ಪದಕ ಬೇಟೆಗಿಳಿದ 7 ತಿಂಗಳ ಗರ್ಭಿಣಿ – ಒಲಿಂಪಿಕ್ಸ್‌ನಲ್ಲಿ ಗರ್ಭಿಣಿಯ ದೇಶಪ್ರೇಮ
ಹೊಟ್ಟೆಯಲ್ಲಿ ಕಂದ, ಈಕೆಗೊಂದು ಸೆಲ್ಯೂಟ್.!

ಪದಕ ಬೇಟೆಗಿಳಿದ 7 ತಿಂಗಳ ಗರ್ಭಿಣಿ – ಒಲಿಂಪಿಕ್ಸ್‌ನಲ್ಲಿ ಗರ್ಭಿಣಿಯ ದೇಶಪ್ರೇಮಹೊಟ್ಟೆಯಲ್ಲಿ ಕಂದ, ಈಕೆಗೊಂದು ಸೆಲ್ಯೂಟ್.!

ಪ್ಯಾರಿಸ್ ನಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟ ನಡಿತಾ ಇದೆ.. ಅಲ್ಲಿನ ಒಂದೊಂದೇ ಸ್ವಾರಸ್ಯಕರ ಸಂಗತಿಗಳು ಸುದ್ದಿಯಾಗ್ತಾ ಇದೆ.. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಏಳು ತಿಂಗಳ ಗರ್ಭಿಣಿ ಅಥ್ಲೀಟ್ ವೊಬ್ಬರು ಪದಕ ಬೇಟೆಗಿಳಿದು ಮೊದಲ ಸುತ್ತಿನಲ್ಲಿ ಗೆದ್ದು ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ದೇಶ ಪ್ರೇಮವನ್ನ ಮೆರೆದಿದ್ದಾರೆ. ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿದ ಬಳಿಕ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ವೊಂದನ್ನ ಕೂಡ ಹಂಚಿಕೊಂಡಿದ್ದಾರೆ.. ಅಷ್ಟಕ್ಕೂ ಆ ಅಥ್ಲೀಟ್ ಯಾರು? ಆಕೆಯ ಪೋಸ್ಟ್ ನಲ್ಲಿ ಏನಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರಿಸೆಪ್ಷನಿಸ್ಟ್ ಈಗ ಪಿಚ್ ಕ್ಯುರೇಟರ್ –  ಭಾರತದ ಮೊದಲ ಮಹಿಳಾ ಪಿಚ್ ಕ್ಯುರೇಟರ್

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಬೇಕು ಅಂದ್ರೆ ಅದೆಷ್ಟೋ ವರ್ಷ ಕಠಿಣ ಅಭ್ಯಾಸ ಮಾಡ್ಬೇಕು. ನಿದ್ರೆಗಳಿಲ್ಲದ ರಾತ್ರಿ ಕಳೆಯಬೇಕು. ಇದಕ್ಕಾಗಿ ಮೈದಾನದಲ್ಲಿ ಹಗಲು ರಾತ್ರಿ ಬೆವರು ಹರಿಸಬೇಕಿದೆ. ಇಷ್ಟಿದ್ದು, ಒಲಿಂಪಿಕ್‌ನಲ್ಲಿ ಭಾಗಿಯಾಗಲು ಅವಕಾಶ ಸಿಗಲಿದೆ ಎಂಬುದು ದೂರದ ಮಾತು. ಒಂದು ವೇಳೆ ಭಾಗಿಯಾದ್ರೂ ಪದಕ ಗೆಲ್ಲುವ ಆಸೆ ಪ್ರತಿಯೊಬ್ಬರಿಗೂ ಇರುತ್ತೆ. ಆಗ ಮಾತ್ರ  ಶ್ರಮಕ್ಕೆ ತಕ್ಕೆ ಫಲ ಸಿಕ್ಕಿದೆ ಎಂದುಕೊಳ್ಳುತ್ತಾರೆ. ಜೊತೆಗೆ ಹತ್ತಾರು ವರ್ಷದ ತಯಾರಿ ಫಲಶೃತಿಯಾಗಲೆಂದು ಇಡೀ ದೇಶ ಕಾಯುತ್ತಿರುತ್ತದೆ.

ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿ 7 ತಿಂಗಳ ಗರ್ಭಿಣಿಯೊಬ್ಬರು ಪದಕ ಬೇಟೆಗಿಳಿದು ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಹೌದು ಆಕೆ 7 ತಿಂಗಳ ಗರ್ಭಿಣಿಯಾಗಿದ್ದರು ತನ್ನ ಕನಸು ಕಮರಲು ಬಿಡದೆ ಸ್ಪರ್ಧೆಯಲ್ಲಿ ಭಾಗಿಯಾಗಿ fencer ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ. ಹೌದು..‌ ಈಜಿಪ್ಟ್‌ನ 26 ವರ್ಷದ ನಾದಾ ಹಫೀಜ್‌ ಅವರು 7 ತಿಂಗಳು ಗರ್ಭಿಣಿ. ಹೊಟ್ಟೆಯಲ್ಲಿ ಪುಟ್ಟ ಕಂದಮ್ಮ ಬೆಳಿತಾ ಇದ್ರೂ ಕೂಡ  ಪ್ಯಾರಿಸ್‌ ಒಲಿಂಪಿಕ್ಸ್‌ ಸ್ಪರ್ಧಿಸಿದ್ದಾರೆ. ಇದು ಇಡೀ ವಿಶ್ವ ಅಥ್ಲೆಟಿಕ್ ಕ್ಷೇತ್ರದಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿತು. ಹಫೀಜ್ ಕ್ರೀಡಾ ಪ್ರೇಮಕ್ಕೆ ಎಲ್ಲೆಡೆ‌‌ ಪ್ರಶಂಸೆಗಳ ಸುರಿಮಳೆಯೇ ಹರಿದು ಬರ್ತಾ ಇದೆ..  ಹಫೀಜ್ ತನ್ನ ಮೊದಲ ಪಂದ್ಯವನ್ನು ಯುಎಸ್‌ಎಯ  ವಿರುದ್ಧ ನಾಡಾ ಹಫೀಜ್ ಗೆದ್ದರೆ, ಎರಡನೇ ಪಂದ್ಯದಲ್ಲಿ ಕೊರಿಯಾದ ಫೆನ್ಸರ್ ಜಿಯೋನ್ ಹೇಯಂಗ್‌ ವಿರುದ್ಧ  ಹಫೀಜ್ ಸಾಕಷ್ಟು ಹೋರಾಟದ ಮನೋಭಾವ ತೋರಿದ್ದರು. ಆದರೆ ದಕ್ಷಿಣ ಕೊರಿಯಾದ ಆಟಗಾರ್ತಿಯನ್ನು ಸೋಲಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಈ ಸೋಲಿನ ನಂತರ ಹಫೀಜ್ ಅವರು ತಾನು ಗರ್ಭಿಣಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ.  ವೇದಿಕೆಯಲ್ಲಿ ಇಬ್ಬರು ಆಟಗಾರರು ಇದ್ದಾರೆ ಎಂದು ನೀವು ಭಾವಿಸುತ್ತೀರಿ. ಆದರೆ ವಾಸ್ತವವಾಗಿ ಮೂವರು ಇದ್ದರು. ಅದು ನಾನು, ನನ್ನ ಪ್ರತಿಸ್ಪರ್ಧಿ ಮತ್ತು ಇನ್ನೂ ಹುಟ್ಟದ ಪುಟ್ಟ ಕಂದಮ್ಮ. ನನ್ನ ಮಗು ಮತ್ತು ನಾನು ಅನೇಕ ಸವಾಲುಗಳನ್ನು ಹೊಂದಿದ್ದೆವು, ಅದು ದೈಹಿಕ ಅಥವಾ ಭಾವನಾತ್ಮಕವಾಗಿರಬಹುದು. ಗರ್ಭಾವಸ್ಥೆಯ ಏರಿಳಿತಗಳು ಸ್ವತಃ ಕಷ್ಟ. ಆದರೆ ಜೀವನ ಮತ್ತು ಕ್ರೀಡೆಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಹೋರಾಟವು ತುಂಬಾ ಕಷ್ಟಕರವಾಗಿದ್ದು, ಇದು ಹೋರಾಟಕ್ಕೆ ಯೋಗ್ಯವಾಗಿದೆ. 16ನೇ ಸುತ್ತಿನಲ್ಲಿ ನನ್ನ ಸ್ಥಾನವನ್ನು ಪಡೆದುಕೊಂಡಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಹೇಳಲು ಈ ಪೋಸ್ಟ್ ಬರೆಯುತ್ತಿದ್ದೇನೆ’ ಎಂದು ಹಫೀಜ್‌ ಹೇಳಿದ್ದಾರೆ. ಇನ್ನು ಹಫೀಜ್ ಇದೇ ಪೋಸ್ಟ್ ನಲ್ಲಿ ತನ್ನ ಗಂಡ ಹಾಗೂ ಕುಟುಂಬದ ತನಗೆ ಸಪೋರ್ಟ್ ಮಾಡ್ತಾ ಇರೋದನ್ನ ಕೂಡ ತಿಳಿಸಿದ್ದಾರೆ.. ಅವರು ತನ್ನನ್ನ ವಿಶ್ವಾಸಕ್ಕೆ ತೆಗೆದು ಕೊಂಡಿದ್ದಕ್ಕೆ ಇಷ್ಟೆಲ್ಲಾ ಸಾಧ್ಯ ಆಯ್ತು ಅಂತಾ ತಿಳಿಸಿದ್ದಾರೆ..

