ದಾರಿ ತಪ್ಪಿದ್ರಾ ಪ್ರದೀಪ್ ಈಶ್ವರ್? ಸಿಎಂ ಹೊಗಳಲು ನಿ** ಬೇಕಿತ್ತಾ?
ಅಧಿಕಾರದ ಅಮಲೋ? ಮಾತಿನ ಭರವೋ?

ಪ್ರದೀಪ್ ಈಶ್ವರ್..ಯಾರಿಗ್ ಗೊತ್ತಿಲ್ಲ ಹೇಳಿ.. ಇವರ್ ಕೆಲಸಗಿಂತ ಹೆಚ್ಚಾಗಿ ಡೈಲಾಗ್ನಿಂದಲೇ ಫೇಮಸ್.. ಶಾಸಕರಾದ್ರು ಮಗಾ ಮಚ್ಚಿ ಅನ್ನ್ಕೋಂಡು ಹೊಡೆಯೋ ಡೈಲಾಗ್ ಕರ್ನಾಟಕದ ಮನೆ ಮನೆಯನ್ನೂ ಮುಟ್ಟಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಗೆದ್ದಿರುವ ಇವರು ವೇದಿಕೆಗಳಲ್ಲಿ ಅಬ್ಬರಿಸುವುದು ಕಾಮನ್. ಹಾಗೇ ಅಬ್ಬರಿಸೋಕೆ ಹೋಗಿ ರಾಜ್ಯರಾಜಕೀಯದಲ್ಲಿ ಬೆಂಕಿಯನ್ನೇ ಹಚ್ಚಿದ್ದಾರೆ..
ಶುಕ್ರವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಕೈವಾರ ತಾತಯ್ಯ ಯೋಗಿನಾರೇಯಣ ಯತೀಂದ್ರರ 299ನೇ ಜಯಂತಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಇಬ್ಬರೂ ಭಾಗಿಯಾಗಿದ್ದರು. ಈ ವೇಳೆ ಪ್ರದೀಪ್ ಈಶ್ವರ್ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ.
ಮೊದಲು ಬಲಿಜ ಸಂಘ ಒಕ್ಕೂಟದ ಅಧ್ಯಕ್ಷ ಟಿ.ವೇಣುಗೋಪಾಲ್ ಉಪನ್ಯಾಸವನ್ನು ನೀಡುತ್ತಾ ಮೋದಿಯವರನ್ನು ಹೊಗಳಿದರು. ಯಾವಾಗೆಲ್ಲಾ ತೊಂದರೆ ಆಗಿದೆಯೋ ಆವಗೆಲ್ಲಾ ದೇವರು ಅವತಾರವನ್ನು ತಾಳುತ್ತಾನೆ. ಅದೇ ರೀತಿ ಈಗ ಪ್ರಧಾನಿ ನರೇಂದ್ರ ಮೋದಿವರು ಶ್ರೀಕೃಷ್ಣನ ಅವತಾರ ಎಂದು ಹೇಳಿದರು. ಅಲ್ಲದೇ ಬೊಮ್ಮಾಯಿ ಸರ್ಕಾರದಲ್ಲಿ ಈ ಸಮಾಜಕ್ಕೆ ಆದ ಅಭಿವೃದ್ಧಿ ಬಗ್ಗೆ ಹೇಳಿದ್ದಾರೆ. ಇದು, ಅಲ್ಲಿದ್ದ ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಇರಿಸುಮುರಿಸು ತಂದಿದೆ. ಇದಾದ ನಂತರ ಮಾತನಾಡಿದ ಪ್ರದೀಪ್ ಈಶ್ವರ್, ನನ್ನ ಹೃದಯದಲ್ಲಿ ಶ್ರೀರಾಮಚಂದ್ರನೂ ಇದ್ದಾರೆ, ಸಿದ್ದರಾಮಯ್ಯನವರೂ ಇದ್ದಾರೆ ಎಂದು ಹೇಳಿದರು. ಆಗ, ಸಭೆಯಲ್ಲಿದ್ದವರು ಎದ್ದು ನಿಮ್ಮ ಹೃದಯದಲ್ಲಿ ಕೈವಾರ ತಾತಯ್ಯ ಇಲ್ಲವೇ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಪ್ರದೀಪ್ ಈಶ್ವರ್, ನಾನೇ ಕೈವಾರ ತಾತಯ್ಯ, ನೀವೂ ಕೈವಾರ ತಾತಯ್ಯ ಜೊತೆಗೆ ಸಮುದಾಯದ ಎಲ್ಲರೂ ಕೈವಾರ ತಾತಯ್ಯನೇ. ಬಲಿಜ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಬೇಕು. ನಮ್ಮ ಸಮುದಾಯದವರು ಹೆಚ್ಚಿನವರು ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಅವರು ಸಮುದಾಯದ ಎರಡು ವಿದ್ಯಾರ್ಥಿಗಳಿಗೆ ಕನಿಷ್ಠ ಎರಡು ಸೀಟನ್ನು ಮೀಸಲಿಡಬೇಕು ಎಂದು ಹೇಳಿದರು. ಪ್ರದೀಪ್ ಈಶ್ವರ್ ಈ ರೀತ್ ಹೇಳಿದಾಗ ಎದ್ದು ನಿಂತ ಇನ್ನೊಬ್ಬರು, ನೀವು ವೇದಿಕೆಯಲ್ಲಿ ಸುಮ್ಮನೆ ಭಾಷಣವನ್ನು ಮಾಡುತ್ತೀರಿ. ಗ್ರೈನ್ ಮರ್ಚೆಂಟ್ ಚುನಾವಣೆಯಲ್ಲಿ ನೀವು ಮಾಡಿದ್ದೇನು. ನನ್ನ ವಿರುದ್ದ ಬಲಿಜ ಸಮುದಾಯದವರನ್ನೇ ನಿಲ್ಲಿಸಿ ನನ್ನನ್ನೇ ಸೋಲಿಸುವಂತೆ ಮಾಡಿಲ್ಲವೇ ಎಂದು ಪಿ.ಕೆ.ಸುರೇಶ್ ಎನ್ನುವವರು ಆಕ್ರೋಶ ಹೊರಹಾಕಿದರು. ಇದು, ವಾಗ್ಯುದ್ದಕ್ಕೆ ಕಾರಣವಾಯಿತು. ಆಗ ರೊಚ್ಚಿಗೆದ್ದ ಪ್ರದೀಪ್ ಈಶ್ವರ್
ಇದೇನು ಬಿಜೆಪಿ ಕಾರ್ಯಕ್ರಮ ಅನ್ಕೊಂಡಿದ್ದೀರಾ? ಬಿಜೆಪಿ ಗುಣಗಾನ ಮಾಡೋರು ಬಾಯಿ ಮುಚ್ಕೊಂಡು ಇರ್ಬೇಕು. ರಾಜ್ಯದಲ್ಲಿರೋದು ಸಿದ್ದರಾಮಯ್ಯ ಸರ್ಕಾರ, ನಿಮ್ಮಪ್ಪನ್ ಸರ್ಕಾರ ಅಲ್ಲ, ಏಯ್…ಇದು ಸಿದ್ದರಾಮಯ್ಯ ಪ್ರೋಂಗ್ರಾಂ, ನಿಮ್ಮಪ್ಪನ ಪ್ರೋಂಗ್ರಾಂ ಅಲ್ಲ, ಸುಮ್ನೆ ಕೂತ್ಕೋಬೇಕು, ಇಲ್ಲ ಗೆಟ್ ಲಾಸ್ಟ್ ಎಂದು ಅವಾಜ್ ಹಾಕಿದ್ದಾರೆ.
ಈ ವೇಳೆ ಕಾರ್ಯಕ್ರಮದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಕೂಡ ಮಾತಿಗೆ ಮಾತು ಬೆಳೆಸಿದ್ದಾರೆ. ಕಾರ್ಯಕ್ರಮವು ರಣರಂಗವಾಗಿ ಬದಲಾಯ್ತು. ಈ ಟೈಂನಲ್ಲಿ ವೇದಿಕೆಯಲ್ಲಿ ಕುಳಿತಿದ್ದ ಬಿಜೆಪಿ ಸಂಸದ ಪಿ.ಸಿ.ಮೋಹನ್ ಕೂಡ ಎದ್ದು ಬಂದು ಪ್ರದೀಪ್ ಈಶ್ವರ್ ಅವ್ರೇ, ಒಂದು ನಿಮಿಷ ಇಲ್ಲಿ ಕೇಳಿ. ನಿಮಗೇ ತುಂಬಾ ಉತ್ಸಾಹವಿದೆ ಒಳ್ಳೇದು. ಆದ್ರೆ ನೀವು ಇಲ್ಲಿ ಬಂದು ಇದು ಸಿದ್ದರಾಮಯ್ಯನ ಪ್ರೋಂಗ್ರಾಂ ಅಂದ್ರೆ, ನಾನು ಬಿಜೆಪಿ ಸಂಸದನಾದ ನಾನು ಇಲ್ಲಿ ಇರಬೇಕಾ, ಬೇಡ್ವಾ ಹೇಳ್ರೀ? ಎಂದು ಜೋರುದನಿಯಲ್ಲೇ ಕೇಳಿದ್ದಾರೆ. ಬಳಿಕ ಕಾರ್ಯಕ್ರಮದಲ್ಲಿ ಸೇರಿದ್ದ ಎಲ್ಲರೂ ಪ್ರದೀಪ್ ಈಶ್ವರ್ ವಿರುದ್ಧ ರೊಚ್ಚಿಗೆದ್ದಿದ್ರು.
