ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ – ​ ಮಾಜಿ ಕಾರು ಚಾಲಕ ಕಾರ್ತಿಕ್ ನಾಪತ್ತೆ!

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ – ​ ಮಾಜಿ ಕಾರು ಚಾಲಕ ಕಾರ್ತಿಕ್ ನಾಪತ್ತೆ!

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌  ಪ್ರಕರಣಕ್ಕೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಸಿಗುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಪ್ರಜ್ವಲ್‌ ರೇವಣ್ಣ ಮಾಜಿ ಡ್ರೈವರ್‌ ಪ್ರಜ್ವಲ್​​ ಅಶ್ಲೀಲ ವಿಡಿಯೋ ನೀಡಿದ್ದು ನಾನೇ ಎಂದು ಹೇಳಿದ್ದರು. ಇದು ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ಈ ಪ್ರಕರಣ ಹೊಸ ತಿರುವು ಪಡೆದಿದೆ. ಪ್ರಜ್ವಲ್‌ ಮಾಜಿ ಡ್ರೈವರ್‌ ಕಾರ್ತಿಕ್‌ ಏಕಾಏಕಿ ನಾಪತ್ತೆಯಾಗಿದ್ದಾರೆ. ಆ ಮೂಲಕ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ತವರಿನಲ್ಲೇ ಸಿಎಸ್‌ಕೆಗೆ ಹೀನಾಯ ಸೋಲು – 7 ವಿಕೆಟ್‌ಗಳಿಂದ ಗೆದ್ದು ಬೀಗಿದ ಪಂಜಾಬ್‌

ಪೆನ್‌ಡ್ರೈವ್‌ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿಗೆ ವಹಿಸಿದ್ದು, ಅಧಿಕಾರಿಗಳು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ. ಇದೀಗ ಪೆನ್​ಡ್ರೈವ್ ಅಸಲಿ ಕಹಾನಿ ಶುರುವಾಗಿದೆ. ಪ್ರಜ್ವಲ್ ಬಳಿ ಕಾರು ಚಾಲಕನಾಗಿ 13 ವರ್ಷ ಕೆಲಸ ಮಾಡಿದ್ದ ಹೊಳೆನರಸೀಪುರ ತಾಲೂಕಿನ ಕಡುವಿನಕೋಟೆ ನಿವಾಸಿ ಕಾರ್ತಿಕ್,  2 ದಿನದ ಹಿಂದೆ SIT ಮುಂದೆ ಹಾಜರಾಗೋದಾಗಿ ವಿಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದರು. ಅಷ್ಟೇ ಅಲ್ಲದೇ ದೇವರಾಜ್‌ ಅವರಿಗೆ ಪ್ರಜ್ವಲ್​​ ಅಶ್ಲೀಲ ವಿಡಿಯೋ ನೀಡಿದ್ದು ನಾನೇ ಎಂದು ಹೇಳಿದ್ದರು. ಪೆನ್​​ಡ್ರೈವ್ ಬಗ್ಗೆ ಹೊಳೆನರಸೀಪುರ ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿಕೆ ಬೆನ್ನಲ್ಲೇ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ದೇವರಾಜೇಗೌಡ ಹೇಳಿಕೆ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಕಾರ್ತಿಕ್, ನಾನು ಬಿಜೆಪಿ ಮುಖಂಡ ದೇವರಾಜೇಗೌಡ ಬಿಟ್ಟರೆ ಬೇರೆ ಯಾರಿಗೂ ವಿಡಿಯೋ, ಫೋಟೋಗಳನ್ನು ಹಂಚಿಕೊಂಡಿಲ್ಲ ಎಂದು ಹೇಳಿದ್ದರು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್​ಗೆ SIT ನೋಟಿಸ್ ಸಹ ನೀಡಿತ್ತು. ಆದರೆ ಇದೀಗ ಎಸ್ಕೇಪ್ ಆಗಿದ್ದಾರೆ.

ಇನ್ನು ಕಾರ್ತಿಕ್ ನಾಪತ್ತೆ ಹಿಂದೆ ಪ್ರಭಾವಿಗಳ ಕೈವಾಡ ಇದೆ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಕಾರ್ತಿಕ್ ಮಲೇಷಿಯಾಗೆ ಹೋಗಿದ್ದಾನೆ. ಕಾರ್ತಿಕ್​ನನ್ನ ಮಲೆಷ್ಯಾಗೆ ಕಳಿಸಿದ್ಯಾರು ಎಂದು ಪ್ರಶ್ನಿಸಿದ್ದರು.

ಡ್ರೈವರ್ ವಿಡಿಯೋ ರಿಲೀಸ್ ಮಾಡಿದ್ನಲ್ವಾ? ಆತ ಮಾತನಾಡಿರುವ ವಿಡಿಯೋ ಯಾರು ಮಾಡಿದ್ದು? ಅವನ‌ ಕೈಯಲ್ಲಿ ವಿಡಿಯೋ ಬಿಟ್ಟಿದ್ದರು, ಏನ್ ಹೇಳಿಕೆ ಕೊಟ್ಟಾ, ದೇವರಾಜ್ ಕೈಯಲ್ಲಿ ಪೆನ್​ಡ್ರೈವ್ ಕೊಟ್ಟಿದ್ದೆ ಅಂತಾ ಹೇಳಿದ್ದ. ಆದರೆ ಈ ಡಿಕೆ ಸಹೋದರರು ಕುಮಾರಸ್ವಾಮಿನೇ ಬಿಟ್ಟಿರಬೇಕು ಅಂತಾ ಹೇಳಿಕೆ ಕೊಟ್ಟಿದ್ದಾರೆ ಎಂದು ವಾಗ್ದಾಳಿ ಮಾಡಿದ್ದರು.

Shwetha M

Leave a Reply

Your email address will not be published. Required fields are marked *