ಚಂದ್ರಯಾನ -3ರ ಮತ್ತೊಂದು ಮಹತ್ವದ ಘಟ್ಟವೂ ಯಶಸ್ವಿ – ವಿಕ್ರಮ್ ಲ್ಯಾಂಡರ್ ನಿಂದ ಹೊರಬಂದ ‘ ಪ್ರಗ್ಯಾನ್ ‘ ರೋವರ್

ಚಂದ್ರಯಾನ -3ರ ಮತ್ತೊಂದು ಮಹತ್ವದ ಘಟ್ಟವೂ ಯಶಸ್ವಿ – ವಿಕ್ರಮ್ ಲ್ಯಾಂಡರ್ ನಿಂದ ಹೊರಬಂದ ‘ ಪ್ರಗ್ಯಾನ್ ‘ ರೋವರ್

ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ಮೇಲ್ಮೈಗೆ ಇಳಿಯುವಲ್ಲಿ ಯಶಸ್ವಿಯಾಗಿದೆ. ಚಂದ್ರನಲ್ಲಿ ಕ್ಷೇಮವಾಗಿ ಇಳಿದಿರುವ ಚಂದ್ರಯಾನ -3ರ ವಿಕ್ರಮ್ ಲ್ಯಾಂಡರ್ ನಲ್ಲಿದ್ದ ಪ್ರಗ್ಯಾನ್ ರೋವರ್ ಆ. 24ರ ಬೆಳಗಿನ ಜಾವ ಲ್ಯಾಂಡರ್ ನಿಂದ ಹೊರಬಂದು ಚಂದ್ರನ ನೆಲದ ಮೇಲೆ ಹರಿದಾಡಲು ಶುರು ಮಾಡಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿನ ಅಂಶವಿದೆಯೇ ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿಯೇ ಚಂದ್ರಯಾನ – 3 ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಚಂದ್ರನ ಮೇಲೆ ‘ಪ್ರಗ್ಯಾನ್ ರೋವರ್’ ಜಲಪರೀಕ್ಷೆ ಮಾಡಲಿದೆ. ಈ ರೋವರ್ ಚಂದ್ರನ ನೆಲದಲ್ಲಿ ಇರಬಹುದಾದ ತೇವಾಂಶದ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಅದನ್ನು ಇಸ್ರೋ ವಿಜ್ಞಾನಿಗಳಿಗೆ ತಲುಪಿಸುತ್ತದೆ. ಚಂದ್ರನ ದಕ್ಷಿಣ ಧ್ರುವದ ನೆಲದ ಕಣಗಳಲ್ಲಿ ಯಾವ ಅಂಶಗಳಿವೆ. ಅಲ್ಲಿನ ಮಣ್ಣಿನಲ್ಲಿರುವ ರಾಸಾಯನಿಕ ಅಂಶಗಳ್ಯಾವುವುದ ಎಂಬ ಮಾಹಿತಿಯನ್ನು ಕಲೆ ಹಾಕಲಿದೆ. ಅಲ್ಲಿನ ಮಣ್ಣಿನಲ್ಲಿರುವ ಸಿಲಿಕಾನ್, ಮೆಗ್ನೇಷಿಯಂ, ಕ್ಯಾಲ್ಸಿಯಂ, ಪೊಟ್ಯಾಷಿಯಂ ಹಾಗೂ ಕಬ್ಬಿಣ ಅಂಶಗಳನ್ನು ಪತ್ತೆ ಮಾಡುವ ಸಾಮರ್ಥ್ಯವನ್ನು ರೋವರ್ ಹೊಂದಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಬಂಪರ್‌ ಗಿಫ್ಟ್‌! – ಖರೀದಿಸಿದ ಸಾಮಗ್ರಿಗೆ ಬಿಲ್ ಪಡೆದರೆ ಒಂದು ಕೋಟಿವರೆಗೆ ಬಹುಮಾನ!

ಇನ್ನು ರೋವರ್ ಇಷ್ಟು ಮಾತ್ರವಲ್ಲದೆ, ಚಂದ್ರನಲ್ಲಿರುವ ಹವಾಮಾನವನ್ನೂ ಸೂಕ್ಷ್ಮವಾಗಿ ಪರೀಕ್ಷೆ ಮಾಡುತ್ತದೆ. ಅದರಲ್ಲಿ ಆಲ್ಫಾ ಪಾರ್ಟಿಕಲ್ ಎಕ್ಸ್ – ರೇ ಸ್ಪೆಕ್ಟ್ರೋಮೀಟರ್ ಎಂಬ ಪುಟ್ಟ ಯಂತ್ರವನ್ನು ಅಳವಡಿಸಲಾಗಿದೆ. ಅದು ಮಣ್ಣಿನಲ್ಲಿರುವ ಹಾಗೂ ಚಂದ್ರನ ದಕ್ಷಿಣದ ಧ್ರುವದ ವಾತಾವರಣದಲ್ಲಿರುವ ರಾಸಾಯನಿಕ ಅಂಶಗಳನ್ನು ಪರೀಕ್ಷೆ ಮಾಡುತ್ತದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಬುಧವಾರ ಸಂಜೆ ಇಳಿದಿರುವ ವಿಕ್ರಮ್ ಲ್ಯಾಂಡರ್ ಸುಮಾರು 6.5 ಅಡಿ ಎತ್ತರವಿದ್ದು, ಸುಮಾರು 1,700 ಕೆಜಿ ತೂಕ ಹೊಂದಿದೆ. ಅದರೊಳಗಿನಿಂದ ಚಂದ್ರನ ಅಂಗಳಕ್ಕೆ ಜಿಗಿದಿರುವ ರೋವರ್, 2.8 ಅಡಿ ಎತ್ತರವಿದೆ. ನೋಡಲು ಆಯತಾಕಾರದಲ್ಲಿರುವ ಇದು 2.5 ಅಡಿ ಉದ್ದ, 3 ಅಡಿ ಅಗಲವಿರುವ ಇದಕ್ಕೆ 6 ಚಕ್ರಗಳನ್ನು ಜೋಡಿಸಲಾಗಿದೆ. ‘ವಾಮನ’ ಸ್ವರೂಪಿಯಾದ ಈ ಕುಬ್ಜ ಯಂತ್ರವೇ ಈಗ ಚಂದ್ರಯಾನ – 3ರ ಧ್ಯೇಯೋದ್ದೇಶಗಳನ್ನು ಈಡೇರಿಸುವ ಸಾಧನವಾಗಿದೆ.

suddiyaana