ಹಫೀಜ್ 2014 ರಲ್ಲಿ, ಈಜಿಪ್ಟ್ ರಾಷ್ಟ್ರೀಯ ಹಿರಿಯ ಮಹಿಳಾ ಸೇಬರ್ ಫೆನ್ಸಿಂಗ್ ತಂಡವನ್ನು ಸೇರಿಕೊಂಡರು.  2015 ರಲ್ಲಿ ಹಫೀಜ್‌ ಈಜಿಪ್ಟಿನ ಹಿರಿಯ ಮಹಿಳಾ ಸೇಬರ್ ರಾಷ್ಟ್ರೀಯ ಸ್ಪರ್ಧೆಯಲ್ಲಿ ತಮ್ಮ ಮೊದಲ ಬಾರಿಗೆ ಗೆಲ್ಲುತ್ತಾರೆ. ಅದಾದ ಬಳಿಕ ಅಲ್ಜೀರಿಯಾದಲ್ಲಿ ಆಫ್ರಿಕನ್ ವಲಯ ಅರ್ಹತೆ ಮೂಲಕ 2016 ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. 2021 ರಲ್ಲಿ, ಅವರು ಮತ್ತೊಮ್ಮೆ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಳಿಸಿದರು. 2018ರ ಆಫ್ರಿಕನ್ ಝೋನಲ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಮತ್ತು 2014 ಮತ್ತು 2019 ರಲ್ಲಿ ಕಂಚಿನ ಪದಕಗಳನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕ್ರೀಡೆ ಅಂದಾಗ ಸಾಕಷ್ಟು ಸವಾಲು ಇದ್ದೇ ಇರುತ್ತೆ..     ಮೈದಾನಕ್ಕೆ ಇಳಿದ್ಮೇಲೆ.. ಬಿಳೋದು, ಪೆಟ್ಟು ಮಾಡ್ಕೊಳ್ಳೋದು ಇದ್ದೇ ಇದೆ.‌ ಆದ್ರೇ ಹಫೀಜ್ ದೇಶ ಪ್ರೇಮಕ್ಕಾಗಿ ತಾನು ಗರ್ಭಿಣಿ,‌ ಈ ಟೈಮ್ ನಲ್ಲಿ ರೆಸ್ಟ್ ಬೇಕು ಅಂತಾ ಕೂಡ ಲೆಕ್ಕಿಸದೇ ಒಲಿಂಪಿಕ್ಸ್ ನಲ್ಲಿ ಸ್ಫರ್ಧಿಸಿ ದೇಶ ಪ್ರೇಮವನ್ನ ಮೆರೆದಿದ್ದಾರೆ..

Shwetha M

Leave a Reply

Your email address will not be published. Required fields are marked *