ಸಿರಾಜ್ ಮುಂದೆ ಪ್ರಸಿದ್ಧ್ ಸೈಡ್ ಲೈನ್ – ಫೈನಲ್ ಫೈಟ್.. 8 ವಿಕೆಟ್ ಲೆಕ್ಕಕ್ಕಿಲ್ವಾ?
ENGನಲ್ಲಿ ಕನ್ನಡಿಗನಿಗೆ ಅದೆಷ್ಟು ಅವಮಾನ?

ಇಂಗ್ಲೆಂಡ್ ಪ್ರವಾಸದಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಜರ್ನಿ ಒಂದೇ ಥರ ಇರ್ಲಿಲ್ಲ. ಯಾಕಂದ್ರೆ ಸಿರಾಜ್ಗೆ ಬ್ಯಾಕ್ ಟು ಬ್ಯಾಕ್ ಎಲ್ಲಾ ಮ್ಯಾಚ್ಗಳಲ್ಲೂ ಅವಕಾಶ ಸಿಕ್ಕಿತ್ತು. ಆದ್ರೆ ಪ್ರಸಿದ್ಧ್ ಪರಿಸ್ಥಿತಿ ಹಾಗಿರಲಿಲ್ಲ. ಒಂಥರಾ ರಿಪ್ಲೇಸ್ ಪ್ಲೇಯರ್ ಆಗಿ ಚಾನ್ಸ್ ನೀಡಲಾಗಿತ್ತು. ಅದ್ರ ಜೊತೆಗೆ ಸಿಕ್ಕಾಪಟ್ಟೆ ರನ್ಸ್ ಕೊಡ್ತಾರೆ ಅನ್ನೋ ಟೀಕೆ ಬೇರೆ.. ಈ ಎಲ್ಲಾ ಅವಮಾನ, ಅಪಹಾಸ್ಯ, ಟ್ರೋಲ್ ಎಲ್ಲವನ್ನೂ ಮೆಟ್ಟಿನಿಂತು ದಿಟ್ಟ ಉತ್ತರ ಕೊಟ್ಟವ್ರು ಪ್ರಸಿದ್ಧ್ ಕೃಷ್ಣ. ಕೊನೇ ಪಂದ್ಯದಲ್ಲೂ 8 ವಿಕೆಟ್ಗಳನ್ನ ಉರುಳಿಸಿ ಭಾರತದ ಗೆಲುವಿಗೆ ಬೆನ್ನೆಲುಬಾಗಿ ನಿಂತವ್ರೂ ಕೂಡ ಪ್ರಸಿದ್ಧ್ ಕೃಷ್ಣನೇ. ಆದ್ರೆ ಸಿರಾಜ್ ಮ್ಯಾಚ್ ಟರ್ನಿಂನ್ ಮೂಮೆಂಟ್ಸ್ ಮುಂದೆ ಹೈಲೆಟ್ ಆಗ್ಲಿಲ್ಲ ಅಷ್ಟೇ.
ಇದನ್ನೂ ಓದಿ : IND ಟೀಂನಿಂದ ಐವರು ಔಟ್? ಕರುಣ್, ಕಾಂಬೋಜ್‌ಗೆ ಕೈ ತಪ್ಪಿದ ಚಾನ್ಸ್?
ಅಷ್ಟಕ್ಕೂ ಐಪಿಎಲ್ ಮುಗಿಸಿ ಇಂಗ್ಲೆಂಡ್ ಟೂರ್ಗೆ ಹೊರಟ ಟೀಂ ಇಂಡಿಯಾದಲ್ಲಿ ಪ್ರಸಿದ್ಧ್ ಕೃಷ್ಣಗೂ ಅವಕಾಶದ ಬಾಗಿಲು ತೆರೆದಿತ್ತು. ಯಾಕಂದ್ರೆ ಐಪಿಎಲ್ನಲ್ಲಿ ಹೈಯೆಸ್ಟ್ ವಿಕೆಟ್ ಟೇಕರ್ ಆಗಿದ್ದ ಪ್ರಸಿದ್ಧ್ಗೆ ಬಿಸಿಸಿಐ ಬಿಗ್ ಚಾನ್ಸ್ ಕೊಟ್ಟಿತ್ತು. ಮೊದಲ ಪಂದ್ಯದಲ್ಲೇ ಪ್ಲೇಯಿಂಗ್ 11ನಲ್ಲಿ ಕಣಕ್ಕಿಳಿಸಲಾಗಿತ್ತು.
