ಚುನಾವಣೆ ಎದುರಿಸಲು ಭಯವೇ? ಪ್ರಶಾಂತ್ ಕಿಶೋರ್ ಎಡವಿದ್ರಾ?
ಚಾಣಕ್ಯನ ಕೈ ಹಿಡಿಯುತ್ತಾ ಬಿಹಾರ?

ಚುನಾವಣೆ ಎದುರಿಸಲು ಭಯವೇ?  ಪ್ರಶಾಂತ್ ಕಿಶೋರ್ ಎಡವಿದ್ರಾ?ಚಾಣಕ್ಯನ ಕೈ ಹಿಡಿಯುತ್ತಾ ಬಿಹಾರ?

ಪ್ರಶಾಂತ್ ಕಿಶೋರ್‌.. ಚುನಾವಣಾ ತಂತ್ರಗಾರ..  ದೇಶದ ಸಾಕಷ್ಟು ರಾಜ್ಯದಲ್ಲಿ  ತಮ್ಮ ರಣತಂತ್ರದ ಮೂಲಕ ಎಲ್ಲರ ಲೆಕ್ಕಾಚರವನ್ನ ಉಲ್ಟಾ ಮಾಡಿರೋ ಚಾಣಕ್ಯ.. ಇಷ್ಟು ಟೈಂ ಬೇರೆ ಪಕ್ಷವನ್ನ ಗೆಲ್ಲುವುದ್ದಕ್ಕೆ ರಣತಂತ್ರ ಹೂಡುತ್ತಿದ್ದ ಈ ಪ್ರಶಾಂತ್ ಕಿಶೋರ್ ಈಗ ತನ್ನದೇ ಸ್ವಂತ ಪಕ್ಷವನ್ನ ಕಟ್ಟಿಕೊಂಡು ಬಿಹಾರ ಎಲೆಕ್ಷನ್ ಅಖಾಡಕ್ಕೆ ಇಳಿದಿದ್ದಾರೆ.

