ವಿದೇಶದಲ್ಲಿ ಪ್ರಜ್ವಲ್‌ ರೇವಣ್ಣ ಗೇಮ್‌ ಪ್ಲ್ಯಾನ್‌! – ಬ್ಲೂಕಾರ್ನರ್‌ ತಪ್ಪಿಸಲು ಶೆನ್‌ಜೆನ್‌ ಮೊರೆ?

ವಿದೇಶದಲ್ಲಿ ಪ್ರಜ್ವಲ್‌ ರೇವಣ್ಣ ಗೇಮ್‌ ಪ್ಲ್ಯಾನ್‌! – ಬ್ಲೂಕಾರ್ನರ್‌ ತಪ್ಪಿಸಲು ಶೆನ್‌ಜೆನ್‌ ಮೊರೆ?

ಹಾಸನ ಪೆನ್‌ಡ್ರೈವ್‌ ಕೇಸ್‌ ಬೆಳಕಿಗೆ ಬರುತ್ತಿದ್ದಂತೆ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಎಸ್ಕೇಪ್‌ ಆಗಿದ್ದಾರೆ. ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಪ್ರಜ್ವಲ್‌ ರೇವಣ್ಣನನ್ನು ಮತ್ತೆ ಭಾರತಕ್ಕೆ ತರೆತರಲು ನಾನಾ ಕಸರತ್ತು ನಡೆಸಲಾಗುತ್ತಿದೆ. ಆದರೆ ಪ್ರಜ್ವಲ್‌ ಸುಳಿವು ಮಾತ್ರ ಸಿಗುತ್ತಿಲ್ಲ. ಪ್ರಜ್ವಲ್‌ ರೇವಣ್ಣ ಕೇಸ್‌ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ಮತ್ತೆ ಹಿನ್ನೆಡೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಗಳಿಗೆ ಕಳುಹಿಸಿದ ಬ್ಲೂಕಾರ್ನರ್‌ ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ: ರಾಜಸ್ಥಾನಕ್ಕೆ ಹೀನಾಯ ಸೋಲು – 36 ರನ್‌ಗಳ ಜಯ, ಫೈನಲಿಗೆ ಹೈದರಾಬಾದ್‌

ಹೌದು, ಪ್ರಜ್ವಲ್‌ ರೇವಣ್ಣ ಸದ್ಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಪ್ರಜ್ವಲ್ ಪತ್ತೆಗೆ ಎರಡು ವಾರಗಳ ಹಿಂದೆ ಇಂಟರ್‌ಪೋಲ್ ಮೂಲಕ ಎಸ್‌ಐಟಿ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿತ್ತು. ಆದರೆ ಇದು ವರೆಗೆ ಇಂಟರ್‌ಪೋಲ್ ವ್ಯಾಪ್ತಿಯ 197 ದೇಶಗಳಿಂದ ಈ ನೋಟಿಸ್‌ಗೆ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿಯಾಗಿದೆ.

ಯೂರೋಪ್ ಖಂಡದಲ್ಲಿ ಬ್ರಿಟನ್ ಹಾಗೂ ಸ್ವಿಜರ್ಲೆಂಡ್ ಹೊರತು ಪಡಿಸಿ ಜರ್ಮನಿ ಒಳಗೊಂಡಂತೆ 21 ದೇಶಗಳಿಗೆ ಪೆನ್‌ಜೆನ್ ವೀಸಾ ಬಳಸಿ ಪ್ರಯಾಣಿಸಬಹುದು. ಈ ಅವಕಾಶ ವನ್ನು ಬಳಸಿಕೊಂಡು ಆ ದೇಶಗಳಲ್ಲಿ ಪ್ರಜ್ವಲ್ ಅಡ್ಡಾಡುತ್ತಿರುವ ಸಾಧ್ಯತೆಗಳಿವೆ. ಒಂದು ವೇಳೆ ಅವರು ಶೆನ್‌ಜೆನ್ ವೀಸಾ ಬಿಟ್ಟು ರಾಜತಾಂತ್ರಿಕ ಪಾಸ್‌ಪೋರ್ಟ್ ಉಪಯೋಗಿಸಿದರೆ ತಕ್ಷಣವೇ ಮಾಹಿತಿ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

Shwetha M