ವೋಟರ್ ಸ್ಲಿಪ್ ಮರೆತು ಬಂದ ಪ್ರಮೋದಾ ದೇವಿ – ಮತ್ತೆ ದಾಖಲೆ ತಂದು ಹಕ್ಕು ಚಲಾಯಿಸಿದ ರಾಜಮಾತೆ

ವೋಟರ್ ಸ್ಲಿಪ್ ಮರೆತು ಬಂದ ಪ್ರಮೋದಾ ದೇವಿ – ಮತ್ತೆ ದಾಖಲೆ ತಂದು ಹಕ್ಕು ಚಲಾಯಿಸಿದ ರಾಜಮಾತೆ

ರಾಜ್ಯ ವಿಧಾನಸಭಾ ಚುನಾವಣೆಗೆ ಬಿರುಸಿನ ಮತದಾನ ನಡೆಯುತ್ತಿದೆ. ಮತ ಚಲಾಯಿಸುವ ಮೂಲಕ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಅಂತೆಯೇ ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾದೇವಿ ಅವರು ಮತದಾನಕ್ಕೆ ತೆರಳಿದ್ದರು. ಆದರೆ ವೋಟರ್ ಚೀಟಿಯನ್ನು ಮನೆಯಲ್ಲೇ ಬಿಟ್ಟು ಮತಗಟ್ಟೆಗೆ ಆಗಮಿಸಿದ್ದರಿಂದ ಚುನಾವಣಾ ಅಧಿಕಾರಿಗಳು ಮತ ಚಲಾವಣೆಗೆ ಅವಕಾಶ ನೀಡಲಿಲ್ಲ.

ಇದನ್ನೂ ಓದಿ : ಊರಿಗೆ ರಸ್ತೆ ಇಲ್ಲ ಎಂದು ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು – ಚುನಾವಣಾಧಿಕಾರಿಗಳ ಮನವಿಗೂ ಬಗ್ಗದ ಜನ!

ಮತದಾನಕ್ಕೆ ಬರುವವರು ವೋಟರ್ ಐಡಿ ಜೊತೆ ವೋಟರ್ ಸ್ಲಿಪ್ ಕೂಡ ತೆಗೆದುಕೊಂಡು ಬರಬೇಕು. ಆದರೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ವೋಟರ್ ಸ್ಲಿಪ್ ಅನ್ನು ಮನೆಯಲ್ಲೇ ಬಿಟ್ಟು ಮತಗಟ್ಟೆಯ ಬಳಿ ಬಂದಿದ್ರು. ಈ ವೇಳೆ ಚುನಾವಣಾ ಅಧಿಕಾರಿಗಳು ಮತ ಚಲಾಯಿಸಲು ಅವಕಾಶ ನೀಡಿಲ್ಲ. ಬಳಿಕ ಪ್ರಮೋದಾ ದೇವಿ ಅವರು ತಮ್ಮ ಮೊಬೈಲ್‌ನಲ್ಲಿದ್ದ ಸಾಫ್ಟ್ ಕಾಪಿಯನ್ನು ತೋರಿಸಿದ್ದಾರೆ. ಆದರೆ ಇದಕ್ಕೆ ಮತಗಟ್ಟೆ ಅಧಿಕಾರಿಗಳು ಒಪ್ಪಿಗೆ ನೀಡಿಲ್ಲ. ಹೀಗಾಗಿ ವೋಟರ್ ಸ್ಲಿಪ್ ತರಲು ಮತಗಟ್ಟೆಯಿಂದ ಪ್ರಮೋದಾದೇವಿ ಒಡೆಯರ್ ವಾಪಸ್ ತೆರಳಿದರು. ಮತಗಟ್ಟೆಯ ಮುಂಭಾಗದಲ್ಲೇ ಕಾರಿನಲ್ಲಿ ಕುಳಿತು ನಮ್ಮವರಿಂದ ಮೊಬೈಲ್​ನಲ್ಲಿದ್ದ ಪ್ರಿಂಟ್ ಪಡೆದು ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಮತ ಚಲಾಯಿಸಿದರು.

ಮತದಾನದ ಬಳಿಕ ಮಾತನಾಡಿದ ಪ್ರಮೋದಾ ದೇವಿ ಅವರು ಮೊದಲೆಲ್ಲಾ ಪಾರ್ಟಿಯಿಂದ ಚೀಟಿ ಕೊಡುತ್ತಿದ್ದರು. ಈ ಬಾರಿ ಕಚೇರಿಯಿಂದ ಚೀಟಿ ಕೊಟ್ಟಿದ್ದಾರೆ. ಅದರಲ್ಲಿ‌ ಎಲ್ಲಾ ಮಾಹಿತಿ ಇದೆ. ಅದರ ಭರವಸೆ ಮೇಲೆ ಬೇರೆ ಚೀಟಿ ಕೊಡಲ್ಲ ಅಂತ ಬಂದಿದ್ದೆ. ಆದು ಸಾಲಲ್ಲ, ಬೇರೆ ದಾಖಲೆ ಬೇಕು ಅಂತ ಹೇಳಿದರು. ಆಫೀಸಿನಿಂದ ಬಂದ ಚೀಟಿಯಿಂದಾಗಿ ಬೇರೆ ದಾಖಲೆ ತಂದಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ರು. ಹಾಗೂ ಎಲ್ಲರೂ ಮತ ಚಲಾಯಿಸುವಂತೆ ತಿಳಿಸಿದ್ರು.

suddiyaana