ರಾಕೇಶ್ ಸಿದ್ದರಾಮಯ್ಯ ಸಾವಿನ ರಹಸ್ಯ.. – ಸಿಎಂಗೆ ಹೆಚ್​​ಡಿಕೆ ಪ್ರಶ್ನೆ, ಸಿದ್ದರಾಮಯ್ಯ ತಿರುಗೇಟು

ರಾಕೇಶ್ ಸಿದ್ದರಾಮಯ್ಯ ಸಾವಿನ ರಹಸ್ಯ.. – ಸಿಎಂಗೆ ಹೆಚ್​​ಡಿಕೆ ಪ್ರಶ್ನೆ, ಸಿದ್ದರಾಮಯ್ಯ ತಿರುಗೇಟು

ಮಾಜಿ ಸಿಎಂ ಹೆಚ್‌. ಡಿ ಕುಮಾರಸ್ವಾಮಿ ಹಾಗೂ ಸಿಎಂ ಸಿದ್ದರಾಮಯ್ಯ ನಡುವಿನ ವಾಕ್ಸಮರ ಜೋರಾಗಿ ನಡೆಯುತ್ತಿದೆ. ಪ್ರಜ್ವಲ್‌ ರೇವಣ್ಣ ಕೇಸ್‌ ವಿಚಾರವಾಗಿಯೇ ಇಬ್ಬರು ಪರಸ್ಪರ ಪ್ರತ್ಯಾರೋಪ ಮಾಡುತ್ತಿದ್ದಾರೆ. ಇದೀಗ ಹೆಚ್‌ಡಿಕೆ ಸಂಸದ ಪ್ರಜ್ವಲ್​ ರೇವಣ್ಣ ಅವರನ್ನು ವಿದೇಶಕ್ಕೆ ಕಳುಹಿಸಿದ್ದೇ ಅವರ ತಾತ, ಈಗ ಪತ್ರ ಬರೆದು ಏನು ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದರು. ಇದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ ಇವರ ಮಗ ವಿದೇಶಕ್ಕೆ ಹೋದಾಗ ದುರ್ಘಟನೆ ನಡೆಯಿತು ಅಲ್ವಾ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಎಪಿಎಲ್‌ ಸೀಸನ್ 17 ರ ಆರೆಂಜ್‌ ಕ್ಯಾಪ್ ವಿರಾಟ್‌ ಕೊಹ್ಲಿ ಪಾಲಾಗುತ್ತಾ?

ಈ ಬಗ್ಗೆ ಮಾತನಾಡಿರುವ ಹೆಚ್‌ಡಿಕೆ, ಇವರ ಮಗ ವಿದೇಶಕ್ಕೆ ಹೋದಾಗ ದುರ್ಘಟನೆ ನಡೆಯಿತು ಅಲ್ವಾ? ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ಯಾವ ಕಾರ್ಯಕ್ರಮಕ್ಕೆ ವಿದೇಶಕ್ಕೆ ಹೋಗಿದ್ದರು. ಆಗ ವಿದೇಶಕ್ಕೆ ಹೋಗುವಾಗ ಅನುಮತಿ ಪಡೆದಿದ್ದರಾ? ಇವರ ಮಗನ ಜೊತೆ ಯಾಱರು ಹೋಗಿದ್ದರು, ಎಷ್ಟು ಜನ ಇದ್ದರು. ಅಲ್ಲಿ ನಡೆದ ಘಟನೆ ಬಗ್ಗೆ ಯಾಕೆ ತನಿಖೆ ಮಾಡಲಿಲ್ಲ. ಬೆಳೆದ ಮಕ್ಕಳು ಪ್ರತಿ ವಿಚಾರವನ್ನ ತಂದೆ ತಾಯಿಗೆ ಕೇಳಿ ಮಾಡ್ತಾರಾ? ಎಂದು ಪ್ರಶ್ನೆ ಮಾಡಿದರು.

ಸಿಎಂ ಪುತ್ರ ರಾಕೇಶ್ ಸಿದ್ದರಾಮಯ್ಯ ಸಾವಿನ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ನನ್ನ ಮಗ ಸತ್ತು ಹೋಗಿ 8 ವರ್ಷಗಳೇ ಕಳೆದಿದೆ. ಈಗ ಆ ವಿಚಾರವನ್ನು ಯಾವುದಕ್ಕೋ ಲಿಂಕ್ ಮಾಡಿ ಮಾತಾಡುವುದು ಮೂರ್ಖತನ ಎಂದಿದ್ದಾರೆ.

ಕುಮಾರಸ್ವಾಮಿ ಹೇಳಿಕೆಗೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಅವರ ಅಣ್ಣನ ಮಗ ರೇಪ್ ಮಾಡಿ ಓಡಿ ಹೋಗಿರುವುದು. ಅದಕ್ಕೂ 2016ರಲ್ಲಿ ಸತ್ತು ಹೋದ ರಾಕೇಶ್‌ ಸಾವಿನ ವಿಚಾರಕ್ಕೂ ಏನು ಸಂಬಂಧ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಕೌಂಟರ್ ಕೊಟ್ಟಿದ್ದಾರೆ. ರೇಪ್‌ಗಿಂತ ಅದರ ವಿಡಿಯೋನ ಹಂಚಿದ್ದು ದೊಡ್ಡ ಅಪರಾಧ ಎಂದು ಹೆಚ್‌ಡಿಕೆ ಹೇಳಿದ್ದಾರೆ. ರೇಪ್‌ಗಿಂತ ವಿಡಿಯೋ ಹಂಚಿದ್ದು ದೊಡ್ಡ ಅಪರಾಧ ಅಂತ ಯಾವ ಕಾನೂನುನಿಲ್ಲಿದೆ ಹೇಳಿ. ಕುಮಾರಸ್ವಾಮಿ ಏನಾದರೂ ಸೆಕ್ಷನ್ ಹೇಳಿದ್ದರಾ. ಅದು ಭಾರತೀಯ ದಂಡ ಸಂಹಿತೆಯಲ್ಲಿದೆಯಾ. ಅಥವಾ ಇವರೇ ಬರೆದುಕೊಂಡ ಕಾನೂನಿನಲ್ಲಿ ಇದೆಯಾ ಹೇಳಿ ಎಂದರು.

ಇನ್ನು, ನಾನು ಹಾಗಂತ ಅಶ್ಲೀಲ ವಿಡಿಯೋ ವಿತರಣೆಯನ್ನು ಸಮರ್ಥನೆ ಮಾಡುತ್ತಿಲ್ಲ. ಆದರೆ ರೇಪ್‌ಗಿಂತ ವಿಡಿಯೋ ಹಂಚಿದ್ದು ಮಹಾ ಅಫರಾದ ಎನ್ನುವುದು ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

Shwetha M