ಬಿಗ್‌ಬಾಸ್ ಮನೆಯಲ್ಲಿ ಪ್ರದೀಪ್ ಈಶ್ವರ್ ಪಂಚಿಂಗ್ ಡೈಲಾಗ್ಸ್ –ಟೀಕಿಸಿದವರಿಗೆ ಶಾಸಕರಿಂದ ಖಡಕ್ ತಿರುಗೇಟು

ಬಿಗ್‌ಬಾಸ್ ಮನೆಯಲ್ಲಿ ಪ್ರದೀಪ್ ಈಶ್ವರ್ ಪಂಚಿಂಗ್ ಡೈಲಾಗ್ಸ್ –ಟೀಕಿಸಿದವರಿಗೆ ಶಾಸಕರಿಂದ ಖಡಕ್ ತಿರುಗೇಟು

ಬಿಗ್‌ಬಾಸ್ ಮನೆಗೆ ಎಂಎಲ್‌ಎ ಹೋಗಿದ್ದೇ ದೊಡ್ಡ ಸುದ್ದಿಯಾಗಿತ್ತು. ಅದು ಕೂಡಾ ಮಾತಿನ ಮಲ್ಲ, ಚುನಾವಣೆಯ ರಣಬೇಟೆಗಾರ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದ್ದು ಎರಡು ದಿನ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಒಬ್ಬ ಶಾಸಕ ಬಿಗ್‌ಬಾಸ್ ಮನೆಯಲ್ಲಿ ಕುಣಿಯೋದು ಅಂದರೆ ನಾಚಿಕೆಗೇಡಿನ ಸಂಗತಿ ಎಂದು ತನ್ನನ್ನು ಸೋಲಿಸಿದ ಪ್ರದೀಪ್ ಈಶ್ವರ್ ಬಗ್ಗೆ ಡಾ. ಸುಧಾಕರ್ ಸುದ್ದಿಗೋಷ್ಟಿ ನಡೆಸಿ ಲೇವಡಿ ಕೂಡಾ ಮಾಡಿದ್ದರು. ತಮ್ಮ ಬಗೆಗಿನ ಟೀಕೆಗೆ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಯಲ್ಲೇ ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್‌ ಮನೆಗೆ ಶಾಸಕ ಪ್ರದೀಪ್ ಈಶ್ವರ್ ಎಂಟ್ರಿ – ಎಂಎಲ್ಎ ದೊಡ್ಮನೆ ಪ್ರವೇಶಕ್ಕೆ ಕೇಳಿಬಂತು ಅಪಸ್ವರ..!

ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆ ಪ್ರವೇಶಿಸುತ್ತಿದ್ದಂತೆ ಡೊಳ್ಳುಕುಣಿತಕ್ಕೆ ಮೊದಲು ಹೆಜ್ಜೆ ಹಾಕಿದರು. ನಂತರ ಶುರುವಾಯ್ತು ನೋಡಿ ಗುಸುಗುಸು. ಇವರು ಹಾಲಿ ಶಾಸಕರು ಅಲ್ವಾ. ಬಿಗ್‌ಬಾಸ್ ಮನೆಗೆ ಬರಬಹುದಾ. ಇವರಿಗೆ ಸೆಷನ್ ಎಲ್ಲ ಇರುವುದಿಲ್ವಾ. ನಾವು ಎಂಎಲ್‌ಎ ಜೊತೆ ಸ್ಪರ್ಧೆ ಮಾಡ್ತಿದ್ದೀವಾ.. ಹೀಗೆ ಸ್ಪರ್ಧಿಗಳ ಮಧ್ಯೆಯೇ ಗೊಂದಲ ಶುರುವಾಗಿತ್ತು. ಇದರ ಜೊತೆಗೆ ಪ್ರದೀಪ್ ಈಶ್ವರ್ ಕೂಡಾ ಸರಿಯಾಗಿಯೇ ಡೋಸ್ ಕೊಟ್ರು. ಲಗೇಜ್ ಯಾವಾಗ ಕಳಿಸ್ತಾರೆ. ನಾನು ಸ್ಪರ್ಧಿಯಾಗಿ ಬಂದಿದ್ದು ತುಂಬಾ ಖುಷಿಯಾಯ್ತು ಅಂತಾ ಹೇಳ್ತಾರೆ. ಇವರ ಮಾತು ಕೇಳಿ ಸ್ಪರ್ಧಿಗಳಲ್ಲಿ ಮತ್ತಷ್ಟು ಗೊಂದಲ. ಹೀಗಿರುವಾಗಲೇ ಬಿಗ್ ಬಾಸ್ ಎಲ್ಲರ ಗೊಂದಲ ನಿವಾರಿಸುವ ಪ್ರಯತ್ನ ಮಾಡ್ತು. ಪ್ರದೀಪ್ ಈಶ್ವರ್.. ನೀವು ಈ ಮನೆಗೆ ಸ್ಪರ್ಧಿಯಾಗಿ ಆಗಮಿಸಿದ್ದೀರಿ ಎನ್ನುವ ವಿಷಯ ಕೇಳಿ ಮನೆಯ ಸದಸ್ಯರಲ್ಲಿ ಆಶ್ಚರ್ಯ, ಖುಷಿ, ಕನ್ಫ್ಯೂಷನ್ ಆಗಿದೆ. ಕೆಲವೊಬ್ಬರು ಟೆನ್ಷನ್ ಕೂಡ ಮಾಡಿಕೊಂಡಂತಿದೆ. ಒಟ್ಟಾರೆಯಾಗಿ ನೀವು ಮಾಡಿದ ಈ ಪ್ರಾಂಕ್ ಎಲ್ಲರಿಗೂ ತಲೆ ಕೆಡಿಸಿದೆ. ಈಗ ನಿಜ ಹೇಳುವ ಸಮಯ. ನೀವು ಈ ಸೀಸನ್‌ನ ಬಿಗ್ ಬಾಸ್ ಮನೆಗೆ ಆಗಮಿಸಿರುವ ಮೊದಲ ಅತಿಥಿ. ನಿಮಗೆ ಸ್ವಾಗತ..’ ಎಂದು ಹೇಳಿದ ಮೇಲೆಯೇ ಎಲ್ಲರೂ ಸಮಾಧಾನ ಪಟ್ಟುಕೊಂಡರು.

