ಸಿನಿಮಾ ಕೆಲಸಗಳಿಂದ ಪ್ರಭಾಸ್ ಲಾಂಗ್ ಬ್ರೇಕ್ – ಸರ್ಜರಿಗೆ ಒಳಗಾಗಲಿದ್ದಾರಂತೆ ಬಾಹುಬಲಿ ಹೀರೋ
ಬ್ಲಾಕ್‌ಬಸ್ಟರ್ ಸಿನಿಮಾ ಬಾಹುಬಲಿ ಶೂಟಿಂಗ್ ವೇಳೆ ನಟ ಪ್ರಭಾಸ್ ಕಾಲಿಗೆ ಗಾಯವಾಗಿತ್ತು. ಬಾಹುಬಲಿ ಚಿತ್ರದ ಸಾಹಸ ದೃಶ್ಯವೊಂದರಲ್ಲಿ ಪ್ರಭಾಸ್ ಗಾಯಗೊಂಡಿದ್ದರು. ಅಂದಿನಿಂದ ಇಂದಿನವರೆಗೂ ಆಗಾಗ ಪ್ರಭಾಸ್‌ಗೆ ಕಾಲುನೋವಿನ ಸಮಸ್ಯೆ ಕಾಡುತ್ತಿತ್ತು. ಇದೇ ಸಮಸ್ಯೆಗೆ ಈಗಾಗಲೇ ಪ್ರಭಾಸ್ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಆದರೆ, ಇದೀಗ ಕಾಲು ನೋವು ಮತ್ತೆ ಕಾಣಿಸಿಕೊಂಡಿದ್ದು ಚಿಕಿತ್ಸೆಗಾಗಿ ಪ್ರಭಾಸ್ ಅಮೆರಿಕಾಕ್ಕೆ ತೆರಳಲಿದ್ದಾರಂತೆ.
ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದ ಸಲಾರ್ ಟೀಸರ್ – ಟ್ರೇಲರ್ ಬಗ್ಗೆ ಮಹತ್ವದ ಮಾಹಿತಿ ನೀಡಿದ ಚಿತ್ರತಂಡ
ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ಪ್ರಭಾಸ್‌ಗೆ ಆರೋಗ್ಯ ಸಮಸ್ಯೆ ಎದುರಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಲಿದ್ದಾರಂತೆ. ಬಾಹುಬಲಿ ಚಿತ್ರದ ಸಾಹಸ ದೃಶ್ಯವೊಂದರಲ್ಲಿ ಪ್ರಭಾಸ್ ಕಾಲಿಗೆ ಗಾಯ ಮಾಡಿಕೊಂಡಿದ್ದರು. ಅದೇ ಗಾಯ ಈಗ ಪ್ರಭಾಸ್‌ಗೆ ಮತ್ತಷ್ಟು ಸಮಸ್ಯೆಯಾಗಿ ಕಾಡುತ್ತಿದೆಯಂತೆ. ಈ ಕಾರಣಕ್ಕೆ ಸಲಾರ್ ಹಾಗೂ ಕಲ್ಕಿ ಸಿನಿಮಾದ ಶೂಟಿಂಗ್ ಮುಗಿದ ಬಳಿಕ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಲಿದ್ದಾರಂತೆ. ಶಸ್ತ್ರಚಿಕಿತ್ಸೆಯ ನಂತರ ಪ್ರಭಾಸ್ ಕೆಲವು ತಿಂಗಳು ಸಂಪೂರ್ಣ ವಿಶ್ರಾಂತಿಯಲ್ಲಿರುತ್ತಾರೆ. ಈ ವರ್ಷದ ಅಂತ್ಯದಲ್ಲಿ ಪ್ರಭಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎನ್ನಲಾಗ್ತಿದೆ. ಇದಕ್ಕಾಗಿ ಸಿನಿಮಾ ಕೆಲಸಗಳಿಂದಲೂ ಬ್ರೇಕ್ ತೆೆಗೆದುಕೊಳ್ಳಲಿದ್ದಾರೆ.
ಪ್ರಭಾಸ್ ಸಿನಿಮಾಗಳ ವಿಚಾರಕ್ಕೆ ಬಂದರೆ ಸಲಾರ್ ಅವರು ನಾಯಕನಾಗಿ ನಟಿಸುತ್ತಿರುವ ಮತ್ತೊಂದು ಅದ್ಧೂರಿ ಆಕ್ಷನ್ ಸಿನಿಮಾ. ಈ ಸಿನಿಮಾವನ್ನು ಕೆಜಿಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಭಾರೀ ನಿರೀಕ್ಷೆಗಳ ನಡುವೆ ಬರುತ್ತಿರುವ ಈ ಸಿನಿಮಾದ ಚಿತ್ರೀಕರಣ ಮುಗಿದಿದೆ. ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ.ಸೆಪ್ಟೆಂಬರ್ 28 ರಂದು ಈ ಸಿನಿಮಾ ರಿಲೀಸ್ ಆಗಲಿದೆ. ದೇಶಾದ್ಯಂತ ಪ್ರಭಾಸ್ ಅಭಿಮಾನಿಗಳು ‘ಸಲಾರ್’ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.