ಸಿನಿಮಾಗಳಿಗೆ ಸ್ಟಾರ್ ನಟರಿಗಿಂತ ಕಥೆಯೇ ಮುಖ್ಯ – ಪ್ರಭಾಸ್ ನಟನೆಯ ದಿ ರಾಜಾ ಸಾಬ್ ಮೂವಿ ಫ್ಲ್ಯಾಪ್!

ಮೊದಲೆಲ್ಲಾ ಪ್ರಭಾಸ್ ನಟನೆಯ ಸಿನಿಮಾ ಅಂದ್ರೆ ಎಷ್ಟೊಂದು ಕುತೂಹಲ ಇರುತ್ತಿತ್ತು. ಅಭಿಮಾನಿಗಳು ಕಾದು ಕುಳಿತು ಚಿತ್ರ ನೋಡುತ್ತಿದ್ರು. ಆದ್ರೆ ಬಾಹುಬಲಿ ಸಿನಿಮಾಗಳ ಬಳಿಕ ಪ್ರಭಾಸ್ ಅಷ್ಟೇನು ಸೌಂಡ್ ಮಾಡಿಲ್ಲ. ಇತ್ತೀಚೆಗೆ ಬಾರೀ ನಿರೀಕ್ಷೆ ಮೂಡಿಸಿದ್ದ ದಿ ರಾಜಾ ಸಾಬ್ ಚಿತ್ರವು ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದೆ.
ಇದನ್ನೂ ಓದಿ : ಲೇಡಿ ಜೊತೆ ಹಾಸಿಗೆಯಲ್ಲಿ ಸಿಕ್ಕಿಬಿದ್ದಿದ್ದ ಪಲಾಶ್ ಮುಚ್ಚಲ್ – ಸ್ಮೃತಿ ಮದುವೆ ರದ್ದಾಗಿದ್ದಕ್ಕೆ ಕಾರಣ ರಿವೀಲ್
ಪ್ರಭಾಸ್ ನಟನೆಯ ಸಿನಿಮಾಗಳಂದ್ರೆ ಬಿಗ್ ಬಜೆಟ್ ಸಿನಿಮಾಗಳು. ಹೀಗಾಗಿ ದಿ ರಾಜಾ ಸಾಬ್ ಚಿತ್ರಕ್ಕೂ ದುಬಾರಿ ಖರ್ಚು ಮಾಡಿ ಮಾಡಿದ್ದ ಸಿನಿಮಾ. ಆದ್ರೆ ತೆರೆ ಕಂಡು ವಾರ ಕಳೆದ್ರೂ ಉತ್ತಮ ರೆಸ್ಪಾನ್ಸ್ ಸಿಕ್ಕಿಲ್ಲ. ನಟ ಡಾರ್ಲಿಂಗ್ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಚಿತ್ರವು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ದೊಡ್ಡ ಬಜೆಟ್ ಹೊಂದಿರುವ ಈ ಚಿತ್ರ ಈಗ ಭಾರೀ ಸಂಕಷ್ಟದಲ್ಲಿದೆ. ಪ್ರಭಾಸ್ ಅವರ ‘ದಿ ರಾಜಾ ಸಾಬ್’. ಈ ಚಿತ್ರ ಅತಿದೊಡ್ಡ ಫ್ಲಾಪ್ ಚಿತ್ರವಾಗಿದೆ. ಪ್ರಭಾಸ್ ಅವರ ಸ್ಟಾರ್ಡಮ್ ಕಾರಣಕ್ಕೆ ಸಿನಿಮಾ ಒಳ್ಳೆಯ ಓಪನಿಂಗ್ ಪಡೆಯಿತು. ಆದರೆ ಅದೇ ವೇಗವನ್ನು ಬಳಿಕ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಬಿಡುಗಡೆಯಾದ ಹನ್ನೆರಡನೇ ದಿನದಂದು, ಈ ಚಿತ್ರಕ್ಕೆ ಕೆಲವು ಲಕ್ಷ ರೂಪಾಯಿಗಳನ್ನು ಗಳಿಸುವುದು ಸಹ ಕಷ್ಟಕರವಾಗಿದೆ. 