ಇದಾದ ಮೇಲೆ ಶುರುವಾಗಿದ್ದೇ ಪ್ರದೀಪ್ ಈಶ್ವರ್ ಪಂಚಿಂಗ್ ಡೈಲಾಗ್ಸ್. ಲೈಫ್‌ನಲ್ಲಿ ಸೋಲೋಕೆ ರೆಡಿ ಇದ್ದರೆ, ಗ್ಯಾರೆಂಟಿ ಗೆಲ್ತೀರಾ. ಒಳ್ಳೆಯವರು ದುಡ್ಡು ಮಾಡಿದರೆ ಒಳ್ಳೆಯದ್ದಕ್ಕೆ ಬಳಸುತ್ತಾರೆ. ಕೆಟ್ಟವರು ಮಾಡಿದರೆ ಕೆಟ್ಟದಕ್ಕೆ ಬಳಸುತ್ತಾರೆ. ಒಳ್ಳೆಯವರು ದುಡ್ಡು ಮಾಡದೇ ಇರೋದು ಸಮಾಜಘಾತುಕನೇ ಎಂದು ಶಾಸಕರು ಹೇಳಿದ್ರು.  ನಾನು ಎಲೆಕ್ಷನ್‌ಗೆ ನಿಂತರೆ ‘ನಿನಗೆ ಬೇಕಾಗಿತ್ತಾ’ ಅಂದರು. ಶಾಲೆಯಲ್ಲಿ ಶಿಕ್ಷಕರು ‘ಭಾಗವಹಿಸುವುದು ಮುಖ್ಯ’ ಅಂತಿದ್ರು. ‘ಸೋಲು, ಗೆಲುವು ಸೆಕೆಂಡರಿ’ ಅಂದ್ರು. ಟೀಚರ್ ಹೇಳಿರುವ ಸಿಂಪಲ್ ಫಾರ್ಮುಲಾನ ನಾನು ಅಪ್ಲೈ ಮಾಡಿದೆ. ನಾನು ಗೆದ್ದೆ. ಜೀವನದಲ್ಲಿ ನಂಬಿಕೆ ಇರಬೇಕು ಎಂದು ಪ್ರದೀಪ್ ಈಶ್ವರ್ ಹೇಳಿದರು. ಅಷ್ಟೇ ಅಲ್ಲ, ತಾನು ಬಿಗ್ ಬಾಸ್ ಮನೆಗೆ ಬಂದಿರುವುದಕ್ಕೆ ರಾಜಕೀಯ ವಲಯದಲ್ಲೂ ಚರ್ಚೆಯಾಗುತ್ತೆ ಎಂಬ ವಿಚಾರ ಗೊತ್ತು ಅನ್ನೋ ರೀತಿಯೂ ಕೆಲವು ಖಡಕ್ ಡೈಲಾಗ್ ಹೊಡೆದರು. ಇನ್ನು ಬಿಗ್‌ಬಾಸ್ ಮನೆಗೆ ಎಷ್ಟು ದಿನಕ್ಕಾಗಿ ಹೋಗುವುದು. ಯಾಕೆ ಹೋಗುವುದು ಎಂಬ ಸಣ್ಣ ಸುಳಿವನ್ನೂ ಕೂಡಾ ಪ್ರದೀಪ್ ಈಶ್ವರ್ ಇಷ್ಟು ದಿನ ಬಿಟ್ಟುಕೊಟ್ಟಿರಲಿಲ್ಲ. ಬಿಗ್‌ಬಾಸ್‌ಗೆ ಮನರಂಜನೆ ಮಾಡಲು ಬಂದಿಲ್ಲ. ಸ್ಪರ್ಧಿಗಳಿಗೆ ಮೋಟಿವೇಷನ್ ಸ್ಪೀಕರ್ ಆಗಿ ಬಂದಿದ್ದೇನೆ. ಅದು ಕೂಡಾ ಬಿಗ್‌ಬಾಸ್ ಮನೆಯಿಂದ ಬಂದಿರುವ ಸಂಭಾವನೆಯನ್ನು ಅನಾಥ ಮಕ್ಕಳಿಗೆ ನೀಡುತ್ತೇನೆ. ಅನಾಥ ಮಕ್ಕಳಿಗಾಗಿ ಬಿಗ್ ಬಾಸ್ ಮನೆಗೆ  ಪ್ರವೇಶ ಮಾಡಿರುವುದಾಗಿ ಹೇಳಿರುವ ಪ್ರದೀಪ್ ಈಶ್ವರ್ ತನನ್ನು ಟೀಕಿಸಿದವರಿಗೆ ಖಡಕ್ ತಿರುಗೇಟು ನೀಡಿದ್ದಾರೆ. ರಾಜಕಾರಣಿ ಆಗಿ ಅಲ್ಲದೇ ಮೋಟಿವೇಷನಲ್ ಸ್ಪೀಕರ್ ಆಗಿ ಪ್ರದೀಪ್ ಈಶ್ವರ್ ಅವರು ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲೂ ಅವರು ಅದೇ ಕೆಲಸ ಮಾಡಿದ್ದಾರೆ.

Sulekha