ಪ್ರಶಾಂಕ್ ಕಿಶೋರ್‌ ಭಾರತದ ನಡೆಯೋ ಎಲೆಕ್ಷನ್‌ಗಳನ್ನ ತಂತ್ರಗಾರಿಕೆಯ ಚುನಾವಣೆಯಾಗಿ ಪರಿವರ್ತಿಸಿದ ಚುನಾವಣಾ ಎಕ್ಸಪರ್ಟ್‌ ಅಂತ ಇವರನ್ನ ನಾವು ಕರೆಯುತ್ತೇವೆ. ಜನರಲ್ಲಿ ಹೊಸ ಹೊಸ ಅಭಿಪ್ರಾಯವನ್ನ ಬಿಲ್ಡ್ ಮಾಡಿ ತಂತ್ರಗಾರಿಕೆಯನ್ನ ಹೆಣದವರು.. ಒಂದು ಪಕ್ಷದ ಬಗ್ಗೆ, ನಾಯಕನ ಬಗ್ಗೆ ಅಭಿಪ್ರಾಯ ರೂಪಿಸಿ ಚುನಾವಣೆ ಗೆಲ್ಲಿಸುವುದು ಇವರ ಸೂತ್ರ. ಇದೇ ಆಧಾರದಲ್ಲಿ ಇವರು ಚುನಾವಣೆ ಮಾಡಿದವರು..  ಪ್ರಶಾಂತ್ ಕಿಶೋರ್ ಸಕ್ಸಸ್ ರೇಟ್ ಕೂಡ ಹಾಗೇ ಇದೆ. ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರುವುದರಿಂದ ಹಿಡಿದು ನಂತ್ರ ಮೋದಿಗೆ ನಿತೀಶ್ ಕುಮಾರ್ ಸೆಡ್ಡು ಹೊಡದು 2015 ರ ಚುನಾವಣೆಯನ್ನ ಎದುರಿಸುವುದ್ದಕ್ಕೆ ಹೊರಟಾಗ ಲಾಲುಪ್ರಸಾದ್‌ ಜೊತೆ ಮೈತ್ರಿಯನ್ನ ರೂಪಿಸುವಲ್ಲಿ ದೊಡ್ಡ ಪಾತ್ರ ವಹಿಸಿದ್ರು. ನಂತ್ರ ಪಶ್ಚಿಮ ಬಂಗಾಳದಲ್ಲಿ ದೀದಿ ಪರವಾಗಿ.. ತಮಿಳುನಾಡಿನಲ್ಲಿ ಸ್ಟಾಲಿನ್ ಪರವಾಗಿ , ಆಂಧ್ರಪ್ರದೇಶದಲ್ಲಿ ಜಗನ್‌ಮೋಹನ್ ರೆಡ್ಡಿ.. ಹೀಗೆ ಒಂದಾದ ಮೇಲೆ ಒಂದರಂತೆ ಎಲೆಕ್ಷನ್ ತಂತ್ರಗಾರಿಯನ್ನ ಮಾಡ್ತಾ ಗೆಲುವನ್ನ ತಂದುಕೊಟ್ಟವರು.. ಇವರ  ಈ ತಂತ್ರಗಾರಿಗೆ ಒಂದು ರೀತಿಯ ವ್ಯಾಪಾರದ ತರ.. ನಾನು ನಿಮ್ಮನ್ನ, ನಿಮ್ಮ ಪಕ್ಷವನ್ನ ಗೆಲ್ಲಿಸಿಕೊಡುತ್ತೇನೆ. ಅದ್ದಕ್ಕೆ ಏನ್ ಬೇಕ್ ಅದ್ದನ್ನ ನಾನ್ ಮಾಡ್ತೀನಿ .. ನೀವು ನನಗೆ ಇಂತಿಷ್ಟು ಹಣ ಕೊಡಬೇಕು ಅಂತ ಒಂದು ಡೀಲ್ ಮಾಡಿಕೊಂಡು ಎಲೆಕ್ಷನ್ ಮಾಡುತ್ತಿದ್ದರು. ಆದ್ರೆ ರಾಜಕೀಯ ಸೆಳೆತ ಯಾರನ್ನೂ ಬಿಡಲ್ಲ.. ಹೀಗಾಗಿ ಬೇರೆಯವರ ಹಿಂದೆ ನಿಂತು ಎಲೆಕ್ಷನ್ ಗೆಲ್ಲಿಸಿಕೊಡುತ್ತಿದ್ದ ಈ ಪ್ರಶಾಂತ್ ಕಿಶೋರ್ ಈಗ ರಾಜಕೀಯಕ್ಕೆ ಧುಮುಕಿದ್ದಾರೆ. ಅಷ್ಟರ ಮಟ್ಟಿಗೆ ರಾಜಕೀಯ ಸೆಳೆತ ಇರುತ್ತೆ.. ಅಧಿಕಾರ, ಜನರ ವಿಶ್ವಾಸ, ಜನಪ್ರಿಯತೆ ಬೇಕೇ ಬೇಕು ಅನ್ಸುತ್ತೆ.. ಹಾಗೇ ಕೂಡ ಪ್ರಶಾಂತ್ ಕಿಶೋರ್‌.. ಹೀಗಾಗಿ ಜನ ಸುರಾಜ್ ಅನ್ನೋ ಹೊಸ ಪಕ್ಷವನ್ನ ಪ್ರಶಾಂತ್ ಕಿಶೋರ್ ಕಟ್ಟಿರೋದು.

