‘ಪಠಾಣ್’ ನಿರ್ದೇಶಕನ ಜೊತೆ ಪ್ರಭಾಸ್ ಸಿನಿಮಾ – ಮಾಸ್ ಅವತಾರಕ್ಕೆ ಕಾಯ್ತಿದ್ದಾರೆ ಫ್ಯಾನ್ಸ್

‘ಪಠಾಣ್’ ನಿರ್ದೇಶಕನ ಜೊತೆ ಪ್ರಭಾಸ್ ಸಿನಿಮಾ – ಮಾಸ್ ಅವತಾರಕ್ಕೆ ಕಾಯ್ತಿದ್ದಾರೆ ಫ್ಯಾನ್ಸ್

ತೆಲುಗಿನ ಮಾಸ್ ಹೀರೋ ಪ್ರಭಾಸ್ ಯಾಕೋ ದೊಡ್ಡ ಮಟ್ಟದ ಯಶಸ್ಸನ್ನು ಕಾಣುತ್ತಿಲ್ಲ. ಯಾವ ಚಿತ್ರ ಒಪ್ಪಿಕೊಂಡರೂ ನಿರಾಶೆಯೇ ಕಟ್ಟಿಟ್ಟ ಬುತ್ತಿ. ರಾಧೆ ಶ್ಯಾಮ್ ಚಿತ್ರವಂತೂ ಅಭಿಮಾನಿಗಳಿಗೆ ಮಾಡಿರುವ ನಿರಾಸೆ ಅಷ್ಟಿಷ್ಟಲ್ಲ. ಸ್ವಲ್ಪ ಸಮಯ ಬ್ರೇಕ್ ತೆಗೆದುಕೊಂಡಿದ್ದ ಪ್ರಭಾಸ್ ಈಗ ಮತ್ತೆ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ಪಠಾಣ್​’ ಚಿತ್ರದ ನಿರ್ದೇಶಕ ಸಿದ್ದಾರ್ಥ್​ ಆನಂದ್ ಜತೆ ಪ್ರಭಾಸ್ ಸಿನಿಮಾ ಮಾಡುತ್ತಿದ್ದಾರೆ. ಮಾಸ್ ಸಿನಿಮಾ ಮಾಡುವುದರಲ್ಲಿ ಎಕ್ಸ್‌ಫರ್ಟ್ ಆಗಿರುವ ಸಿದ್ದಾರ್ಥ್ ಆನಂದ್ ಜೊತೆ ಪ್ರಭಾಸ್ ನಟಿಸಲು ಒಪ್ಪಿಕೊಂಡಿರುವುದು ಪ್ರಭಾಸ್ ಅಭಿಮಾನಿಗಳಲ್ಲಿ ಸಂತಸ ತಂದಿದೆ.

ಇದನ್ನೂ ಓದಿ:  ‘ಲೈಗರ್’ ಸಿನಿಮಾ ಸೋಲಿನ ನಂತರ ವಿಜಯ್ ದೇವರಕೊಂಡ ಕಮ್‌ಬ್ಯಾಕ್ – ಖಾಕಿ ಗೆಟಪ್‌ನ ಪೋಸ್ಟರ್ ರಿಲೀಸ್

‘ರಾಧೆ ಶ್ಯಾಮ್​’ ಚಿತ್ರದಲ್ಲಿ ಪ್ರಭಾಸ್ ರೋಲ್ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿತ್ತು. ಆದರೆ, ಇದರಲ್ಲಿ ಪ್ರಭಾಸ್ ಮಾಸ್ ಅವತಾರ ಇಲ್ಲದಿರುವುದು ಅಭಿಮಾನಿಗಳಿಗೆ ನಿರಾಶೆಯಾಗಿತ್ತು. ಆ ಚಿತ್ರದಲ್ಲಿ ಫೈಟಿಂಗ್ ಕೂಡಾ ಇರಲಿಲ್ಲ. ಹೀಗಾಗಿ ಪ್ರಭಾಸ್ ಮಾಸ್ ಅವತಾರಕ್ಕೆ ಫ್ಯಾನ್ಸ್ ಕಾಯ್ತಿದ್ದಾರೆ. ಇನ್ನು ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ‘ಆದಿಪುರುಷ್​’, ‘ಪ್ರಾಜೆಕ್ಟ್ ಕೆ’, ‘ಸಲಾರ್​’ ಮೊದಲಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್​’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

suddiyaana