ಇಂದಿನಿಂದ ಪ್ರಜಾಸೇವೆ ಅಭಿಯಾನ ಆರಂಭ – ಇದರಿಂದ ಜನರಿಗೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಇಂದಿನಿಂದ ಪ್ರಜಾಸೇವೆ ಅಭಿಯಾನ ಆರಂಭ –  ಇದರಿಂದ ಜನರಿಗೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಜನರು ತಮ್ಮ ಸಣ್ಣಪುಟ್ಟ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಪದೇಪದೇ ಅಲೆದಾಡುವುದನ್ನು ತಪ್ಪಿಸಿ, ಸರ್ಕಾರದ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ‘ಪ್ರಜಾಸೇವೆ’ ಅಭಿಯಾನವನ್ನು ಆರಂಭಿಸಲಾಗಿದೆ.

ಈ ಅಭಿಯಾನದ ಮೂಲಕ ಸಾರ್ವಜನಿಕರ ಅಹವಾಲುಗಳನ್ನು ನೇರವಾಗಿ ಸ್ವೀಕರಿಸಿ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಮೂಲಕ ಸಾಧ್ಯವಾದಷ್ಟು ತ್ವರಿತವಾಗಿ ಪರಿಹರಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ. ವಿವಿಧ ಸರ್ಕಾರಿ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದರ ಜೊತೆಗೆ, ಅರ್ಜಿ ಸಲ್ಲಿಕೆ ಹಾಗೂ ಸಮಸ್ಯೆಗಳ ಪರಿಹಾರಕ್ಕೂ ನೆರವು ನೀಡುವ ಉದ್ದೇಶ ಹೊಂದಿದೆ.

ಇದನ್ನೂ ಓದಿ: ಅಭಿಮಾನಿಗಳಿಗಾಗಿ ಮತ್ತೆ ಬಂದ ಅಭಿಮನ್ಯು – ದಸರಾಗೆ ನಿಶಾನೆ ಆನೆಯಾಗಿ ಅಭಿಮನ್ಯು ಆಯ್ಕೆ

ಪ್ರಜಾಸೇವಾ ವ್ಯವಸ್ಥೆಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ದಾಖಲಿಸಿ, ಅವುಗಳ ಪ್ರಗತಿಯನ್ನು ಪರಿಶೀಲಿಸುವ ವ್ಯವಸ್ಥೆಯೂ ಇರಲಿದೆ. ಇದರಿಂದ ಯಾವ ಸಮಸ್ಯೆ ಯಾವ ಇಲಾಖೆಗೆ ಸೇರಿದೆ, ಅದರ ಪರಿಹಾರಕ್ಕೆ ಕೈಗೊಂಡ ಕ್ರಮವೇನು ಎಂಬುದನ್ನು ಗಮನಿಸಲು ಸಾಧ್ಯವಾಗುತ್ತದೆ. ಮೂರು ಹಂತದ ಪರಿಶೀಲನೆ ಮತ್ತು ಮೇಲ್ಮನವಿ ವ್ಯವಸ್ಥೆಯ ಮೂಲಕ ಸಮಸ್ಯೆಗಳಿಗೆ ಹೊಣೆಗಾರಿಕೆಯಿಂದ ಸ್ಪಂದಿಸುವ ಉದ್ದೇಶವೂ ಇದೆ.

ಪ್ರತಿ ಶನಿವಾರ ಪ್ರಜಾಸೇವಾ ಅಭಿಯಾನ ನಡೆಸುವ ಯೋಜನೆ ಇದ್ದು, ಜನರು ತಮ್ಮ ಅಹವಾಲುಗಳನ್ನು ಅಧಿಕಾರಿಗಳ ಮುಂದೆ ನೇರವಾಗಿ ಇಡಲು ಅವಕಾಶ ಸಿಗಲಿದೆ.

ಒಟ್ಟಿನಲ್ಲಿ, ಜನರು ಸರ್ಕಾರದ ಕಚೇರಿಗಳ ಹಿಂದೆ ಓಡುವ ಬದಲು, ಸರ್ಕಾರವೇ ಜನರ ಬಳಿಗೆ ಹೋಗಿ ಸೇವೆ ನೀಡಬೇಕು ಎಂಬ ಪರಿಕಲ್ಪನೆಯೇ ಪ್ರಜಾಸೇವೆಯ ಮುಖ್ಯ ಉದ್ದೇಶವಾಗಿದೆ.

Kishor KV

Leave a Reply

Your email address will not be published. Required fields are marked *