ಸೂರ್ಯವಂಶಿಗೆ ರಿವೇಂಜ್ ಮ್ಯಾಚ್- ಹರಿಣ ಬೇಟೆಗೆ IND ಸಿಂಹಿಣಿಯರು ರೆಡಿ
KING ಕೊಹ್ಲಿ ಕಂಬ್ಯಾಕ್‌ಗೆ ಡೇಟ್ ಫಿಕ್ಸ್

ಸೂರ್ಯವಂಶಿಗೆ ರಿವೇಂಜ್ ಮ್ಯಾಚ್- ಹರಿಣ ಬೇಟೆಗೆ IND ಸಿಂಹಿಣಿಯರು ರೆಡಿKING ಕೊಹ್ಲಿ ಕಂಬ್ಯಾಕ್‌ಗೆ ಡೇಟ್ ಫಿಕ್ಸ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳ ಹೂರಣ.  

ಅಫ್ಘಾನಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯ ಆರಂಭ ಆಗಿದ್ದು, ಅಫ್ಘಾನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ ಈಗಾಗಲೇ ಸರಣಿಯನ್ನು 2-0ಯಿಂದ ಮುನ್ನಡೆ ಸಾಧಿಸಿರುವ ಭಾರತ, ಮೂರನೇ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸುವ ಕನಸು ಕಾಣುತ್ತಿದೆ. ಇನ್ನು ಕೊನೆಯ ಪಂದ್ಯದಲ್ಲಿ ಗೆಲುವು ದಾಖಲಿಸಿ ಗೌರವ ಉಳಿಸಿಕೊಳ್ಳುವ ಆಸೆ ಅಫ್ಘಾನ್‌ ತಂಡದ್ದಾಗಿದೆ.

ಇದನ್ನೂ ಓದಿ: ಟಾಸ್ ಗೆದ್ದ ಅಫ್ಘಾನ್‌ – K.L ರಾಹುಲ್‌ , ಅರ್ಶ್‌ದೀಪ್‌, ಕುಲ್‌ದೀಪ್‌ ಪ್ಲೇಯಿಂಗ್ 11 ನಿಂದ OUT

ಐಪಿಎಲ್ ಸೀಸನ್ 2027ರ ಟ್ರೇಡ್ ಡೀಲ್‌ ಬಗ್ಗೆ ಚರ್ಚೆ ಜೋರಾಗಿದ್ದು,  ಲಕ್ನೋ ಸೂಪರ್​ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ತಂಡವನ್ನು ತೊರೆದು, ತಮ್ಮ ಮಾತೃ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. 2025 ರ ಮೆಗಾ ಹರಾಜಿನಲ್ಲಿ 27 ಕೋಟಿಗೆ LSG ತಂಡ ಸೇರಿದ್ದ ಪಂತ್, 2027ರ ಆವೃತ್ತಿಯಲ್ಲಿ 15 ಕೋಟಿ ರೂ. ಗೆ ಡೆಲ್ಲಿಗೆ ಹೋಗುತ್ತಾರೆ ಎನ್ನಲಾಗಿದೆ. ಸುಮಾರು 12 ಕೋಟಿ ಕಮ್ಮಿ ಬೆಲೆಗೆ ಡೆಲ್ಲಿ ಸೇರಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಚೈನಮನ್ ಸ್ಪಿನ್ನರ್ ಕುಲದೀಪ್ ಯಾದವ್ ಹೊಸ ತಂಡ ಸೇರಲು ಸಜ್ಜಾಗಿದ್ದಾರೆ.  ಡೆಲ್ಲಿ ತಂಡದಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಕುಲದೀಪ್ ಹೋಗಲಿದ್ದಾರೆ ಎಂದು ವರದಿಯಾಗಿದೆ. ರಿಷಭ್ ಪಂತ ಬದಲಾಗಿ ಕಲದೀಪ್‌ ಯಾದವ್‌ರನ್ನ ಪಡೆಯಲು ಲಕ್ನೋ ಮ್ಯಾನೇಜ್‌ಮೆಂಟ್ ರೆಡಿಯಾಗಿದೆ ಎಂದಿ ವರದಿಯಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲೂ ಮಹತ್ವದ ಬದಲಾವಣೆಗಳಾಗಲಿ ಅನ್ನೋ ಮಾತು ಕೇಳಿ ಬರ್ತಿದ್ದು, ಅಕ್ಷರ್ ಪಟೇಲ್ ಬದಲು ಕನ್ನಡಿಗ ಕೆಎಲ್ ರಾಹುಲ್‌ಗೆ ನಾಯಕತ್ವ ನೀಡುವ ಮಾತುಕತೆ ನಡೆಯುತ್ತಿದೆ. ನಾಯಕನಾಗಿ ಈಗಾಗಲೇ ಅನುಭವ ಹೊಂದಿರುವ ರಾಹುಲ್ ಮೇಲೆ ಫ್ರಾಂಚೈಸಿ ವಿಶ್ವಾಸ್ ವ್ಯಕ್ತಪಡಿಸಬಹುದು ಎಂದು ವರದಿಯಾಗಿದೆ.

