‘ಒಳ್ಳೇದು ಮಾಡಿದ್ದರೆ ನಾನು ಇಲ್ಲೇಕೆ ಇರುತ್ತಿದ್ದೆ’ – ಡಾ.ಕೆ ಸುಧಾಕರ್​ಗೆ ಪ್ರದೀಪ್ ಈಶ್ವರ್ ಟಾಂಗ್!

‘ಒಳ್ಳೇದು ಮಾಡಿದ್ದರೆ ನಾನು ಇಲ್ಲೇಕೆ ಇರುತ್ತಿದ್ದೆ’ – ಡಾ.ಕೆ ಸುಧಾಕರ್​ಗೆ ಪ್ರದೀಪ್ ಈಶ್ವರ್ ಟಾಂಗ್!

ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಹೆಚ್ಚು ಸದ್ದು ಮಾಡುತ್ತಿರುವ ಶಾಸಕ ಪ್ರದೀಪ್ ಈಶ್ವರ್. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಡಾ.ಕೆ ಸುಧಾಕರ್ ರನ್ನ ಸೋಲಿಸಿ ಇದೇ ಮೊದಲ ಬಾರಿಗೆ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇವತ್ತು ವಿಧಾನಸಭೆಗೆ ಆಗಮಿಸಿದ್ದ ಪ್ರದೀಪ್ ಈಶ್ವರ್ ಮಾಜಿ ಸಚಿವ ಡಾ.ಕೆ ಸುಧಾಕರ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟದ್ದಾರೆ.

ವಿಧಾನಸೌಧದ ಬಳಿ ಮಾತನಾಡಿದ ಪ್ರದೀಪ್ ಈಶ್ವರ್, ನನ್ನಂತ ಅನಾಥ ಹುಡುಗನಿಗೆ ಟಿಕೆಟ್ ಕೊಟ್ಟು ವಿಧಾನಸೌಧಕ್ಕೆ ಬರುವಂತೆ ಮಾಡಿದೆ ಅಂದ್ರೆ, ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯಕ್ಕೂ ಐಡಿಯಾಲಾಜಿಗೆ ತಂದ ಗೆಲುವು ಇದು. ನಮ್ಮ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಒಳ್ಳೆ ಕೆಲಸ ಮಾಡಿದ್ರೆ ಅಭಿಮಾನ ಸಿಗೋದು. ಹಗಲು ದರೋಡೆ ಮಾಡುದ್ರೆ ಎಲ್ಲಿ ಸಿಗುತ್ತೆ. ಸ್ವಲ್ಪ ಒಳ್ಳೆದು ಮಾಡಿದ್ರೆ ನಾನು ಇಲ್ಲೇಕೆ ಇರ್ತಿದ್ದೆ ಎಂದು ಪರೋಕ್ಷವಾಗಿ ಡಾ. ಕೆ ಸುಧಾಕರ್ ಅವರ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ : ಸ್ವಲ್ಪ ಬಿಗಿಯಾಗಿರಿ ಎಂದು ಎಂ.ಬಿ ಪಾಟೀಲ್​ಗೆ ವಾರ್ನಿಂಗ್ – ಡಿ.ಕೆ ಸುರೇಶ್ ನಡೆಗೆ ಶಾಸಕರು, ಗನ್ ಮ್ಯಾನ್ ಗಳು ಗಾಬರಿ!

ಇದೇ ವೇಳೆ ಮಾತನಾಡಿದ ಪ್ರದೀಪ್ ಚಿಕ್ಕಬಳ್ಳಾಪುರ ಕ್ಷೇತ್ರವನ್ನ ಮಾದರಿ ಕ್ಷೇತ್ರ ಮಾಡೋದಾಗಿ ಹೇಳಿದ್ದಾರೆ. ನನ್ನ ಕ್ಷೇತ್ರದಲ್ಲಿ 14 ಸರ್ಕಾರಿ ಶಾಲೆಗಳಿವೆ. 9 ನೇ ಕ್ಲಾಸ್ ನಿಂದ ನೀಟ್ ಮತ್ತೆ ಐಐಟಿ ಫೌಂಡೇಶನ್ ಸರ್ಕಾರಿ ಶಾಲೆಯಲ್ಲಿ ಶುರುಮಾಡ್ತಿನಿ. ಈಗ 9 ನೇ ತರಗತಿಯಲ್ಲಿ ಸಾವಿರ ಮಕ್ಕಳಿದ್ದಾರೆ ಎಂದರು. ಇದೇ ವೇಳೆ, ನಾನು ದ್ವೇಷ ರಾಜಕಾರಣ ಮಾಡುವುದಿಲ್ಲ. ನಮ್ಮ ಸರ್ಕಾರ ಯಾವ ಸ್ಟ್ಯಾಂಡ್ ತಗೆದುಕೊಳ್ಳಿತ್ತೋ ಗೊತ್ತಿಲ್ಲ. ನನ್ನ ಮೇಲೆ 20 ಕೇಸ್ ಹಾಕಿದ್ದಾರೆ. ಅವರಾಗೆ ಅವರು ಹಾಕಿಸಿಕೊಂಡರೆ ನಾನು ಜವಾಬ್ದಾರನಲ್ಲ. ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ 9 ಗಂಟೆ, ಸಂಜೆ 6ರಿಂದ 9 ಗಂಟೆವರೆಗೆ ಮನೆ ಮನೆಗೆ ಹೋಗ್ತಿನಿ ಎಂದರು. ಹಾಗಂತ ಇದು ಆರಂಭದಲ್ಲಿ ಮಾತ್ರ ಅಲ್ಲ, ಮುಂದಿನ ಚುನಾವಣೆ ಅಂದ್ರೆ 5 ವರ್ಷಗಳವರೆಗೂ ಮನೆ ಮನೆಗೂ ಹೋಗಿ ಅವರ ಕಷ್ಟ ಆಲಿಸುತ್ತೇನೆ. ಮುಂದಿನ ಚುನಾವಣೆಗೆ ನೀತಿ ಸಂಹಿತೆ ಜಾರಿಯಾದ ಮೇಲೆ ಮತ ಕೇಳಲು ಹೋಗಲ್ಲ. ನನ್ನ ಕೆಲಸ ಇಷ್ಟವಾದರೆ ಜನರೇ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

ಈಗಾಗಲೇ ಶಾಸಕರಾಗಿ ಆಯ್ಕೆಯಾದ ಮೇಲೆ ಪ್ರತಿದಿನ ಕ್ಷೇತ್ರದ ಹಳ್ಳಿ ಹಳ್ಳಿಗೂ ತೆರಳಿ ಪ್ರತೀ ಮನೆಗೂ ಭೇಟಿ ನೀಡಿ ಜನರ ಸಮಸ್ಯೆಗಳನ್ನ ಆಲಿಸುತ್ತಿದ್ದಾರೆ. ಈ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ.

suddiyaana