ಶಿವರಾತ್ರಿ ಹಬ್ಬದ ದಿನವೇ ಪ್ರಭಾಸ್ ಸಿನಿಮಾದ ರಿಲೀಸ್ ಡೇಟ್ ಘೋಷಣೆ
ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ, ರಿಲೀಸ್ ಡೇಟ್ ಮಾತ್ರ ರಿವೀಲ್

ಶಿವರಾತ್ರಿ ಹಬ್ಬದ ದಿನವೇ ಪ್ರಭಾಸ್ ಸಿನಿಮಾದ ರಿಲೀಸ್ ಡೇಟ್ ಘೋಷಣೆಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ, ರಿಲೀಸ್ ಡೇಟ್ ಮಾತ್ರ ರಿವೀಲ್

ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಪ್ರಾಜೆಕ್ಟ್​ ಕೆ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಶಿವರಾತ್ರಿ ಹಬ್ಬದ ದಿನವೇ ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಚಿತ್ರದ ಪೋಸ್ಟರ್, ಟೈಟಲ್, ಟೀಸರ್ ಹಾಗೂ ಟ್ರೇಲರ್​ಗಳು ರಿಲೀಸ್ ಆಗುತ್ತವೆ. ಈ ವಿಶೇಷ ದಿನದಂದು ‘ಪ್ರಾಜೆಕ್ಟ್​ ಕೆ’ ತಂಡದವರು ರಿಲೀಸ್ ದಿನಾಂಕ ರಿವೀಲ್ ಮಾಡಿದ್ದಾರೆ. ಸಂಕ್ರಾಂತಿ ಪ್ರಯುಕ್ತ 2024ರ ಜನವರಿ 12ರಂದು ಸಿನಿಮಾ ರಿಲೀಸ್ ಆಗಲಿದೆ.

ಇದನ್ನೂ ಓದಿ:  ರಿಷಬ್ ಶೆಟ್ಟಿಗೆ  ದಾದಾ ಸಾಹೇಬ್ ಫಾಲ್ಕೆ ಚಿತ್ರೋದ್ಯಮದ ಪ್ರಶಸ್ತಿ

ಖ್ಯಾತ ನಿರ್ದೇಶಕ ನಾಗ್​ ಅಶ್ವಿನ್​ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಸೈನ್ಸ್​ ಫಿಕ್ಷನ್​ ಕಥೆಯನ್ನು ಸಿನಿಮಾ ಹೊಂದಿದೆ. ಈ ಸಿನಿಮಾಗೆ ಇನ್ನೂ ಅಧಿಕೃತವಾಗಿ ಟೈಟಲ್ ಫಿಕ್ಸ್ ಆಗಿಲ್ಲ. ಹೀಗಿರುವಾಗಲೇ ಚಿತ್ರದ ರಿಲೀಸ್ ದಿನಾಂಕ ಶಿವರಾತ್ರಿ ಹಬ್ಬದ ದಿನವೇ ಘೋಷಣೆ ಮಾಡಲಾಗಿದೆ. ಸಂಕ್ರಾಂತಿ ಸಮಯದಂದು ಹಲವು ದೊಡ್ಡ ಪ್ರಾಜೆಕ್ಟ್​ಗಳು ತೆರೆಗೆ ಬರುತ್ತವೆ. ಹಾಗೆಯೇ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ನಟನೆಯ ‘ಪ್ರಾಜೆಕ್ಟ್​ ಕೆ’ ಸಿನಿಮಾ ಕೂಡಾ ಅಂದೇ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ಇತ್ತೀಚೆಗೆ ಸಿನಿಮಾಗಳು ಎರಡು ಪಾರ್ಟ್​ನಲ್ಲಿ ರಿಲೀಸ್ ಮಾಡುವ ಟ್ರೆಂಡ್ ಜೋರಾಗಿದೆ. ‘ಪ್ರಾಜೆಕ್ಟ್​ ಕೆ’ ಸಿನಿಮಾ ಕೂಡ ಎರಡು ಪಾರ್ಟ್​ನಲ್ಲಿ ಬರುತ್ತಿದೆ. ಚಿತ್ರದ ಕಥೆ ಬಹಳ ದೊಡ್ಡದಾಗಿದೆ. ಹೀಗಾಗಿ ಅದನ್ನು ಎರಡು ಪಾರ್ಟ್​ಗಳಲ್ಲಿ ತರಲು ನಾಗ್ ಅಶ್ವಿನ್ ನಿರ್ಧರಿಸಿದ್ದಾರೆ.

suddiyaana