ಅಮೆರಿಕದಲ್ಲಿ ಸಲಾರ್ ಆರ್ಭಟ – ರಿಲೀಸ್‌ಗೂ ಮುನ್ನವೇ ಲಕ್ಷಡಾಲರ್ ಕಲೆಕ್ಷನ್ ಮಾಡಿದ ಪ್ರಭಾಸ್ ಸಿನಿಮಾ!
ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈಗ ಅವರ ‘ಸಲಾರ್’ ಸಿನಿಮಾ ತೆರೆಕಾಣಲು ಸಿದ್ದವಾಗಿದೆ. ಪ್ರಶಾಂತ್ ನೀಲ್ ಅವರು ಈ ಬಾರಿ ತೆಲುಗು ನಟ ಪ್ರಭಾಸ್ ಅವರನ್ನು ತೆರೆ ಮೇಲೆ ಮಿಂಚಿಸುವುದಕ್ಕೆ ಸಿದ್ಧರಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಮೂಡಿಬಂದಿದೆ. ಇದೀಗ ಸಲಾರ್ ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ವಿಶೇಷ ಅಂದ್ರೆ ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನವೇ ಲಕ್ಷಡಾಲರ್ ಕಲೆಕ್ಷನ್ ಮಾಡಿಬಿಟ್ಟಿದೆ.
ಹೌದು, ಸಲಾರ್ ಸಿನಿಮಾ ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಸಲಾರ್ ಕ್ರೇಜ್ ಶುರುವಾಗಿದೆ. ಸಲಾರ್ ಮೇಲಿನ ನಿರೀಕ್ಷೆ ಎಷ್ಟಿದೆ ಅಂದ್ರೆ ಈಗಾಗಲೇ ಅಮೆರಿಕಾದಲ್ಲಿ ದಾಖಲೆ ಪ್ರಮಾಣದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಕಂಡಿದೆ. ಈಗಾಗಲೇ ಸಲಾರ್ ಸಿನಿಮಾ ಲಕ್ಷಡಾಲರ್ ಕಲೆಕ್ಷನ್ ಮಾಡಿಬಿಟ್ಟಿದೆ.
ಇನ್ನೂ ಓದಿ: ಸೆ. 28ಕ್ಕೆ ಸಲಾರ್ ರಿಲೀಸ್ ಆಗಲ್ಲ! – ಹೊಂಬಾಳೆ ಸಂಸ್ಥೆಯ ಅಧಿಕೃತ ಘೋಷಣೆ
ಹೌದು, ಸಲಾರ್ ಪ್ರಭಾಸ್ ಸಿನಿಮಾ ಅನ್ನೋದಕ್ಕಿಂತ ಹೆಚ್ಚಾಗಿ ಇದು ಕೆಜಿಎಫ್ ನಿರ್ದೇಶಕನ ಸಿನಿಮಾ ಎನ್ನುವ ನಿರೀಕ್ಷೆ. ಕೆಜಿಎಫ್ ಅನ್ನೋ ದೃಶ್ಯಕಾವ್ಯ ಕೊಟ್ಟು ಸಿನಿಮಾ ಮೇಕಿಂಗ್ ಸ್ಟೈಲ್‌ಗೆ ಹೊಸ ಭಾಷ್ಯ ಬರೆದ ನಿರ್ದೇಶಕನ ಇನ್ನೊಂದು ಸಿನಿಮಾ ಕೊನೆಗೂ ಬರ್ತಿದೆ. ಕೆಜಿಎಫ್ ಹೇಗೆ ವಿಶ್ವದಗಲ ಬಾಹು ಹಸ್ತ ಚಾಚಿತ್ತೋ ಅದಕ್ಕಿಂತ ಹೆಚ್ಚಾಗಿ ಸಲಾರ್ ಅಜಾನುಬಾಹುವಾಗಿ ಹೊರಹೊಮ್ಮಲಿದೆ. ಈಗಾಗಲೇ ಅನೇಕ ದೇಶಗಳಲ್ಲಿ ಸಲಾರ್ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಅಮೆರಿಕದಲ್ಲೂ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಆಗಿದೆ. ನಾರ್ಥ್ ಅಮೆರಿಕದಲ್ಲಿ ಹೆಚ್ಚಿನ ಭಾರತೀಯರಿದ್ದಾರೆ. ಆ ಭಾಗದಲ್ಲಿ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರವನ್ನ ನೋಡುವ ಕುತೂಹಲಹೆಚ್ಚಾಗಿದೆ. ಸಲಾರ್ ಸಿನಿಮಾ ರಿಲೀಸ್‌ಗೆ ಇನ್ನೊಂದು ತಿಂಗಳು ಇದೆ ಅನ್ನುವಾಗಲೇ ಅಡ್ವಾನ್ಸ್ ಬುಕಿಂಗ್ ಸ್ಟಾರ್ಟ್ ಆಗಿದ್ದು ಮೊದಲ ದಿನವೇ ಲಕ್ಷ ಡಾಲರ್ ಮೊತ್ತದ ಟಿಕೆಟ್ ಸೇಲ್ ಆಗಿದೆ.
