ಪವರ್‌ಫುಲ್ ಪಾಂಡ್ಯ ವಿಶ್ವದಾಖಲೆ – 2000 ರನ್, 100 ವಿಕೆಟ್‌ಗಳ ಸರದಾರ ಹಾರ್ದಿಕ್ ಪಾಂಡ್ಯ

ಸೌತ್‌ಆಫ್ರಿಕಾ ಎದುರು ಪವರ್‌ಫುಲ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ. ದಕ್ಷಿಣ ಆಫ್ರಿಕಾ ವಿರುದ್ಧ ಅಹಮದಾಬಾದ್‌ನಲ್ಲಿ ನಡೆದ ಅಂತಿಮ ಟಿ20ಯಲ್ಲಿ ಹಾರ್ದಿಕ್ ಪಾಂಡ್ಯ ಈ ಸಾಧನೆ ಮಾಡಿದರು.
ಇದನ್ನೂ ಓದಿ:ಸೂರ್ಯ ದಿ ಬ್ಯಾಟರ್ ಕಾಣೆಯಾಗಿದ್ದಾರೆ – ನಾಯಕ ಸೂರ್ಯಕುಮಾರ್ಗೆ ದಿಢೀರ್ ಜ್ಞಾನೋದಯ
ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ಕ್ರಿಕೆಟ್ನಲ್ಲಿ ಚರಿತ್ರೆ ಸೃಷ್ಟಿಸಿದ್ದಾರೆ. ಅಂತರರಾಷ್ಟ್ರೀಯ ಟಿ20ಗಳಲ್ಲಿ 2000 ರನ್ ಗಳಿಸಿ 100 ವಿಕೆಟ್ ಪಡೆದ ಮೊದಲ ವೇಗದ ಬೌಲಿಂಗ್ ಆಲ್‌ರೌಂಡರ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಪಾಂಡ್ಯ 1 ವಿಕೆಟ್, 63 ರನ್ಗಳಿಸುವ ಮೂಲಕ ಈ ಸಾಧನೆ ಮಾಡಿದರು. ಟಿ20ಯಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಹಾರ್ದಿಕ್ ಪಾತ್ರರಾಗಿದ್ದಾರೆ. ಭಾರತದ ಬೇರೆ ಯಾವುದೇ ಆಟಗಾರ ಕನಿಷ್ಠ 1000 ರನ್ ಗಳಿಸಿ 100 ವಿಕೆಟ್ ಪಡೆದಿಲ್ಲ.
ಹಾರ್ದಿಕ್ ಪಾಂಡ್ಯ ಫಿಯರ್‌ಲೆಸ್ ಬ್ಯಾಟಿಂಗ್ ಮೂಲಕ ದಕ್ಷಿಣ ಆಫ್ರಿಕಾ ಬೌಲರ್ಗಳನ್ನ ಚೆನ್ನಾಗಿಯೇ ಬೆಂಡೆತ್ತಿದರು. ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಹೊಡೆದ ಹಾರ್ದಿಕ್, ಮೊದಲ 7 ಎಸೆತಗಳಲ್ಲಿ 31 ರನ್ ಗಳಿಸಿದರು. ನಂತರ 16 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಈ ಮೂಲಕ ಭಾರತಕ್ಕಾಗಿ ವೇಗದ ಅರ್ಧಶತಕ ಗಳಿಸಿದ ಎರಡನೇ ವೇಗದ ಆಟಗಾರ ಎನಿಸಿಕೊಂಡರು. ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ 2007ರ ವಿಶ್ವಕಪ್ನಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇದೀಗ ಹಾರ್ದಿಕ್ 16 ಎಸೆತಗಳಲ್ಲಿ ಈ ಸಾಧನೆ ಮಾಡಿ 2ನೇ ಸ್ಥಾನ ಪಡೆದರು. ಅಭಿಷೇಕ್ ಶರ್ಮಾ, 17 ಎಸೆತ, ಕನ್ನಡಿಗ ಕೆಎಲ್ ರಾಹುಲ್ 18 ಎಸೆತಗಳಲ್ಲಿ ಸ್ಕಾಟ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದಾರೆ. ಸೂರ್ಯಕುಮಾರ್ ಕೂಡ 18 ಎಸೆತಗಳಲ್ಲಿ 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅರ್ಧಶತಕ ಸಿಡಿಸಿದ್ದಾರೆ. ಈ ಸರಣಿಯಲ್ಲಿ 100 ವಿಕೆಟ್‌ಗಳ ಮೈಲಿಗಲ್ಲು ತಲುಪಿದ್ದರು ಹಾರ್ದಿಕ್ ಪಾಂಡ್ಯ. ಈ ಸಾಧನೆ ಮಾಡಿದ ಐದನೇ ಆಟಗಾರರಾಗಿದ್ದಾರೆ ಪಾಂಡ್ಯ. ಬಾಂಗ್ಲಾದೇಶದ ಸ್ಪಿನ್ ಆಲ್‌ರೌಂಡರ್ ಶಕೀಬ್ ಅಲ್ ಹಸನ್ 149 ವಿಕೆಟ್‌ಗಳು ಮತ್ತು 2551 ರನ್‌ಗಳೊಂದಿಗೆ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ನೋಡಿರಿ