ಪ್ರಸಿದ್ಧ್ ಪವರ್ ಶೋ!
ಲೀಡ್ಸ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಬೇಟೆ
ಪ್ರತೀ ಓವರ್ಗೆ 6+ ರನ್ಸ್, ಇದೇ ಕಾರಣಕ್ಕೆ ಸಾಕಷ್ಟು ಟೀಕೆ
ಬುಮ್ರಾಗೆ ರೆಸ್ಟ್ ನೀಡಿದ್ರಿಂದ ಪ್ರಸಿದ್ಧ್ ಕೃಷ್ಣಗೆ ಇನ್ನೊಂದು ಚಾನ್ಸ್
ಈ ಮ್ಯಾಚ್ನಲ್ಲಿ ಪ್ರಸಿದ್ಧ್ಗೆ ಒಂದೇ ವಿಕೆಟ್ ಅಷ್ಟೇ ತೆಗೆಯೋಕೆ ಸಾಧ್ಯ
ಬುಮ್ರಾ ತಂಡಕ್ಕೆ ಕಮ್ ಬ್ಯಾಕ್ ಪ್ರಸಿದ್ಧ್ ಜಾಗ ಬಿಟ್ಟುಕೊಟ್ಟು ಬೆಂಚ್
ಅರ್ಷದೀಪ್ ಸಿಂಗ್ರನ್ನ ಟೆಸ್ಟ್ ಡೆಬ್ಯೂ ಮಾಡಿಸೋ ಪ್ಲ್ಯಾನ್ ನಲ್ಲಿದ್ರು
ಗಾಯಗೊಂಡಿದ್ರಿಂದ ಪ್ರಸಿದ್ಧ್ಗೆ ಮತ್ತೊಂದು ಅದೃಷ್ಟದ ಅವಕಾಶ
ಬೌಲಿಂಗ್ನಲ್ಲಿ ಲೈನ್ ಌಂಡ್ ಲೆಂಗ್ತ್ ಪರ್ಫೆಕ್ಟ್ ಆಗಿ ರೀಚ್ ಆಗ್ತಿತ್ತು
ಪ್ರಸಿದ್ಧ್ ವಿಕೆಟ್ ತೆಗೆದೂ ಕೂಡ ಸೈಲೆಂಟ್ ಆಗಿ ಸೆಲೆಬ್ರೇಟ್ ಮಾಡ್ತಿದ್ರು
ಕೊನೇ ಪಂದ್ಯದಲ್ಲಿ 8 ವಿಕೆಟ್ಗಳನ್ನ ತೆಗೆದ್ರೂ ಎಲೆಮರೆಯ ಕಾಯಿ
ಮೂರು ಪಂದ್ಯಗಳಿಂದ 14 ವಿಕೆಟ್ ತೆಗೆದು ಐದನೇ ಸ್ಥಾನದಲ್ಲಿ ಪ್ರಸಿದ್ಧ್
ಸದ್ಯ ಜಸ್ಪ್ರೀತ್ ಬುಮ್ರಾ ಫಿಟ್ನೆಸ್, ಇಂಜುರಿ ಆಬ್ಸೆನ್ಸ್ನಲ್ಲಿ ಟೀಂ ಇಂಡಿಯಾದ ವೇಗಿಗಳ ದಾಳಿ ಮುನ್ನಡೆಸೋದು ಯಾರು ಅನ್ನೋ ಪ್ರಶ್ನೆಗೆ ಮೊಹಮ್ಮದ್ ಸಿರಾಜ್ ಹೆಸರು ಮುಂಚೂಣಿಯಲ್ಲಿ ಇರ್ತಿತ್ತು. ಇದೀಗ ಈ ಲಿಸ್ಟ್ಗೆ ಪ್ರಸಿದ್ಧ್ ಕೃಷ್ಣ ಹೆಸರೂ ಕೂಡ ಸೇರ್ಪಡೆಯಾಗಿದೆ. ಆದ್ರೆ ಮುಂದಿನ ದಿನಗಳಲ್ಲಿ ಅದೆಷ್ಟರ ಮಟ್ಟಿಗೆ ಚಾನ್ಸ್ ಕೊಡ್ತಾರೆ ಅನ್ನೋದೇ ಈಗಿರೋ ಪ್ರಶ್ನೆ.

ನೋಡಿರಿ

