲಾಗಿದ್ದಾಳೆ. 1.6 ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಬೇಕಾಗಿದೆ.

Shwetha M