ಜೀವಾವಧಿ ಶಿಕ್ಷೆ ಬೆನ್ನಲ್ಲೇ ಮಾನಸಿಕವಾಗಿ ಕುಗ್ಗಿದ ಪ್ರಜ್ವಲ್ ರೇವಣ್ಣ! – ಜೈಲಿನಲ್ಲೇ ಕೌನ್ಸಿಲಿಂಗ್!

ಮೈಸೂರಿನ ಕೆ.ಆರ್ .ನಗರದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ಬೆಂಗಳೂರಿನ ಜನಪ್ರತಿನಿಧಿ ನ್ಯಾಯಾಲಯವು ತೀರ್ಪು ನೀಡಿದೆ. ಜೀವಾವಧಿ ಶಿಕ್ಷೆಗೆ ಪ್ರಜ್ವಲ್ ಒಳಗಾಗಿರುವ ಈಗ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕಾನೂನಿನ ಮುಂದೆ ಎಲ್ಲರೂ ಸಮಾನರು – ದರ್ಶನ್ ಬೇಲ್ ಕ್ಯಾನ್ಸಲ್ ಆಗುತ್ತಿದ್ದಂತೆ ರಮ್ಯಾ ಪೋಸ್ಟ್
ಹೌದು, ಅತ್ಯಾಚಾರ ಕೇಸ್‌ನಲ್ಲಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆಯನ್ನ ಕೋರ್ಟ್ ವಿಧಿಸಿದೆ. ಇದೀಗ ಪ್ರಜ್ವಲ್ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಯಾರ ಜೊತೆಗೆ ಮಾತಾಡುತ್ತಿಲ್ಲ. ಸರಿಯಾಗಿ ಊಟ, ತಿಂಡಿ ಕೂಡ ಮಾಡುತ್ತಿಲ್ಲ. ಹಾಗಾಗಿ, ಎರಡು ದಿನಗಳಿಗೊಮ್ಮೆ ಜೈಲಿನಲ್ಲೇ ಅಲ್ಲಿನ ವೈದ್ಯರು ಕೌನ್ಸಿಲಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಜೀವಾವಧಿ ಶಿಕ್ಷೆಯೇ ಅಂತಿಮವಲ್ಲ, ಹೈಕೋರ್ಟ್ ಇದೆ, ಸುಪ್ರೀಂ ಕೋರ್ಟ್ ಇದೆ, ಪೆರೋಲ್, ಸನ್ನಡತೆ ಅಧಾರದ ಮೇಲೆ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಬಹುದು ಅಂತಾ ಅವರಿಗೆ ಇರುವ ಅವಕಾಶಗಳ ಬಗ್ಗೆ ತಿಳಿ ಹೇಳಿ ಕೌನ್ಸಿಲಿಂಗ್ ಮಾಡಲಾಗ್ತಿದೆ. ಬಿಇ ವಿದ್ಯಾಭ್ಯಾಸ ಮಾಡಿರುವ ಪ್ರಜ್ವಲ್‌ಗೆ ಬಯಸಿದ ಕೆಲಸ ನೀಡಲಾಗುತ್ತೆ.
ಪ್ರಜ್ವಲ್ಗೆ ಇದೀಗ ಐದು ಕೆಲಸಗಳ ಅವಕಾಶ
1.ಕೃಷಿ ಬಗ್ಗೆ ಆಸಕ್ತಿ ಇದ್ದಲ್ಲಿ ವ್ಯವಸಾಯದ ಕೆಲಸಕ್ಕೆ ಬಳಕೆ
2.ಲೈಬ್ರರಿ ಇದ್ದು, ಲೈಬ್ರರಿ ನೋಡಿಕೊಳ್ಳಲು ಬಯಸಿದರೆ ನಿಯೋಜನೆ
3.ಬೇಕರಿ ಹಾಗೂ ಗಾರ್ಮೆಂಟ್ಸ್ ಇದ್ದು, ಮೆಂಟೆನೆನ್ಸ್ ಮಾಡಲು ಒಪ್ಪಿದರೆ ಅವಕಾಶ
4.ಕೈದಿಗಳಿಗೆ ಪಾಠ ಹೇಳಿಕೊಡಲು ಒಪ್ಪಿದರೆ ನಿಯೋಜನೆ
5.ಕಾರಾಗೃಹ ದಾಖಲೆಗಳ ಇಲಾಖೆಯಲ್ಲಿ ಕೆಲಸ ಮಾಡಲು ಒಪ್ಪಿದರೆ ನಿಯೋಜನೆ
ಬಹುತೇಕವಾಗಿ ಲೈಬ್ರರಿಯನ್ನ ನೋಡಿಕೊಳ್ಳುವ ಬಗ್ಗೆ ಜೈಲಾಧಿಕಾರಿಗಳು ಚರ್ಚೆಯಾಯಾಗುತ್ತಿದೆ ಎನ್ನಲಾಗಿದೆ.

ನೋಡಿರಿ

