ಎಂಟು ವರ್ಷಗಳ ಬಳಿಕ ಜೊತೆಯಾದ ಪ್ರಭಾಸ್-ಅನುಷ್ಕಾ – ಹಿಟ್ ಜೋಡಿ ಜೊತೆಯಾಗಿದ್ದು ಸಿನಿಮಾದಲ್ಲಿ ಅಲ್ಲ..!

ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ. ತೆಲುಗು ಚಿತ್ರರಂಗದ ಹಿಟ್ ಜೋಡಿ. ಈ ಜೋಡಿ ಮದುವೆಯಾಗಬೇಕು ಅಂತಾ ಬಯಸಿದ ಅಭಿಮಾನಿಗಳು ಅದೆಷ್ಟೋ.. ಜೊತೆಗೆ ಇಬ್ಬರು ಕೂಡಾ ಪ್ರೀತಿಯಲ್ಲಿದ್ದರು ಅನ್ನೋ ಸುದ್ದಿಯೂ ಇದೆ. ಆದರೆ, ಇಬ್ಬರು ಗುಡ್ ಫ್ರೆಂಡ್ಸ್ ಅನ್ನೋದು ಕೂಡಾ ಅಷ್ಟೇ ಸತ್ಯ. ಇದೀಗ ಟಾಲಿವುಡ್ನ ಬೆಸ್ಟ್ ಜೋಡಿ ಸುಮಾರು ಎಂಟು ವರ್ಷಗಳ ಬಳಿಕ ಅಭಿಮಾನಿಗಳ ಮುಂದೆ ಬರಲಿದ್ದಾರೆ.
ಇದನ್ನೂ ಓದಿ:ರಜಿನಿಯನ್ನೇ ಹಿಂದಿಕ್ಕಿದ ಸೌಬಿನ್ ಶಾಹಿರ್ – ಕೂಲಿಯ ಮೋನಿಕಾ ಡ್ಯಾನ್ಸ್ ಸೂಪರ್ HIT
ತೆಲುಗು ಚಿತ್ರರಂಗದ ಸೂಪರ್ ಹಿಟ್ ಜೋಡಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮತ್ತೆ ಒಂದಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಜೋಡಿ ಅಭಿಮಾನಿಗಳ ಮೆಚ್ಚಿನ ಜೋಡಿ ಕೂಡಾ ಹೌದು. ಇಬ್ಬರೂ ಒಟ್ಟಿಗೆ ನಟಿಸಿರುವ ಎಲ್ಲ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ. ‘ಬಿಲ್ಲ’, ‘ಮಿರ್ಚಿ’, ‘ಬಾಹುಬಲಿ’, ‘ಬಾಹುಬಲಿ 2’ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆದರೆ ‘ಬಾಹುಬಲಿ 2’ ಸಿನಿಮಾದ ಬಳಿಕ ಈ ಜೋಡಿ ಒಟ್ಟಿಗೆ ನಟಿಸಿಲ್ಲ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಇಬ್ಬರೂ ಮದುವೆಯಾಗುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು. ಇತ್ತೀಚಿನ ದಿನಗಳಲ್ಲಿ ಇಬ್ಬರೂ ಜೊತೆಯಲ್ಲಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ 8 ವರ್ಷಗಳ ಬಳಿಕ ಈ ಜೋಡಿ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದೆ.
ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಸಿನಿಮಾದಲ್ಲಿ ಅಲ್ಲ. ಒಟ್ಟಿಗೆ ಸಂದರ್ಶನವೊಂದಕ್ಕೆ ಹಾಜರಾಗಲಿದ್ದಾರೆ. ಇದು ಸಾಮಾನ್ಯ ಸಂದರ್ಶನದಂತೆ ಇರದೆ ಫನ್ನಿ ಪಾಡ್ಕಾಸ್ಟ್ ರೀತಿ ಇರಲಿದೆ. ‘ಬಾಹುಬಲಿ’ ಸಿನಿಮಾ ಎಂಟು ವರ್ಷಗಳ ಬಳಿಕ ಮರು ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರಚಾರಕ್ಕಾಗಿ ಈ ಜೋಡಿ ಒಟ್ಟಿಗೆ ಸಂದರ್ಶನದಲ್ಲಿ ಭಾಗಿಯಾಗಿ ಸಿನಿಮಾದ ಪ್ರಚಾರ ಮಾಡಲಿದ್ದಾರೆ. ಪ್ರಭಾಸ್, ಅನುಷ್ಕಾ ಮಾತ್ರವೇ ಅಲ್ಲದೆ ಇದೇ ಫನ್ನಿ ಸಂದರ್ಶನದಲ್ಲಿ ರಾಣಾ ದಗ್ಗುಬಾಟಿ, ತಮನ್ನಾ ಭಾಟಿಯಾ ಮತ್ತು ರಾಜಮೌಳಿ ಸಹ ಇರಲಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ‘ಬಾಹುಬಲಿ’ ಸಿನಿಮಾದ ಇನ್ನಷ್ಟು ಕಲಾವಿದರು, ತಂತ್ರಜ್ಞರು ಸಹ ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಕಾರ್ಯಕ್ರಮದ ಶೂಟಿಂಗ್ ಕೆಲವೇ ದಿನಗಳಲ್ಲಿ ನಡೆಯಲಿದ್ದು, ಅಕ್ಟೋಬರ್ ತಿಂಗಳಲ್ಲಿ ಈ ಕಾರ್ಯಕ್ರಮ ಯೂಟ್ಯೂಬ್ ಹಾಗೂ ಟಿವಿ ಚಾನೆಲ್ನಲ್ಲಿ ಬಿಡುಗಡೆ ಆಗಲಿದೆಯಂತೆ. ಕೆಲವು ದಿನಗಳ ಹಿಂದಷ್ಟೆ ‘ಬಾಹುಬಲಿ’ ಸಿನಿಮಾದ ಬಿಡುಗಡೆ ವಾರ್ಷಿಕೋತ್ಸಕ್ಕೆ ಚಿತ್ರತಂಡ ಒಟ್ಟಾಗಿ ಸೇರಿ ಪಾರ್ಟಿ ಮಾಡಿತ್ತು. ಆ ಕಾರ್ಯಕ್ರಮದ ಚಿತ್ರಗಳನ್ನು ರಾಜಮೌಳಿ ಹಾಗೂ ಇತರರು ಹಂಚಿಕೊಂಡಿದ್ದರು. ಆದರೆ ಆ ಚಿತ್ರಗಳಲ್ಲಿ ಅನುಷ್ಕಾ ಶೆಟ್ಟಿ, ತಮ್ನನಾ ಭಾಟಿಯಾ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಈ ಇಬ್ಬರೂ ಸಹ ಭಾಗಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಅಸಲಿಗೆ ‘ಬಾಹುಬಲಿ’ ಸಿನಿಮಾದ ಶೂಟಿಂಗ್ ವೇಳೆಯೂ ಸಹ ಇಂಥಹುದೇ ಒಂದು ಫನ್ನಿ ಸ್ಕಿಟ್ ಒಂದನ್ನು ಚಿತ್ರತಂಡ ಮಾಡಿತ್ತು. ತೆಲುಗು ಚಿತ್ರರಂಗವೆಲ್ಲ ಸೇರಿ ಪ್ರವಾಹ ಸಂತ್ರಸ್ತರಿಗೆ ಹಣ ಒಟ್ಟುಗೂಡಿಸಲು ಕಾರ್ಯಕ್ರಮ ಮಾಡಿತ್ತು, ಆ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸಲು ಆಗದ ‘ಬಾಹುಬಲಿ’ ತಂಡ ತಾವು ಇದ್ದಲ್ಲಿಯೇ ಎಲ್ಲರೂ ಒಟ್ಟಾಗಿ ಅಡುಗೆ ಸವಾಲು ಮಾಡಿ ತಮಾಷೆಯ ವಿಡಿಯೋ ಅನ್ನು ಅಪ್ಲೋಡ್ ಮಾಡಿದ್ದರು. ಈಗ ಮತ್ತೆ ಅಂಥಹುದೇ ಕಾರ್ಯಕ್ರಮವನ್ನು ಮಾಡುತ್ತಿದೆ ಚಿತ್ರತಂಡ.

ನೋಡಿರಿ

