50ನೇ ವಯಸ್ಸಿನಲ್ಲಿ ಮತ್ತೆ ತಂದೆಯಾದ ಪ್ರಭುದೇವ – ಎರಡನೇ ಪತ್ನಿ ಹಿಮಾನಿಗೆ ಹೆಣ್ಣು ಮಗು

50ನೇ ವಯಸ್ಸಿನಲ್ಲಿ ಮತ್ತೆ ತಂದೆಯಾದ ಪ್ರಭುದೇವ – ಎರಡನೇ ಪತ್ನಿ ಹಿಮಾನಿಗೆ ಹೆಣ್ಣು ಮಗು

ಇಂಡಿಯನ್ ಮೈಕಲ್ ಜಾಕ್ಸನ್ ಅಂತಾನೇ ಫೇಮಸ್ ಆಗಿರುವ ನಟ ಪ್ರಭುದೇವ ಹೆಣ್ಣು ಮಗುವಿನ ತಂದೆಯಾಗಿರುವ ಸಂತಸದಲ್ಲಿದ್ದಾರೆ. ನೃತ್ಯ ಸಂಯೋಜಕ, ನಿರ್ದೇಶಕ ಮತ್ತು ನಟ ಪ್ರಭುದೇವ ತಮ್ಮ 50ನೇ ವಯಸ್ಸಿನಲ್ಲಿ ಮತ್ತೆ ತಂದೆಯಾಗಿದ್ದಾರೆ. 2020ರಲ್ಲಿ ಮದುವೆಯಾದ ಅವರ ಎರಡನೇ ಪತ್ನಿ ಹಿಮಾನಿ ಅವರಿಗೆ ಮೊದಲ ಹೆಣ್ಣು ಮಗುವಾಗಿದೆ. ಈ ಸಿಹಿಸುದ್ದಿಯನ್ನು ಸ್ವತಃ ಪ್ರಭುದೇವ ಅವರೇ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಗಿಣಿರಾಮ ಮಹಾ ಮುಕ್ತಾಯ – ಆಯಿ ಸಾಹೇಬರ ಅಂತ್ಯದೊಂದಿಗೆ ಧಾರಾವಾಹಿ ಕೊನೆಗೊಳ್ಳುತ್ತಾ?

ಹೆಣ್ಣು ಮಗು ಜನಿಸಿರುವ ಬಗ್ಗೆ ಸಂತಸ ಹಂಚಿಕೊಂಡಿರುವ ಪ್ರಭುದೇವ, ಇದು ನಿಜ. 50ನೇ ವಯಸ್ಸಿನಲ್ಲಿ ಮತ್ತೆ ತಂದೆಯಾಗಿದ್ದು, ತುಂಬಾ ಸಂತೋಷ ಮತ್ತು ಸಂಪೂರ್ಣತೆಯ ಭಾವ ಆವರಿಸಿದೆ. ಸಾಧ್ಯವಾದಷ್ಟು ಮನೆಯಲ್ಲಿ ಸಮಯ ಕಳೆಯಲು ಬಯಸುತ್ತೇನೆ. ಈಗಾಗಲೇ ನನ್ನ ಕೆಲಸದ ಹೊರೆಯನ್ನು ಕಡಿಮೆ ಮಾಡಿದ್ದೇನೆ. ನನ್ನ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಲು ಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ.  ಇದು ಪ್ರಭುದೇವ ಕುಟುಂಬದ ಮೊದಲ ಹೆಣ್ಣು ಮಗು. ಅವರು ಹಿಂದೆ ಮದುವೆಯಾಗಿದ್ದ ಪತ್ನಿಗೆ ಮೂವರು ಗಂಡು ಮಕ್ಕಳಿದ್ದಾರೆ.

ಪ್ರಭುದೇವ ಅವರು ರಾಮ್‌ಲತ್‌ ಎನ್ನುವವರ ಜೊತೆ 1995ರಲ್ಲಿ ವಿವಾಹವಾಗಿದ್ದರು. ರಾಮ್‌ಲತ್ ಮತ್ತು ಪ್ರಭುದೇವ ದಂಪತಿಗೆ ಮೂವರು ಮಕ್ಕಳಾಗಿದ್ದವು. ಮನಸ್ತಾಪದಿಂದ 2011ರಲ್ಲಿ ರಾಮ್‌ಲತ್ ಮತ್ತು ಪ್ರಭುದೇವ ವಿಚ್ಛೇದನ ಪಡೆದರು. ಆ ನಂತರ ಪ್ರಭುದೇವ ಅವರ ಜೊತೆ ಕೆಲ ನಟಿಯರ ಹೆಸರು ಕೇಳಿಬಂದಿದ್ದರೂ ಕೂಡ ಅವರು ಯಾರನ್ನೂ ಮದುವೆ ಆಗಿರಲಿಲ್ಲ.

ಇತ್ತೀಚೆಗಷ್ಟೇ ಹಿಮಾನಿ ಸಿಂಗ್ ಜೊತೆ ಪ್ರಭುದೇವ ಮದುವೆ ಆಗಿರುವ ವಿಚಾರ ಬಹಿರಂಗವಾಗಿತ್ತು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಭುದೇವ ಎರಡನೇ ಮದುವೆ ವಿಚಾರವನ್ನು ಹಂಚಿಕೊಂಡಿದ್ದರು. ಹಿಮಾನಿ ಜೊತೆಗಿನ ಪರಿಚಯ, ಪ್ರೀತಿ-ಪ್ರೇಮ, ಮದುವೆ ಎಲ್ಲವನ್ನೂ ಜನರೆದುರು ತೆರೆದಿಟ್ಟಿದ್ದರು. ಇದೀಗ ಹಿಮಾನಿ ಮತ್ತು ಪ್ರಭುದೇವ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ

suddiyaana