ಪ್ರಜ್ವಲ್‌ ರೇವಣ್ಣ ವಿಡಿಯೋ ಪ್ರಕರಣ – ನಿರೀಕ್ಷಣ ಜಾಮೀನು ಮೊರೆ ಹೋದ ತಂದೆ ಮಗ!
ಪೆನ್‌ಡ್ರೈವ್‌ ವಶಕ್ಕೆ ಪಡೆದ ಎಸ್‌ಐಟಿ!

ಪ್ರಜ್ವಲ್‌ ರೇವಣ್ಣ ವಿಡಿಯೋ ಪ್ರಕರಣ – ನಿರೀಕ್ಷಣ ಜಾಮೀನು ಮೊರೆ ಹೋದ ತಂದೆ ಮಗ!ಪೆನ್‌ಡ್ರೈವ್‌ ವಶಕ್ಕೆ ಪಡೆದ ಎಸ್‌ಐಟಿ!

ಪ್ರಜ್ವಲ್‌ ರೇವಣ್ಣ ಹಾಗೂ ಹೆಚ್‌ಡಿ ರೇವಣ್ಣ ಅವರ ಕಾಮ ಪುರಾಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಕ್ಷಣ ಕ್ಷಣಕ್ಕೂ ಸ್ಪೋಟಕ ವಿಚಾರ ಬಯಲಾಗುತ್ತಲೇ ಇದೆ. ಇದೀಗ ಈ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿ ನ್ಯಾಯಾಲಯಕ್ಕೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಹಾಸನದಿಂದ ದೆಹಲಿವರೆಗೂ ರಾಸಲೀಲೆ.. -ಪ್ರಜ್ವಲ್ ವಿಕೃತಿಯೇ ಭಯಾನಕ!

ಈ ಪ್ರಕರಣದ ಸಂಬಂಧ ರೇವಣ್ಣ ಸೋಮವಾರ ಬೆಂಗಳೂರಿನಲ್ಲಿ ವಕೀಲರ ಜತೆ ಸಮಾಲೋಚನೆ ನಡೆಸಿದ್ದು, ಮಂಗಳವಾರ ಅವರು ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಬಹುದು ಎನ್ನಲಾಗಿದೆ. ಇನ್ನು ಜಾಮೀನು ಇತ್ಯರ್ಥ ಬಳಿಕ ಎಸ್‌ಐಟಿ ಮುಂದೆ ಹಾಜರಾಗಲು ವಿದೇಶದಲ್ಲಿರುವ ಸಂಸದ ಪ್ರಜ್ವಲ್‌ ರೇವಣ್ಣ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಪೆನ್‌ಡ್ರೈವ್‌ ವಶಕ್ಕೆ ಪಡೆದ ಎಸ್‌ಐಟಿ!

ಇನ್ನು ಈ ಪ್ರಕರಣದ ಸಂಬಂಧ ವಿಶೇಷ ತನಿಖಾ ತಂಡ ಅಧಿಕಾರಿಗಳು ಒಟ್ಟು 40 ಜಿಬಿಯ ಪೆನ್ ಡ್ರೈವ್‍ಗಳನ್ನು ವಶಕ್ಕೆ ಪಡೆದಿದ್ದಾರೆ. 32 ಜಿಬಿ ಮತ್ತು 8 ಜಿಬಿ ಎರಡು ಪೆನ್ ಡ್ರೈವ್‍ಗಳು ವಶಕ್ಕೆ ಪಡೆದಿರುವ ಅಧಿಕಾರಿಗಳು ಸತ್ಯಾಸತ್ಯತೆ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಈ ಎರಡು ಪೆನ್‍ಡ್ರೈವ್‍ಗಳನ್ನು ಎಫ್‍ಎಸ್‍ಎಲ್‍ಗೆ ರವಾನೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಈ ಮೂಲಕ ತಾಂತ್ರಿಕ ಸಾಕ್ಷ್ಯ ಕಲೆಹಾಕಲು ತಯಾರಿ ನಡೆಸಲಾಗುತ್ತಿದೆ.

Shwetha M