ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಬರೋದು ಡೌಟ್? – ಫ್ಲೈಟ್‌ ಟಿಕೆಟ್ ರದ್ದು.. ಹಣ ವಾಪಸ್ ಪಡೆಯದೆ ಗೊಂದಲ ಸೃಷ್ಟಿಸಿದ  ನಡೆ

ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಬರೋದು ಡೌಟ್? – ಫ್ಲೈಟ್‌ ಟಿಕೆಟ್ ರದ್ದು.. ಹಣ ವಾಪಸ್ ಪಡೆಯದೆ ಗೊಂದಲ ಸೃಷ್ಟಿಸಿದ  ನಡೆ

ಹಾಸನದ ಪೆನ್‌ಡ್ರೈವ್‌ ಪ್ರಕರಣ ದೇಶದಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ ಈ ಪ್ರಕರಣದ ಸಂಬಂಧ ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಜ್ವಲ್‌ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಯಾವಾಗ ಭಾರತಕ್ಕೆ ಬರುತ್ತಾರೆ ಅಂತಾ ಅಧಿಕಾರಿಗಳು ಕಾಯುತ್ತಿದ್ದಾರೆ. ಈಗಾಗಲೇ ಎಲ್ಲಾ ವಿಮಾನ ನಿಲ್ದಾಣಗಳಲ್ಲೂ ಎಸ್‌ಐಟಿ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಆದರೆ ಪ್ರಜ್ವಲ್‌ ರೇವಣ್ಣನ ಸುಳಿವು ಮಾತ್ರ ಸಿಗುತ್ತಿಲ್ಲ. ಬುಧವಾರ ಪ್ರಜ್ವಲ್‌ ರೇವಣ್ಣ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಬುಧವಾರ ಕೂಡ ಬರುವುದು ಅನುಮಾನವಾಗಿದೆ.

ಇದನ್ನೂ ಓದಿ: ಚಾರ್ ಧಾಮ್ ಯಾತ್ರೆಗೆ ಜನವೋ ಜನ – ಬದರಿನಾಥದಲ್ಲಿ VIP ದರ್ಶನ ಸೌಲಭ್ಯ ಸ್ಥಗಿತ!

ಮೇ 15 ರಂದು ಪ್ರಜ್ವಲ್‌ ರೇವಣ್ಣ ಬೆಂಗಳೂರಿಗೆ ಬರಲಿದ್ದಾರೆ ಅಂತಾ ಹೇಳಲಾಗಿತ್ತು. ಹೀಗಾಗಿ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ಚಲನ ವಲನಗಳ ಮೇಲೆ ಎಸ್ಐಟಿ ತಂಡ ನಿಗಾ ಇಟ್ಟಿದೆ. ಇದೀಗ ಪ್ರಜ್ವಲ್ ರೇವಣ್ಣ ಜರ್ಮನ್​​​​ನ ಮ್ಯೂನಿಚ್​​ನಿಂದ ಬೆಂಗಳೂರಿಗೆ ಬುಕ್ ಆಗಿದ್ದ ವಿಮಾನ ಟಿಕೆಟ್ ರದ್ದುಗೊಳಿಸಲಾಗಿದೆ. ಬುಧವಾರ ಬೆಂಗಳೂರಿಗೆ ಬರಬೇಕಿದ್ದ ಪ್ರಜ್ವಲ್ ಈಗಾಗಲೇ ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಲುಪ್ತಾನ್ಸಾ ವಿಮಾನದಲ್ಲಿ ಬುಕ್ ಆಗಿದ್ದ ಟಿಕೆಟ್ ಅನ್ನು ನಾಲ್ಕು ದಿನಗಳ ಹಿಂದೆಯೇ ರದ್ದು ಮಾಡಿಕೊಂಡಿರುವುದು ತಿಳಿದುಬಂದಿದೆ. ಆದರೆ, ಟಿಕೆಟ್ ರದ್ದು ಮಾಡಿದರೂ ಅದರ ಹಣ ವಾಪಸ್ ಪಡೆಯದೆ ಪ್ರಜ್ವಲ್ ಗೊಂದಲ ಮೂಡಿಸಿದ್ದಾರೆ. ಯಾವುದೇ ಕ್ಷಣದಲ್ಲಾದರೂ ಮತ್ತೆ ಟಿಕೆಟ್ ಖರೀದಿಸಲು ಪ್ರಜ್ವಲ್ ಈ ತಂತ್ರ ಹೂಡಿರಬಹುದು ಎನ್ನಲಾಗಿದೆ.

ಬುಧವಾರ ಬರುವ ವಿಮಾನದ ಟಿಕೆಟ್ ರದ್ದು ಮಾಡಿ ಕಾದು ನೋಡುವ ತಂತ್ರವನ್ನು ಪ್ರಜ್ವಲ್ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿಮಾನ ಟಿಕೆಟ್​ಗೆ ನೀಡಿದ್ದ ಹಣವನ್ನು ಹಿಂಪಡೆಯದೆ ಅದನ್ನೇ ಮುಂದಿನ ಟಿಕೆಟ್​ಗೆ ಮುಂಗಡವಾಗಿ ಇಟ್ಟಿದ್ದಾರೆ ಎನ್ನಲಾಗಿದೆ. 3.5 ಲಕ್ಷ ರೂ. ಮೊತ್ತದ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಅನ್ನು ಪ್ರಜ್ವಲ್ ಕಾಯ್ದಿರಿಸಿದ್ದರು.

ಈಗಾಗಲೇ 2 ಬಾರಿ ಪ್ರಜ್ವಲ್ ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ. ಮೇ 03 ಮತ್ತು 15 ರಂದು ಭಾರತಕ್ಕೆ ಬರಲು ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದಾರೆ. ಹೀಗಾಗಿ ಅಧಿಕಾರಿಗಳು ಮುಂದಿನ ಟಿಕೆಟ್ ಬುಕ್ಕಿಂಗ್ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ.

Shwetha M