400 ಕೋಟಿ ರೂಪಾಯಿಗಳ ಬಜೆಟ್ ನಲ್ಲಿ ನಿರ್ಮಿಸಲಾದ ಈ ಚಿತ್ರವು ಇಲ್ಲಿಯವರೆಗೆ ಶೇಕಡಾ 64ಕ್ಕಿಂತ ಹೆಚ್ಚು ನಷ್ಟವನ್ನು ಕಂಡಿದೆ. ಈ ಚಿತ್ರ ಥಿಯೇಟರ್ಗಳಲ್ಲಿ ಬಿಡುಗಡೆಯಾದ ತಕ್ಷಣವೇ ಚಿತ್ರದ ಭವಿಷ್ಯ ಸ್ಪಷ್ಟವಾಯಿತು. ಮೊದಲ ದಿನವೇ ಈ ಚಲನಚಿತ್ರದ ಬಗ್ಗೆ ಕೆಟ್ಟ ವಿಮರ್ಶೆಗಳು ಬಂದವು. ಪ್ರೇಕ್ಷಕರು ಕೂಡ ಚಿತ್ರವನ್ನು ಇಷ್ಟಪಡಲಿಲ್ಲ. ಚಿತ್ರದ ಕಥೆ ಮತ್ತು ನಿರ್ದೇಶನವನ್ನು ತುಂಬಾ ಟೀಕಿಸಲಾಯಿತು. ನೋಡಿದ ಜನರು ಈ ಸಿನಿಮಾ ಬಗ್ಗೆ ಕೆಟ್ಟ ಅಭಿಪ್ರಾಯ ಕೊಟ್ಟರು. ಅಲ್ಲಿಗೆ ಹೋಗಬೇಕಾದ ಜನರು ಸಿನಿಮಾ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡರು.
ಮೊದಲ ವಾರದಲ್ಲಿ 130.25 ಕೋಟಿ ರೂ. ಗಳಿಕೆ ಮಾಡಿತು. ಬಳಿಕ ಎಂಟನೇ ದಿನ ಕೇವಲ 3.5 ಕೋಟಿ ರೂ., ಒಂಬತ್ತನೇ ದಿನ 3 ಕೋಟಿ ರೂ., ಹನ್ನೊಂದನೇ ದಿನ 2.6 ಕೋಟಿ ರೂ., ಹನ್ನೆರಡನೇ ದಿನ 80 ಲಕ್ಷ ರೂ. ಮತ್ತು ಹದಿಮೂರನೇ ದಿನ 50 ಲಕ್ಷ ರೂ. ಗಳಿಸಿತು. ಕಳೆದ 14 ದಿನಗಳಲ್ಲಿ ‘ದಿ ರಾಜಾ ಸಾಬ್’ ಚಿತ್ರದ ಒಟ್ಟು ಗಳಿಕೆ ಸುಮಾರು 142.71 ಕೋಟಿ ರೂ. ಇದರಿಂದಾಗಿ, ನಿರ್ಮಾಪಕರು ಶೇ. 64.48 ಕ್ಕಿಂತ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಟಾಲಿವುಡ್ ಕಂಡ ಅತಿದೊಡ್ಡ ವೈಫಲ್ಯಗಳಲ್ಲಿ ಈ ಚಿತ್ರದ ಗಳಿಕೆ ಒಂದಾಗಿದೆ. ಒಟ್ಟಿನಲ್ಲಿ, ಈಗ ಸ್ಟಾರ್ ವ್ಯಾಲ್ಯೂಗಿಂತ ಕಥೆಯೇ ಚಿತ್ರದ ಗೆಲುವಿಗೆ ಮುಖ್ಯ ಎಂಬ ಮಾತು ಮತ್ತೆ ಕೇಳಿಬರುತ್ತಿದೆ.

ನೋಡಿರಿ

