ಪ್ರದೀಪ್ ಈಶ್ವರ್ ಎಲ್ಲಿದ್ದೀಯಪ್ಪಾ? – ಕೈ ನಾಯಕನಿಂದ್ಲೇ ರಾಜೀನಾಮೆ ಪತ್ರ
ಟ್ರೋಲ್ ಮೇಷ್ಟ್ರಿಗೆ ಚಳಿ ಬಿಡಿಸಿದ್ಯಾರು?

ಪ್ರದೀಪ್ ಈಶ್ವರ್ ಎಲ್ಲಿದ್ದೀಯಪ್ಪಾ? – ಕೈ ನಾಯಕನಿಂದ್ಲೇ ರಾಜೀನಾಮೆ ಪತ್ರಟ್ರೋಲ್ ಮೇಷ್ಟ್ರಿಗೆ ಚಳಿ ಬಿಡಿಸಿದ್ಯಾರು?

ಲೋಕಸಭಾ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಪ್ರದೀಪ್ ಈಶ್ವರ್ ಹೆಸರು ತುಂಬಾನೇ ಚರ್ಚೆಯಾಗ್ತಿದೆ. ಅದೂ ಕೂಡ ರಾಜೀನಾಮೆ ಕೊಡುವಂತೆ ಒತ್ತಾಯ ಜೋರಾಗ್ತಿದೆ. ಎಲೆಕ್ಷನ್​ಗೂ ಮುನ್ನ ಡಾ.ಕೆ ಸುಧಾಕರ್ ಬಗ್ಗೆ ಡೈಲಾಗ್ಸ್ ಮೇಲೆ ಡೈಲಾಗ್ಸ್ ಬಿಡ್ತಿದ್ದ ಪ್ರದೀಪ್ ಈಶ್ವರ್ ಆಮೇಲೆ ಪತ್ತೆಯೇ ಇಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಗೆದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋದಾಗಿ ಸವಾಲು ಹಾಕಿದ್ರು. ಇತ್ತೀಚೆಗೆ ಪ್ರದೀಪ್ ಈಶ್ವರ್ ರಾಜೀನಾಮೆ ಕೊಟ್ಟಿದ್ದಾರೆ ಅನ್ನೋ ಪತ್ರ ಕೂಡ ವೈರಲ್ ಆಗಿತ್ತು. ಆದ್ರೀಗ ಪ್ರದೀಪ್ ಮಾತು ಹಾಗೇ ರಾಜೀನಾಮೆ ಪತ್ರ ಚಿಕ್ಕಬಳ್ಳಾಪುರ ಕಾಂಗ್ರೆಸ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ಯಾಕಂದ್ರೆ ರಿಸೈನ್ ಲೆಟರ್ ಅನ್ನ ಬೇರೆ ಯಾರು ಅಲ್ಲ ಕಾಂಗ್ರೆಸ್​ ಮುಖಂಡನೇ ವೈರಲ್ ಮಾಡಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಅನ್ನೂ ಕೂಡ ಮುಜುಗರಕ್ಕೀಡಾಗುವಂತೆ ಮಾಡಿದೆ.

ಇದನ್ನೂ ಓದಿ:ಮೋದಿ ಪ್ರಮಾಣವಚನ ಸಮಾರಂಭ – ಕಾರ್ಯಕ್ರಮಕ್ಕೆ ಯಾರಿಗೆಲ್ಲ ಆಹ್ವಾನ?

ಕಾಂಗ್ರೆಸ್ ನಲ್ಲೇ ಕಿತ್ತಾಟ! 

ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಶಾಸಕ ಪ್ರದೀಪ್ ಈಶ್ವರ್  ರಾಜೀನಾಮೆ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್​​ಗಿಂತ ಒಂದೇ ಒಂದು ಹೆಚ್ಚು ಮತ ಪಡೆದುಕೊಂಡಿರೆ ರಾಜೀನಾಮೆ ನೀಡುತ್ತೇನೆ. ಅಲ್ಲದೇ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಸವಾಲ್ ಹಾಕಿದ್ದರು. ಆದ್ರೆ, ಸುಧಾಕರ್ ಚಿಕ್ಕಬಳ್ಳಾಪುರದಲ್ಲೇ 20 ಸಾವಿರಕ್ಕೂ ಅಧಿಕ ಮತಗಳನ್ನು ಲೀಡ್ ಪಡೆದುಕೊಂಡಿದ್ದಾರೆ. ಹೀಗಾಗಿ ಇದೀಗ ಪ್ರದೀಪ್​ ಈಶ್ವರ್ ರಾಜೀನಾಮೆ ಯಾವಾಗ ಎಂದು ಟ್ರೋಲ್ ಮಾಡಲಾಗುತ್ತಿದೆ. ಅಲ್ಲದೇ ಬಿಜೆಪಿ ಕಾರ್ಯಕರ್ತರು ಸಹ ರಾಜೀನಾಮೆ ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ. ಈ ರಾಜೀನಾಮೆ ಟ್ರೋಲ್ ಮಧ್ಯ ಪ್ರದೀಶ್ ಈಶ್ವರ್​ ಅವರ ರಾಜೀನಾಮೆ ಪತ್ರ ವೈರಲ್ ಆಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವ್ರು ರಾಜೀನಾಮೆ ನೀಡಿದ್ದಾರೆ ಎನ್ನಲಾದ ನಕಲಿ ಪತ್ರವನ್ನ ಸ್ವತಃ  ಕಾಂಗ್ರೆಸ್​ ಪಕ್ಷದ ಪದಾಧಿಕಾರಿಯೊಬ್ಬರು ರೆಡಿ ಮಾಡಿ ವೈರಲ್​ ಮಾಡಿದ್ದಾರೆ. ಯೂತ್ ಕಾಂಗ್ರೆಸ್  ಕಾರ್ಯದರ್ಶಿಯಾಗಿದ್ದ ಎಸ್.ಎಂ ಜಗದೀಶ್ ಎಂಬುವರೇ ಪ್ರದೀಪ್ ಈಶ್ವರ್ ಅವರ ನಕಲಿ ರಾಜೀನಾಮೆ ಪತ್ರವನ್ನು ವೈರಲ್ ಮಾಡಿದ್ದಾರೆ. ಹೀಗಾಗಿ ಪಕ್ಷದ ಯುವ ಕಾರ್ಯದರ್ಶಿ ಹುದ್ದೆಯಿಂದ ಹಾಗೂ ಪಕ್ಷದಿಂದಲೇ   ಜಗದೀಶ್ ಅವರನ್ನು ಕಾಂಗ್ರೆಸ್ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಯೂತ್ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದ ಜಗದೀಶ್ ಅವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಪರವಾಗಿ ಕೆಲಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಾಗೇ ಪ್ರದೀಪ್ ಈಶ್ವರ್ ಮನೆಗೆ ಕಲ್ಲು ಹೊಡೆಸಿದ ಆರೋಪವೂ ಇದೆ. ಈ ಎಲ್ಲಾ ಆರೋಪಗಳ ಮೇಲೆ ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಕೆ ರೆಹಮಾನ್ ಖಾನ್ ಅವರು ಜಗದೀಶ್​ನನ್ನು ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ.

ಮತ್ತೊಂದೆಡೆ ಶಾಸಕ ಪ್ರದೀಪ್ ಈಶ್ವರ್ ವರ್ತನೆಗೆ ಸ್ವಪಕ್ಷೀಯ ಕಾಂಗ್ರೆಸ್ ನಾಯಕರೇ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರಸಭೆ ಸದಸ್ಯ ರಫೀಕ್, ಎಸ್.ಎಂ.ಜಗದೀಶ್ ಮತ್ತಿತರರು ಈ ವೇಳೆ ಇದ್ದರು. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್, ಯುವಕಾಂಗ್ರೆಸ್ ರಾಜ್ಯ ಅಧ್ಯಕ್ಷ ಮಹಮದ್ ನಲಪಾಡ್ ಅವರನ್ನು ಸಹ ಭೇಟಿ ಮಾಡಿದ್ದಾರೆ. ಪ್ರದೀಪ್ ಈಶ್ವರ್ ಗೆಲುವಿಗೆ ಕಾಂಗ್ರೆಸ್ ಮುಖಂಡರು ಒಗ್ಗಟ್ಟಿನಿಂದ ಶ್ರಮಿಸಿದ್ದರು. ಆ ಪರಿಣಾಮ ಗೆಲುವು ಸಹ ದೊರೆಯಿತು. ಗೆಲುವಿನ ನಂತರ ಪ್ರದೀಪ್ ಈಶ್ವರ್ ಹಿರಿಯ ಮುಖಂಡರನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ಅವರವರೆಗೂ ಈ ದೂರು ಹೋಗಿದೆ.  ಒಟ್ನಲ್ಲಿ ಪ್ರದೀಪ್ ಈಶ್ವರ್ ವಿಚಾರವಾಗಿ ಕಾಂಗ್ರೆಸ್ ನಲ್ಲೇ ಆಕ್ರೋಶ ವ್ಯಕ್ತವಾಗುತ್ತಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲೂ ಒಡೆದ ಮನೆಯಂತಾಗಿದೆ. ಮತ್ತೊಂದೆಡೆ ಬಿಜೆಪಿ ನಾಯಕರು, ಕಾರ್ತಕರ್ತರು ರಾಜೀನಾಮೆಗೆ ಒತ್ತಡ ಹೇರುತ್ತಿದ್ದಾರೆ, ಆದ್ರೆ ಪ್ರದೀಪ್ ಈಶ್ವರ್ ಮಾತ್ರ ಸೈಲೆಂಟ್ ಆಗಿರೋದು ಬಾರೀ ಕುತೂಹಲ ಮೂಡಿಸಿದೆ.

Shwetha M