ಪವರ್ ಪ್ಲೇ ಸುಲ್ತಾನ್ ಜೈಸ್ವಾಲ್ – ರೋಹಿತ್, ರಾಹುಲ್ ಸೈಡ್‌ಲೈನ್
ICC Rankingನಲ್ಲೂ ಯಶಸ್ವೀ ಜಿಗಿತ

ಜಿಂಬಾಬ್ವೆ ಟಿ20 ಸರಣಿ ಗೆದ್ದ ಭಾರತದ ಯಂಗಟೈಗರ್ಸ್ ಸಖತ್ ಜೋಶ್‌ನಲ್ಲಿದ್ದಾರೆ. ಅದ್ರಲ್ಲೂ ಈ ಟೀಮ್‌ನಲ್ಲಿ ಸಿಕ್ಕಾಪಟ್ಟೆ ಶೈನ್ ಆಗಿದ್ದೇ ಯಶಸ್ವೀ ಜೈಸ್ವಾಲ್. ಭವಿಷ್ಯದಲ್ಲಿ ವಂಡೇನಲ್ಲೂ ರೋಹಿತ್ ಶರ್ಮಾ ಪ್ಲೇಸ್ನ್ನ ರಿಪ್ಲೇಸ್ ಮಾಡಬಲ್ಲೆ ಎಂಬ ಸಂದೇಶವನ್ನು ಬ್ಯಾಟ್ ಮೂಲಕವೇ ಸಾರಿದ್ದಾರೆ ಜೈಸ್ವಾಲ್. ಈ ಯಂಗ್ ಟೈಗರ್ ಓಪನರ್ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಅವರ ರೆಕಾರ್ಡ್ ಕೂಡಾ ಬ್ರೇಕ್ ಮಾಡಿ ಪವರ್ ಪ್ಲೇ ಸುಲ್ತಾನ್ ಅಂತಾ ಕರೆಸಿಕೊಂಡಿದ್ದಾರೆ. ಅಷ್ಟಕ್ಕೂ ಜೈಸ್ವಾಲ್ ಮೂಡಿಸಿರೋ ಭರವಸೆಗಳೆಷ್ಟು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಐಶ್ ಗೆ ಬಚ್ಚನ್ ಫ್ಯಾಮಿಲಿ ದೂರ ದೂರ.. – ನಟಿಯೊಂದಿಗಿನ ಸಲುಗೆಯೇ ಮುಳುವಾಯ್ತಾ?
ಈ ಬಾರಿ ಐಪಿಎಲ್ ಸೀಸನ್‌ನಲ್ಲಿ ಕಳಪೆ ಫಾರ್ಮ್‌ನಿಂದ ಒದ್ದಾಡಿದ್ದ ಯಶಸ್ವೀ ಜೈಸ್ವಾಲ್ ಗ್ರೇಟ್ ಕಂಬ್ಯಾಕ್ ಮಾಡಿದ್ದಾರೆ. ರಾಜಸ್ತಾನ್ ರಾಯಲ್ಸ್ ಟೀಮ್‌ನಲ್ಲಿ ಈ ಬಾರಿ ಯಶಸ್ವೀ ಜೈಸ್ವಾಲ್ ಅಬ್ಬರ ಅಷ್ಟಕಷ್ಟೇ ಇತ್ತು. ಹೀಗಿದ್ರೂ ಕೂಡಾ ಜೈಸ್ವಾಲ್ ಟಿ20 ವಿಶ್ವಕಪ್ ಗೆ ಸೆಲೆಕ್ಟ್ ಆಗಿದ್ರು. ಇಲ್ಲೂ ಕೂಡಾ ಓಕೆ ಎಂಬಂತೆ ಆಡಿದ್ದ ಯಶಸ್ವೀ ಮೇಲೆ ಬಿಸಿಸಿಐಗೆ ಸಖತ್ ಕಾನ್ಫಿಡೆನ್ಸ್ ಇತ್ತು ಅನ್ಸುತ್ತೆ. ಹೀಗಾಗಿ ಜಿಂಬಾಬ್ವೆ ವಿರುದ್ಧ ಯಂಗಿಸ್ತಾನಿಗಳ ಟೀಮ್ ಕಟ್ಟಿದ ಬಿಸಿಸಿಐ ಅಲ್ಲೂ ಯಶಸ್ವಿಗೆ ಚಾನ್ಸ್ ಕೊಟ್ಟು ನೋಡಿದೆ. ಇಲ್ಲೇ ನೋಡಿ ಬಿಸಿಸಿಐ ಪ್ಲ್ಯಾನ್ ವರ್ಕೌಟ್ ಆಗಿದ್ದು. ಯಶಸ್ವೀ ಜೈಸ್ವಾಲ್ ತಾನೊಬ್ಬ ಟೀಮ್ ಇಂಡಿಯಾದ ಭವಿಷ್ಯದ ಸ್ಟಾರ್ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಅದು ಕೂಡಾ ಆಡಿದ ಮೂರು ಪಂದ್ಯಗಳಲ್ಲೂ ಜೈಸ್ವಾಲ್ ದಾಖಲೆ ವೀರನಾಗಿ ಮೆರೆದಿದ್ದಾರೆ. ಶತಕ ಮಿಸ್ ಆಗಿರೋ ಬೇಸರ ಬಿಟ್ರೆ ಜೈಸ್ವಾಲ್ ಆಟಕ್ಕೆ ಫ್ಯಾನ್ಸ್ ಜೈ ಹೋ ಅಂದಿದ್ದಾರೆ. ಅದ್ರಲ್ಲೂ ಜೈಸ್ವಾಲ್ 21 ವರ್ಷಗಳ ರೆಕಾರ್ಡ್ ಒಂದನ್ನ ಬ್ರೇಕ್ ಮಾಡಿದ್ದು ಕೂಡಾ ಜಿಂಬಾಬ್ವೆ ಸರಣಿಯ ಹೈಲೆಟ್ಸ್ ಆಗಿತ್ತು. ಯಶಸ್ವಿ ಜೈಸ್ವಾಲ್ ಒಂದೇ ಎಸೆತದಲ್ಲಿ 12 ರನ್ಗಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎಂಬ ಇತಿಹಾಸ ನಿರ್ಮಿಸಿದರು. ಟಿ20 ಕ್ರಿಕೆಟ್‌ನ 21 ವರ್ಷಗಳ ಇತಿಹಾಸದಲ್ಲಿ ಯಾವುದೇ ಬ್ಯಾಟ್ಸ್‌ಮನ್ ಈ ಸಾಧನೆ ಮಾಡಿಲ್ಲ. ಇದೀಗ ಈ ದಾಖಲೆಯಲ್ಲೂ ಸಖತ್ ಸದ್ದು ಮಾಡ್ತಿದ್ದಾರೆ ಯಶಸ್ವೀ.
