ಕೈ ತುತ್ತು ಕೊಟ್ಟು ಬೆಳೆಸಿದ ಅಮ್ಮನೂ ಉಳೀಲಿಲ್ಲ – ಸರ್ಕಾರ ರಚನೆ ದಿನವೇ ಪ್ರದೀಪ್ ಈಶ್ವರ್ ಗೆ ಆಘಾತ!

ಕೈ ತುತ್ತು ಕೊಟ್ಟು ಬೆಳೆಸಿದ ಅಮ್ಮನೂ ಉಳೀಲಿಲ್ಲ – ಸರ್ಕಾರ ರಚನೆ ದಿನವೇ ಪ್ರದೀಪ್ ಈಶ್ವರ್ ಗೆ ಆಘಾತ!

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಹೆಚ್ಚು ಸದ್ದು ಮಾಡುತ್ತಿರುವ ಕ್ಷೆತ್ರ ಚಿಕ್ಕಬಳ್ಳಾಪುರ. ಡಾ.ಕೆ ಸುಧಾಕರ್ ರನ್ನ ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಪ್ರದೀಪ್ ಈಶ್ವರ್ ಭಾರೀ ಹಲ್ ಚಲ್ ಸೃಷ್ಟಿಸುತ್ತಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಾ ಜನರ ಕಷ್ಟಗಳನ್ನ ಆಲಿಸುತ್ತಿದ್ದಾರೆ. ಶನಿವಾರ ಕಾಂಗ್ರೆಸ್ ಪಕ್ಷದ ಸಿಎಂ ಹಾಗೂ ಡಿಸಿಎಂ ಪಟ್ಟಾಭಿಷೇಕ ಅಂತಾ ಭಾರೀ ಖುಷಿಯಲ್ಲಿದ್ರು. ಆದರೆ ಈ ಖುಷಿ ಹೆಚ್ಚು ಹೊತ್ತು ಉಳಿಯಲೇ ಇಲ್ಲ.

ಪ್ರದೀಪ್ ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾಗ ಪ್ರದೀಪ್ ಹಾಗೂ ಆತನ ತಮ್ಮ ಚೇತನ್ ನನ್ನು ಸಂಬಂಧಿ ರತ್ನಮ್ಮನವರೇ ಸಾಕಿ ಸಲುಹಿ ದೊಡ್ಡವರನ್ನಾಗಿ ಮಾಡಿದ್ರು. ಕಡು ಬಡತನದಲ್ಲಿ ಬೆಳೆದಿದ್ದ ಪ್ರದೀಪ್ ಸದ್ಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕನಾದ ಸಂತೋಷದಲ್ಲಿ ಇದ್ರು. ಆದರೆ ಇವತ್ತು ಸಾಕುತಾಯಿ 72 ವರ್ಷದ ರತ್ನಮ್ಮ ವಿಧಿವಶರಾಗಿದ್ದಾರೆ. 72 ವರ್ಷ ವಯಸ್ಸಿನ ರತ್ನಮ್ಮ ಪೇರೇಸಂದ್ರ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದಾರೆ. ರತ್ನಮ್ಮ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಇದನ್ನೂ ಓದಿ :  ಸಿಎಂ ಪದಗ್ರಹಣಕ್ಕೆ ಬಂದು ಕಾಲು ಉಳುಕಿಸಿಕೊಂಡ ಶಿವಣ್ಣ – ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ!

ಇನ್ನೂ ಇಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಎಕ.ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡುವ ಸಂಭ್ರಮದಲ್ಲಿ ಪ್ರದೀಪ್ ಈಶ್ವರ್ ಇದ್ರು. ಆದ್ರೆ ಸಾಕು ತಾಯಿ ನಿಧನದ ಸುದ್ದಿ ಪ್ರದೀಪ್ ಈಶ್ವರ್ ದುಃಖತಪ್ತರಾಗುವಂತೆ ಮಾಡಿದೆ. ಪಾರ್ಥೀವ ಶರೀರದ ದರ್ಶನ ಪಡೆದ ಪ್ರದೀಪ್  ಪಾದಗಳನ್ನು ಗಟ್ಟಿಯಾಗಿ ಹಿಡಿದು ನಮಸ್ಕರಿಸಿದ್ದಾರೆ.

ಮೇ 10 ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಆರೋಗ್ಯ ಸಚಿವ ಡಾ.ಸುಧಾಕರ್​ ಅವರನ್ನು ಸೋಲಿಸಿ ಪ್ರದೀಪ್‌ ಈಶ್ವರ್‌ ಶಾಸಕರಾಗಿ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ. ಪ್ರದೀಪ್‌ ವಿಧಾಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿರುವ ಮನೆ ಮನೆಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ.

suddiyaana