ಇದನ್ನೂ ಓದಿ: ನಿಲ್ಲದ ಪಾಕ್‌ ತಾಲಿಬಾ*ನ್ ವಾರ್‌ – ಗಡಿಯಲ್ಲಿ 6 ಪಾಕಿಸ್ತಾನ ಸೈನಿಕರು ಬಲಿ

ಬಿಹಾರದ ರಾಜಕೀಯದಲ್ಲಿ ಹೊಸದೇನು ಮಾಡಬೇಕು ಅಂತ ಈ ಹೊಸ ಪಕ್ಷ ಕಟ್ಟಿದ್ದಾರೆ. ಅದ್ದಕ್ಕಾಗಿ ಕಳೆದ 2-3 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಆದ್ರೆ ಇಷ್ಟು ದಿನ ಇವರು ಮಾಡುತ್ತಿದಿದ್ದು ಚುನಾವಣೆ ತಂತ್ರಗಾರಿಕೆ.. ಚುನಾವಣೆ ತಂತ್ರಗಾರಿಕೆ ಮಾಡಿದಾಗ ಬೇರೆಯವರ ಮುಖ ಇತ್ತು. ಅಲ್ಲಿ  ಮೋದಿ ಮುಖ ಇತ್ತು . ದೀದಿ ಮುಖ ಇತ್ತು, ಸ್ಟಾಲಿನ್ ಮುಖ ಇತ್ತು.. ಈ ಮುಖಗಳನ್ನ ಮುಂದಿಟ್ಟುಕೊಂಡು ರಣತಂತ್ರ ಮಾಡುತ್ತಿದ್ದರು ಈ ಪ್ರಶಾಂತ್ ಕಿಶೋರ್.. ಈ ಮುಖಗಳು ಈಗಾಗಲೇ ಜನಪ್ರಿಯ ಮುಖಗಳಾಗಿದ್ವು.. ಜನರಿಗೆ ಸಾಕಷ್ಟು ವರ್ಷಗಳಿಂದ  ಈ ಮುಖಗಳ  ಬಗ್ಗೆ ಗೊತಿತ್ತು. ಈ ಮುಖಗಳನ್ನ ಇಟ್ಟುಕೊಂಡು ಪ್ರಶಾಂತ್ ಕಿಶೋರ್ ಸುತ್ತಲು ಕೋಟೆ ಕಟ್ಟಿಕೊಡುತ್ತಿದ್ದರು. ಅಂದ್ರೆ ಈ ಮುಖಗಳ  ಜನಪ್ರಿಯತೆಯನ್ನ ಮತ್ತಷ್ಟು ಹೆಚ್ಚು ಮಾಡೋಕೆ ತಂತ್ರವನ್ನ ಹೆಣೆಯುತ್ತಿದ್ದರು.. ಆದ್ರೆ ಈಗ ಸ್ವತಃ ತಾನೇ ಮುಖ.. ಅಂದ್ರೆ ಇಷ್ಟು ದಿನ ಬೇರೆಯವರನ್ನ ಗೆಲ್ಲಿಸುತ್ತಿದ್ದರು, ಈಗ ತಾನೇ ಗೆಲ್ಲಬೇಕು.. ಹೀಗಾಗಿ ಈಗ ಪ್ರಶಾಂತ್ ಕಿಶೋರ್ ಮುಖ ದೀದಿ ತರನೋ, ಸ್ಟಾಲಿನ್ ತರನೋ, ನಿತೀಶ್ ಕುಮಾರ್ ತರನೋ ಇದ್ಯಾ ಅನ್ನೋ ಪ್ರಶ್ನೆ ಬರುತ್ತೆ. ಪ್ರಶಾಂತ್ ಕಿಶೋರ್ ಚುನಾವಣಾ ತಂತ್ರಗಾರ ಅಂತ ದೇಶದ ಉದ್ದಗಲಕ್ಕೂ ಹೆಸರು ಮಾಡಿದ್ದಾರೆ. ಆದ್ರೆ ರಾಜಕಾರಣಿಯಾಗಿ ಹೆಸರು ಮಾಡಿಲ್ಲ.. ಹೀಗಾಗಿ ಬಿಹಾರದ ಎಲೆಕ್ಷನ್ ಹಲ್‌ಚಲ್ ಎಬ್ಬಿಸಿದೆ.

ಪ್ರಶಾಂತ್ ಕಿಶೋರ್ ಚುನಾವಣೆ ಗೆಲ್ತಾರಾ?

