ಕುರ್ಚಿ ಕದನ ಬೆನ್ನಲ್ಲೇ ದೇವರ ಮೊರೆ ಹೋದ ಡಿಸಿಎಂ – ಡಿಕೆಶಿ ನಿವಾಸಕ್ಕೆ ಹಂದನ ಕೆರೆ ಅಜ್ಜಯ್ಯನ ಗದ್ದುಗೆ ಆಗಮನ!

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಪವರ್ ಶೇರಿಂಗ್ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯಲ್ಲಿದೆ. ಇದೇ ವಿಚಾರವಾಗಿ ಹಲವು ನಾಯಕರು ಹೈಕಮಾಂಡ್ ಮೊರೆ ಹೋಗುತ್ತಿದ್ದಾರೆ. ಇವೆಲ್ಲದರ ನಡುವೆ ಡಿಸಿಎಂ ಡಿಕೆಶಿ ಟೆಂಪಲ್ ರನ್ ಮುಂದುವರಿಸಿದ್ದಾರೆ. ಇದೀಗ ಡಿಕೆ ಶಿವಕುಮಾರ್ ಅವರು ತಮ್ಮ ನಿವಾಸಕ್ಕೆ ಅಜ್ಜಯ್ಯನ ಗದ್ದುಗೆ ಕರೆಸಿ ಕುಟುಂಬ ಸಮೇತರಾಗಿ ಪೂಜೆ ನೆರವೇರಿಸಿದ್ದಾರೆ.
ಇದನ್ನೂ ಓದಿ: ದುಬಾರಿಯಾಯ್ತು ಕೋಳಿ ಮೊಟ್ಟೆ! – ಏಕಾಏಕಿ ದರ ಏರಿಕೆಯಾಗಿದ್ದು ಯಾಕೆ?
ಕುರ್ಚಿ ಕದನ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ. ಅರಸೀಕೆರೆ ತಾಲ್ಲೂಕಿನ, ಯಾದಪುರದಲ್ಲಿರುವ ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿ ಅವರ ಉತ್ಸವಮೂರ್ತಿಯನ್ನ ಬೆಂಗಳೂರಿನ ನಿವಾಸಕ್ಕೆ ಕರೆಸಿಕೊಂಡು ಕುಟುಂಬಸ್ಥರೊಂದಿಗೆ ಸಂಕಲ್ಪ ಪೂಜೆ ಸಲ್ಲಿಸಿದ್ದರು. ಅದಾದ ಬಳಿಕ ಡಿಕೆಶಿ ಮನೆಯಲ್ಲಿ ನಾಗ ಸಾಧುಗಳು ಪ್ರತ್ಯಕ್ಷ ಆಗಿದ್ರು. ಕಾಶಿಯಿಂದ ಬಂದಿದ್ದ ನಾಗಸಾಧುಗಳು ಡಿಕೆಶಿ ತಲೆ ಮೇಲೆ ಕೈ ಇಟ್ಟು ಸಿಎಂ ಆಗಲಿ ಎಂದು ಆಶೀರ್ವದಿಸಿದ್ದರು. ಇದೀಗ ನಿವಾಸಕ್ಕೆ ಅಜ್ಜಯ್ಯನ ಗದ್ದುಗೆ ಕರೆಸಿದ್ದಾರೆ.
ಹಂದನ ಕೆರೆ ಅಜ್ಜಯ್ಯನ ಗದ್ದುಗೆ ಇಂದು ಡಿಕೆಶಿ ಮನೆಗೆ ಆಗಮಿಸಿದೆ. ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಅಜ್ಜಯ್ಯನ ಗದ್ದುಗೆ ಕರೆಸಿ ಕುಟುಂಬ ಸಮೇತರಾಗಿ ಪೂಜೆ ನೆರವೇರಿಸಿದ್ದಾರೆ.

ನೋಡಿರಿ

