ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ – ರಾಜ್ಯಪಾಲರಿಗೆ ಹೆಚ್‍ಡಿಕೆ, ಜೆಡಿಎಸ್ ನಿಯೋಗ ದೂರು

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ – ರಾಜ್ಯಪಾಲರಿಗೆ ಹೆಚ್‍ಡಿಕೆ, ಜೆಡಿಎಸ್ ನಿಯೋಗ ದೂರು

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್‌ನಲ್ಲಿ ರಾಜಕೀಯ ಜಟಾಪಟಿ ಜೋರಾಗಿದೆ. ವಿಡಿಯೋ ಕೇಸ್‌ ತನಿಖೆಯ ಬಗ್ಗೆಯೇ ದೋಸ್ತಿಗಳು ಅಪಸ್ವರ ಎತ್ತಿದ್ದಾರೆ. ಎಸ್‌ಐಟಿ ತನಿಖೆ ಸರಿಯಾಗಿ ನಡೀತಿಲ್ಲ.. ಎಸ್‌ಐಟಿ ಅಂದ್ರೆ ಸಿದ್ದರಾಮಯ್ಯ, ಡಿಕೆಶಿ ತನಿಖಾ ತಂಡ ಅಂತ ದೋಸ್ತಿಗಳು ಗುಡುಗುತ್ತಿದ್ದಾರೆ. ಇದೀಗ ಹೆಚ್ ಡಿ ಕುಮಾರಸ್ವಾಮಿ ಕೂಡ ಎಸ್‌ಐಟಿ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಇದೀಗ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.

ಇದನ್ನೂ ಓದಿ: ನಾನೇ ಪ್ರೊಡ್ಯೂಸರ್‌.. ನಾನೇ ಡೈರೆಕ್ಟರ್‌.. ನಾನೇ ಕಥಾನಾಯಕ! -ಹೆಚ್‌ಡಿಕೆ ಹೀಗಂದಿದ್ಯಾಕೆ?  

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಸಂಬಂಧ ಕುಮಾರಸ್ವಾಮಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಈ ವೇಳೆ ಹೆಚ್‍ಡಿಕೆಗೆ ಕೆಲ ಜೆಡಿಎಸ್ ಶಾಸಕರು ಹಾಗೂ ಮಾಜಿ ಶಾಸಕರು ಸಾಥ್ ನೀಡಿದ್ದಾರೆ. ಪೆನ್ ಡ್ರೈವ್ ಪ್ರಕರಣದಲ್ಲಿ ಪಾರದರ್ಶಕ ತನಿಖೆ ಆಗಬೇಕು. ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ತಿದೆ ಅಂತಾ ರಾಜ್ಯಪಾಲರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ಕುಮಾರಸ್ವಾಮಿಯವರು ಪೆನ್‍ಡ್ರೈವ್ ಪ್ರಕರಣ ಸಂಬಂಧ ಕಳೆದ ಒಂದು ವಾರದಿಂದ ಆದ ಬೆಳವಣಿಗೆಗಳ ಬಗ್ಗೆ ರಾಜ್ಯಪಾಲರಿಗೆ ವಿವರಣೆ ನೀಡಿದ್ರು. ಇನ್ನು ವಿಡಿಯೋ ಬಿಡುಗಡೆ ಮಾಡಿದ ಪ್ರಮುಖ ಆರೋಪಿ ಬೆಂಗಳೂರಿನಲ್ಲಿದ್ದು, ಅವನಿಗೆ ಸರ್ಕಾರದಿಂದಲೇ ರಾಜ ಮರ್ಯಾದೆ ಸಿಗುತ್ತಿದೆ. ಇದರ ಹಿಂದೆ ಸರ್ಕಾರದ ಪ್ರಭಾವಿ ನಾಯಕರ ಕೈವಾಡ ಇದೆ. ಕೈವಾಡ ಇರೋ ಆಡಿಯೋ ಮಾಧ್ಯಮಗಳಲ್ಲಿ ಬಂದಿದೆ. ಹೀಗಾಗಿ ಎಸ್‍ಐಟಿ ಇಂದ ನಿಷ್ಪಕ್ಷಪಾತವಾಗಿ ತನಿಖೆ ಆಗ್ತಿಲ್ಲ ಎಂದು ರಾಜ್ಯಪಾಲರ ಮುಂದೆ ಹೆಚ್‍ಡಿಕೆ ದೂರಿದ್ದಾರೆ. ಇಷ್ಟು ಮಾತ್ರವಲ್ಲದೇ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಮಧ್ಯಪ್ರವೇಶ ಮಾಡುವಂತೆ ಹೆಚ್ ಡಿಕೆ ರಾಜ್ಯಪಾಲರನ್ನು ಆಗ್ರಹಿಸಿದರು.

Shwetha M