ಮಾಜಿ ವೈಟ್-ಬಾಲ್ ದಿಗ್ಗಜ ಯುವರಾಜ್ ಸಿಂಗ್ 2027ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಐಪಿಎಲ್ ಮೂಲಗಳು ತಿಳಿಸಿವೆ. 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಎರಡರಲ್ಲೂ ಭಾರತದ  ಭಾಗವಾಗಿರೋ ಯುವಿ, ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ ಮತ್ತು  ಅಭಿಷೇಕ್ ಶರ್ಮಾ ಅವರಿಗೆ ವೈಯಕ್ತಿಕ ಮೆಂಟರ್ ಆಗಿ ಕೆಲಸ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಿಂಗ್ ಕೊಹ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಐಪಿಎಲ್ ಫೈನಲ್ ಪಂದ್ಯದ ವೇಳೆ ಸಂಭವಿಸಿದ ಮಂಡಿರಜ್ಜು ಗಾಯದ ಸಮಸ್ಯೆಯ ಕಾರಣ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು. ಅವರ ಬದಲಿಗೆ ಯಶಸ್ವಿ ಜೈಸ್ವಾಲ್ ಅವರನ್ನು ಅಫ್ಘಾನ್ ಸರಣಿಗೆ ಆಯ್ಕೆ ಮಾಡಲಾಗಿತ್ತು.ಇದೀಗ ವಿರಾಟ್ ಕೊಹ್ಲಿ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಮುಂದಿನ ತಿಂಗಳ ಮೊದಲ ವಾರದೊಳಗೆ ಸಂಪೂರ್ಣ ಫಿಟ್​ನೆಸ್ ಸಾಧಿಸಲಿದ್ದಾರೆ ಎಂದು ತಿಳಿದು ಬಂದಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ವಿರಾಟ್‌ ಕೊಹ್ಲಿ ಅವರು 2030ರವರೆಗೂ ಆಡಬಹುದೆಂದು ಬೆಂಗಳೂರು ಫ್ರಾಂಚೈಸಿ ಸಿಇಒ ರಾಜೇಶ್‌ ಮೆನನ್‌ ಹೇಳಿದ್ದಾರೆ.  ಆರ್‌ಸಿಬಿ ಹಾಗೂ ವಿರಾಟ್‌ ಕೊಹ್ಲಿ ಒಂದೇ ನಾಣ್ಯದ ಎರಡು ಮುಖಗಳು. ಅವರು ಆರ್‌ಸಿಬಿಯಿಂದ ದೂರವಾಗಿರುವುದನ್ನು ನಾವು ಎಂದಿಗೂ ನೋಡಿಲ್ಲ. ಆದರೆ, ಮುಂದಿನ ಮೂರು-ನಾಲ್ಕು ವರ್ಷಗಳ ಕಾಲ ಅವರು ಖಂಡಿತವಾಗಿಯೂ ಆಡಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ರಾಜೇಶ್ ಹೇಳಿದ್ದಾರೆ.

