ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಸಂಕಷ್ಟ – ಪಾಸ್‌ಪೋರ್ಟ್ ರದ್ದಾಗುತ್ತಾ?
ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣನ ಪತ್ತೆಗಾಗಿ ಎಸ್‌ಐಟಿ ಅಧಿಕಾರಿಗಳು ದಿನವಿಡೀ ತನಿಖೆ ನಡೆಸುತ್ತಿದ್ದಾರೆ. ಇಂದು ಬರ್ತಾರೆ, ನಾಳೆ ಬರ್ತಾರೆ ಅಂತಾ ಕಾದಿದ್ದೇ ಬಂತು. ಆದರೆ ಪ್ರಜ್ವಲ್ ರೇವಣ್ಣ ಸುಳಿವು ಮಾತ್ರ ಸಿಗುತ್ತಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಅರೆಸ್ಟ್ ವಾರೆಂಟ್ ಅನ್ನುಕೂಡ ಪಡೆದಿದ್ದಾಗಿದೆ. ಈಗ ಎಸ್‍ಐಟಿ ಪಾಸ್‍ಪೋರ್ಟ್ ರದ್ದು ಮಾಡಲು ಚಿಂತನೆ ನಡೆಸಿದೆ.
ಇದನ್ನೂ ಓದಿ: ಹಳದಿ ಮಾರ್ಗದಲ್ಲಿ ಪ್ರಾಯೋಗಿಕ ವಿದ್ಯುದೀಕರಣ ಕಾಮಗಾರಿ – ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ನೀಡಿದ ಬಿಎಂಆರ್‌ಸಿಎಲ್
ಹೌದು, ಈಗಾಗಲೇ ಎಸ್‍ಐಟಿ ಪಾಸ್‍ಪೋರ್ಟ್ ರದ್ದಿಗೆ ಕೇಂದ್ರ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದೆ. ತತಕ್ಷಣವೇ ಪ್ರಜ್ವಲ್ ಹೊಂದಿರೋ ರಾಜತಾಂತ್ರಿಕ ಪಾಸ್‍ಪೋರ್ಟ್ ರದ್ದು ಮಾಡುವಂತೆ ಮನವಿ ಮಾಡಿದೆ. ಸೋಮವಾರ ಇಡೀ ದಿನ ಕಾನೂನು ತಜ್ಞರ ಜೊತೆಯಲ್ಲಿ ಚರ್ಚೆ ನಡೆಸಿದ ಎಸ್‍ಐಟಿ ಅಧಿಕಾರಿಗಳು ರಾಜತಾಂತ್ರಿಕ ಪಾಸ್‍ಪೋರ್ಟ್ ಅನ್ನು ಹೇಗೆ ರದ್ದು ಮಾಡೋದಕ್ಕೆ ಪತ್ರ ಬರೆಯಬೇಕೆಂದು ಚರ್ಚೆ ನಡೆಸಿದ್ರು. ಬಳಿಕ ಪ್ರಜ್ವಲ್ ವಿರುದ್ಧ ಹೊರಡಿಸಿರೋ ಕೋರ್ಟ್ ಹೊರಡಿಸಿರೋ ಆದೇಶದ ಮಾಹಿತಿ ಲುಕೌಟ್ ನೋಟಿಸ್, ಬ್ಲೂಕಾರ್ನರ್ ನೋಟಿಸ್ ಜೊತೆಯಲ್ಲಿ ಪ್ರಜ್ವಲ್ ವಿರುದ್ಧ ದಾಖಲಾಗಿರೋ ದೂರು ಎಲ್ಲ ಮಾಹಿತಿಯನ್ನು ಲಗತ್ತಿಸಿದೆ.
ಎಸ್‌ಐಟಿ ಮನವಿಗೆ ಪ್ರಜ್ವಲ್ ಅವರ ಪಾಸ್‌ಪೋರ್ಟ್ ಅನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿದರೆ ತಕ್ಷಣವೇ ಅವರು ಸ್ವದೇಶಕ್ಕೆ ಮರಳಬೇಕಾಗುತ್ತದೆ. ಇಲ್ಲದೆ ಹೋದರೆ ವಿದೇಶದಲ್ಲಿ ನಿರಾಶ್ರಿತ ಎಂದು ಹೇಳಿ ಆಶ್ರಯ ಪಡೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣಗೆ ಕಾನೂನು ಚೌಕಟ್ಟಿನಲ್ಲಿ ಎಸ್‌ಐಟಿ ಹುರಿ ಬಿಗಿಗೊಳಿಸಿದ್ದು, ಸಂಸದಗೆ ಮತ್ತಷ್ಟು ಸಂಕಷ್ಟ ಸೃಷ್ಟಿಯಾಗಿದೆ. ಸದ್ಯ ಎಸ್‍ಐಟಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್‍ಗಾಗಿ ಕಾದು ಕುಳಿತಿದ್ದಾರೆ. ಈ ಮೂಲಕ ಪ್ರಜ್ವಲ್ ವಾಪಸ್ಸಾದ್ರೆ ಏರ್‌ಪೋರ್ಟ್‌ನಲ್ಲೇ ಬಂಧಿಸಲು ಸಿದ್ಧತೆ ಬಡೆಸಲಾಗಿದೆ.