ಇನ್ನೂ ಬಿಹಾರ ಎಲೆಕ್ಷನ್‌ನಲ್ಲಿ ಪ್ರಶಾಂತ್ ಕಿಶೋರ್ ಗೆಲ್ತಾರಾ ಇಲ್ವಾ ಪ್ರಶ್ನೆ ಇಡೀ ದೇಶದ ಜನರಿಗೆ ಕಾಡುತ್ತಿದೆ.  ನಾನು ಎಲೆಕ್ಷನ್‌ಗೆ ನಿಲ್ಲೋದಿಲ್ಲ ಅಂದಿರೋ ಪಿಕೆ 150ಕ್ಕಿಂತ ಕಡಿಮೆ ಸ್ಥಾನಗಳನ್ನು ಗೆದ್ದರೆ ಅದು ತಮಗೆ ವೈಯಕ್ತಿಕ ಸೋಲು ಎಂದು ಅಭಿಪ್ರಾಯಪಟ್ಟಿದ್ದಾರೆ.  ಜನ ಸುರಾಜ್‌ ಪಕ್ಷವು 150ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದರೆ, ಅದು ಬಿಹಾರದ ಜನರ ನಿಜವಾದ ಗೆಲುವಾಗಲಿದೆ  ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದ್ರೆ ಚುನಾವಣಾ ರಾಜಕೀಯದಲ್ಲಿ ನಾಯಕನಾದವನು ಮುಂದೆ ನಿಂತು ಹೋರಾಡಬೇಕು ಅನ್ನೋದು ಸೂತ್ರ.. ಇದ್ದಕ್ಕೆ ಬೆಸ್ಟ್ ಎಕ್ಸಾಂಪಲ್ ಅರವಿಂದ್ ಕೇಜ್ರಿವಾಲ್ ಹೊಸ ಪಕ್ಷ ಕಟ್ಟಿದಾಗ ಡೆಲ್ಲಿ ಎಲೆಕ್ಷನ್ ನಡೆಸಿದ ಮಾಡೆಲ್.. ಕೇಜ್ರಿವಾಲ್ ದೊಡ್ಡವರಿಗೆ ಸವಾಲ್‌ ಹಾಕಬೇಕು ಅಂತ 3 ಸಲ ಸಿಎಂ ಆಗಿದ್ದ ಶೀಲಾ ದಿಕ್ಷೀತ್ ಎದುರೇ ಎಲೆಕ್ಷನ್‌ಗೆ ನಿಂತು ಗೆಲ್ತಾರೆ. ಇದು ಒಂದು ಬೆಸ್ಟ್‌ ಎಕ್ಸಾಂಪಲ್‌.. ನಾವು ಇದೇ ವಿಚಾರ ಬಿಹಾರದಲ್ಲಿ ನೋಡೋದಾದ್ರೆ.. ಇಲ್ಲಿ ಒಂದು ಟ್ರೆಂಡ್ ಇದೆ. ಬಿಹಾರದಲ್ಲಿ ಸಿಎಂ ಆಗಿರೋ ನಿತೀಶ್ ಕುಮಾರ್ ವಿಧಾನಸಭಾ ಎಲೆಕ್ಷನ್‌ಗೆ ಸ್ಪರ್ಧೆ ಮಾಡಲ್ಲ.. ವಿಧಾನಪರಿಷತ್ ಸದಸ್ಯರಾಗಿಯೇ ಸಿಎಂ ಆಗ್ತಾ ಇರೋದ್‌..  ಅದ್ರಂತೆ ಇಲ್ಲಿ ಪ್ರಶಾಂತ್ ಕಿಶೋರ್ ಕೂಡ ಎಲೆಕ್ಷನ್‌ಗೆ ಸ್ವರ್ಧೆ ಮಾಡಬೇಕು ಅಂತ ಅನಿವಾರ್ಯತೆ ಇಲ್ಲ.. ಅವರು ಜನರಿಗೆ ಹೇಳ್ತಾರೆ.. ನಿತೀಶ್ ಕುಮಾರ್ ನೋಡಿ ಎಲೆಕ್ಷನ್‌ಗೆ ನಿಲ್ಲದೇ ಸಿಎಂ ಆಗ್ತಾರೆ. ನಾನೇಕು ಮಾಡಲಿ.. ಶಾಸಕರು ನನ್ನ ಆಯ್ಕೆ ಮಾಡ್ತಾರೆ ಅಂತ ಹೇಳಬಹುದು.. ಆದ್ರೆ ಇದು ಒಂದು ಕಾರಣ ಆಗುತ್ತೆ ಹೊರತು ಇದು ನಾಯಕತ್ವದ ಗುಣ ಅಲ್ಲ. ನಾಯಕನಾದವನು ಮುಂದೆ ನಿಂತು ಎದುರಿಸಬೇಕು. ನೇರವಾಗಿ ಫೈಟ್ ಮಾಡಿದ್ರೆ ಜನರ ವಿಶ್ವಾಸ ಇವರ ಮೇಲೆ ಮತ್ತು ಇವರ ಪಕ್ಷದ ಮೇಲೆ ಎಷ್ಟಿದೆ ಅನ್ನೋದು ಗೊತ್ತಾಗುತಿತ್ತು. ಹೀಗಾಗಿ ಇಲ್ಲಿ ಪ್ರಶೋಂತ್ ಕಿಶೋರ್ ತನ್ನ ಜನಪ್ರಿಯತೆಯನ್ನ ನೇರವಾಗಿ ಪರೀಕ್ಷೆ ಮಾಡೋಕೆ ತಯಾರಿಲ್ಲ.  ತಂತ್ರಗಾರಿಕೆ ಮೂಲಕ 150 ಸೀಟ್ ಗೆಲ್ತಿನಿ ಅಂತ ಹೇಳ್ತಾ ಇರೋದು ಆಕಾಶ ಗೋಪುರದಂತೆ ಕಾಣ್ತಿದೆ. ಅಂದ್ರೆ ಪ್ರಶಾಂತ್ ಕಿಶೋರ್ ಎಲೆಕ್ಷನ್‌ೆಗೆ ನಿಲ್ಲದೇ ಇರುವುದ್ದನ್ನ ನೋಡಿದ್ರೆ ಅಡಿಪಾಯ ಇಲ್ಲದ ಗೋಪುರದಂತೆ ಕಾಣ್ತಿದೆ.  ನಾನು ಎಲ್ಲರನ್ನೂ ಗೆಲ್ಲಿಸಿ ಆಮೇಲೆ ಸಿಎಂ ಆಗ್ತೀನಿ ಅಂತ ಪ್ರಶಾಂತ್ ಕಿಶೋರ್ ಲೆಕ್ಕಚಾರ. ಬಟ್ ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

Kishor KV