ಇನ್ನು ಪ್ರಶಾಂತ್ ನೀಲ್ ಸ್ಟೈಲ್ ಆಫ್ ಮೇಕಿಂಗ್ ಅಂದ್ಮೇಲೆ ರಹಸ್ಯಗಳ ಜಾಸ್ತಿ. ಸಲಾರ್ ಪ್ರಭಾಸ್ ಲುಕ್‌ನ ಕೆಲವೇ ಕೆಲವು ಪೋಸ್ಟರ್‌ಗಳು ಬಿಟ್ಟರೆ ಟೀಸರ್‌ನಲ್ಲೂ ಪ್ರಭಾಸ್‌ರ ಲುಕ್ ರಹಸ್ಯವಾಗೇ ಇಟ್ಟಿದ್ದಾರೆ. ಸಾಮಾನ್ಯವಾಗಿ ಟ್ರೈಲರ್ ರಿಲೀಸ್ ಆದ್ಮೇಲೆ ಕ್ರೇಜ಼್ ಹುಟ್ಟಿಕೊಳ್ಳುತ್ತೆ. ಆದರೆ ಪ್ರಶಾಂತ್ ನೀಲ್ ಸಿನಿಮಾದಲ್ಲಿ ಇದ್ಯಾವ್ದೂ ಲೆಕ್ಕಕ್ಕೆ ಬರೋದೇ ಇಲ್ಲ. ಹೀಗಾಗಿ ಈ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಅಂದಹಾಗೆ ಸರಿಯಾಗಿ ಸಲಾರ್ ತೆರಗಪ್ಪಳಿಸೋದನ್ನ ನೋಡಲು ಇನ್ನೊಂದು ತಿಂಗಳಷ್ಟೇ ಬಾಕಿ ಇದೆ. ಡಿಸೆಂಬರ್ 1 ಟ್ರೈಲರ್ ರಿಲೀಸ್. ಬಳಿಕ ಪ್ರಭಾಸ್ ಅಖಾಡಕ್ಕಿಳಿಯುತ್ತಾರೆ. ಪ್ರಶಾಂತ್ ನೀಲ್ ಹಗಲು ರಾತ್ರಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತಗಾಗಿದ್ದಾರೆ. ಹೊಂಬಾಳೆ ಈ ಚಿತ್ರವನ್ನ ವಿಶ್ವವ್ಯಾಪಿ ಏಕಕಾಲದಲ್ಲಿ 5 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಬೆನ್ನುಮೂಳೆ ಸಮಸ್ಯೆಯಿಂದಾಗಿ ಪ್ರಭಾಸ್ ಟ್ರೀಟ್‌ಮೆಂಟ್ ಪಡೆದು ವಿಶ್ರಾಂತಿಯಲ್ಲಿದ್ದಾರೆ. ಟ್ರೈಲರ್ ರಿಲೀಸ್ ಆದ ಬಳಿಕವೇ ಪ್ರಚಾರದ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.