ಪ್ರಚಾರದ ಹುಚ್ಚಿದ್ರೆ ಕಾಮಿಡಿ ಕಿಲಾಡಿಗೆ ಹೋಗಿ
ಪ್ರದೀಪ್ ಈಶ್ವರ್ ಬಗ್ಗೆ ಟ್ವಿಟ್ ಮಾಡಿರೋ ಬಿಜೆಪಿ ಆಕ್ಸಿಡೆಂಟಲ್ ಎಂ.ಎಲ್.ಎ ಪ್ರದೀಪ್ ಈಶ್ವರ್ ಅವರೇ, ಅಲ್ಲಿ ನಡೆಯುತ್ತಿರುವುದು ಬಿಜೆಪಿ ಕಾರ್ಯಕ್ರಮವೂ ಅಲ್ಲ, ಕಾಂಗ್ರೆಸ್ ಕಾರ್ಯಕ್ರಮವೂ ಅಲ್ಲ. ಅಲ್ಲಿ ನಡೆಯುತ್ತಿರುವುದು ಪವಾಡ ಪುರುಷ ಕೈವಾರ ತಾತಯ್ಯ ಅವರ ಜಯಂತಿ ಕಾರ್ಯಕ್ರಮ.. ನಿಮಗೆ ಅಷ್ಟೊಂದು ಪ್ರಚಾರದ ಗೀಳಿದ್ದರೆ ಮಜಾ ಟಾಕೀಸ್ ಅಥವಾ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಹೋಗಿ. ನಿಮ್ಮ ಪ್ರಚಾರದ ಹಪಾಹಪಿಗಾಗಿ ಪೂಜನೀಯ ಕೈವಾರ ತಾತಯ್ಯ ಅವರ ವೇದಿಕೆಗೆ ಅವಮಾನಿಸಬೇಡಿ ಎಂದು ಬಿಜೆಪಿ ಕಿಡಿಕಾರಿದೆ.
ಪ್ರದೀಪ್ ಈಶ್ವರ್ ಚಿಕ್ಕ ಮಕ್ಕಳಲ್ಲ, ಶಾಸಕರಾಗಿದ್ದಾರೆ
ಇನ್ನು ಸಂಸದ ಪಿ.ಸಿ. ಮೋಹನ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಿನ್ನೆ ನಡೆದ ಈ ಕಾರ್ಯಕ್ರಮವನ್ನು ಬಿಜೆಪಿ ಸರ್ಕಾರ ಇದ್ದಾಗಲೇ ಘೋಷಣೆ ಮಾಡಲಾಗಿತ್ತು ಎಂದ್ರು. ಪ್ರದೀಪ್ ಈಶ್ವರ್ ಅವರು ತಮ್ಮ ನಡವಳಿಕೆಯನ್ನು ಸರಿಪಡಿಸಿಕೊಳ್ಳಬೇಕು. ಇವರು ಚಿಕ್ಕ ಮಕ್ಕಳಲ್ಲ., ಶಾಸಕರಾಗಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಪಿಸಿ ಮೋಹನ್ ಕಿಡಿಕಾರಿದರು.
ಒಟ್ನಲ್ಲಿ ಹೊದಲ್ಲಿ ಬಂದಲ್ಲಿ ಡೈಲಾಗ್ ಹೊಡೆಯ್ ಪ್ರದೀಪ್ ಈಶ್ವರ್ ಕೈವಾರ ತಾತಯ್ಯ ಜಯಂತಿಯಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ವೋಟ್ ಹೇಳೋಕೆ ಹೋದಾಗ, ಅಣ್ಣ, ಅಕ್ಕ ಅನ್ನೋರು ಈಗ ಅಪ್ಪ, ತಪ್ಪಾ ಅಂತಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಜನ ಕಿಡಿಕಾರುತ್ತಿದ್ದಾರೆ.