ಶ್ರೀಶಾಂತ್‌ರನ್ನ ದೇಶದ್ರೋಹಿ ಎಂದು ಕರೆದ ಗೌತಮ್ ಗಂಭೀರ್ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಗೌತಮ್ ಗಂಭೀರ್ ಹಾಗೂ ಎಸ್​. ಶ್ರೀಶಾಂತ್ ನಡುವಿನ ಹಳೆಯ ಜಗಳ ಮತ್ತೆ ಮುನ್ನಲೆಗೆ ಬಂದಿದೆ. 2023ರ ಐಪಿಎಲ್ ವೇಳೆ ಗೌತಮ್ ಗಂಭೀರ್, ನನನ್ನು ದೇಶದ್ರೋಹಿ ಎಂದು ನಿಂದಿಸಿದ್ದರು. ಈ ನಿಂದನೆ ಅಷ್ಟಕ್ಕೆ ನಿಲ್ಲಲಿಲ್ಲ. ಬದಲಾಗಿ ಫಿಕ್ಸರ್ ಎಂದು ಕರೆದು ಅವಮಾನಿಸಿದ್ದರು ಎಂದು  ಶ್ರೀಶಾಂಕ್  ಆರೋಪ ಮಾಡಿದ್ದಾರೆ.

ಶ್ರೀಲಂಕಾ ಎ  ಮತ್ತು ಭಾರತ  ಎ  ತಂಡಗಳ ನಡುವಿನ ತ್ರಿಕೋನ ಸರಣಿಯ ಫೈನಲ್ ಪಂದ್ಯವು ನಾಳೆ ಶ್ರೀಲಂಕಾದ ಡಂಬುಲ್ಲಾ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿ. ಈ ಪಂದ್ಯದಲ್ಲಿ ವೈಭವ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಹಿಂದಿನ ಪಂದ್ಯದಲ್ಲಿ ಲಂಕಾ ಆಟಗಾರು ಟ್ರಿಗರ್ ಮಾಡಿದ್ದಕ್ಕೆ ವೈಭವ್ ಮೈಮುಟ್ಟಿ ಕಿರಿಕ್ ಮಾಡಿಕೊಂಡಿದ್ರು. ಹೀಗಾಗಿ ನಾಳೆ ನಡೆಯುವ ಪಂದ್ಯದಲ್ಲಿ ವೈಭವ್ ಬ್ಯಾಟಿಂಗ್ ಮೂಲಕವೇ ಶ್ರೀಲಂಕಾ ಆಟಗಾರರಿಗೆ ಉತ್ತರ ಕೊಡುತ್ತಾರೆ ಅನ್ನೋ ನಿರೀಕ್ಷೆ ಫ್ಯಾನ್ಸ್‌ಗೆ ಹೆಚ್ಚಾಗಿದೆ.

ಹರಿಣಗಳನ್ನ ಭೇಟೆಯಾಡುವುದ್ದಕ್ಕೆ ಟೀಂ ಇಂಡಿಯಾ ಸಿಂಹಿಣಿಯರು ರೆಡಿಯಾಗಿದ್ದಾರೆ. ಮಹಿಳಾ ಟಿ20 ವಿಶ್ವಕಪ್‌ನಲ್ಲಿ ನಾಳೆ ಸೌತ ಆಫ್ರೀಕಾ ವಿರುದ್ಧ ಭಾರತ ಕಾದಾಟ ನಡೆಸಲಿದೆ. ಈಗಾಗಲೇ ಎರಡಕ್ಕೆ ಎರಡು ಪಂದ್ಯ ಗೆದ್ದಿರೋ ಟೀಂ ಇಂಡಿಯಾ ನಾಳೆ ಸೌತ್ ಆಫ್ರೀಕಾ ವಿರುದ್ದ ಗೆದ್ದರೇ  ಹ್ಯಾಟಿಕ್ ಗೆಲುವು ಸಾಧಿಸಿದಂತೆ ಆಗುತ್ತೆ. ಈ ಮೂಲಕ 6 ಪಾಯಿಂಟ್ಸ್‌ನೊಂದಿಗೆ ಟೇಬಲ್‌ ಟಾಪ್‌ನಲ್ಲಿ ಇರಲಿದೆ.

Kishor KV