ಟಿ20 ಕ್ರಿಕೆಟ್ನಲ್ಲಿ ಪವರ್ ಪ್ಲೇ ಗೇಮ್ ಚೇಂಜರ್ ಅಂದ್ರೆ ಅದು ಜೈಸ್ವಾಲ್. 6 ಓವರ್ಗಳಿಗೆ ಪಂದ್ಯದ ಗತಿಯನ್ನೇ ಬದಲಿಸೋ ಶಕ್ತಿಯಿದೆ. ಇದೇ 6 ಒವರ್ ಗಳಲ್ಲಿ ಬೌಲರ್ಗಳನ್ನ ಬೆಂಡೆತ್ತೋ ತಾಕತ್ತೂ ಕೂಡಾ ಜೈಸ್ವಾಲ್ ಬ್ಯಾಟಿಂಗ್ ಗಿದೆ. ಹೀಗಾಗಿಯೇ ಯಶಸ್ವಿ ಪವರ್ ಪ್ಲೇಗೆ ಹೇಳಿ ಮಾಡಿಸಿದ ಆಟಗಾರ. ಪವರ್ ಪ್ಲೇನಲ್ಲಿ ಪವರ್ಫುಲ್ ಆಟ ಆಡೋದ್ರಲ್ಲಿ ಜೈಸ್ವಾಲ್ ರಂಥ ಪಂಟರ್ ಮತ್ತೊಬ್ಬರಿಲ್ಲ. ಪವರ್ ಪ್ಲೇನಲ್ಲಿ ಪವರ್ಫುಲ್ ಆಟವಾಡೋಕೂ ಧಮ್ ಬೇಕು. ಎಲ್ಲರಿಗೂ ಇಲ್ಲಿ ಸಕ್ಸಸ್ ಸಿಗಲ್ಲ. ಟೀಮ್ ಇಂಡಿಯಾದ ಯಂಗ್ಗನ್ ಯಶಸ್ವಿ ಜೈಸ್ವಾಲ್, ಸಿಕ್ಕ ಕಡಿಮೆ ಅವಕಾಶದಲ್ಲಿ ಸಕ್ಸಸ್ ಕಂಡಿದ್ದಾರೆ. ಫಿಯರ್ಲೆಸ್ ಬ್ಯಾಟಿಂಗ್ನಿಂದ ಅಬ್ಬರಿಸೋ ಜೈಸ್ವಾಲ್, ಪವರ್ ಪ್ಲೇನ ಪವರ್ಫುಲ್ ಬ್ಯಾಟರ್. ಇದಕ್ಕೆ ಜಿಂಬಾಬ್ವೆ ಎದುರಿನ 4ನೇ ಟಿ20 ಪಂದ್ಯದಲ್ಲಿ ಜೈಸ್ವಾಲ್, 53 ಎಸೆತಗಳಲ್ಲಿ 93 ರನ್ ಸಿಡಿಸಿದ್ದೆ ಸಾಕ್ಷಿ. ಹೀಗಾಗಿಯೇ ಪವರ್ ಪ್ಲೇ ಕಾ ಸುಲ್ತಾನ್ ಯಶಸ್ವಿ ಜೈಸ್ವಾಲ್ ಅಂತಾ ಈಗ ಕ್ರಿಕೆಟ್ ದಿಗ್ಗಜರು ಕರೀತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟು ಜಾಸ್ತಿಯೇನು ಟೈಮ್ ಆಗಿಲ್ಲ. ಈಗಾಗಲೇ ಟಿ20 ಕ್ರಿಕೆಟ್ನಲ್ಲಿ ಹೊಸ ಹವಾ ಕ್ರಿಯೇಟ್ ಮಾಡಿದ್ದಾರೆ. ಪವರ್ ಪ್ಲೇನಲ್ಲಂತೂ ಬೌಂಡರಿ, ಸಿಕ್ಸರ್ಗಳಿಂದ ಫ್ಯಾನ್ಸ್ಗೆ ರಂಜಿಸುವ ಜೈಸ್ವಾಲ್, ಎದುರಾಳಿ ಪಾಲಿಗೆ ಆಕ್ಷರಶಃ ವಿಲನ್ ಆಗ್ತಿದ್ದಾರೆ. 2023ರಿಂದ ಯಶಸ್ವಿ ಜೈಸ್ವಾಲ್ 19 ಇನ್ನಿಂಗ್ಸ್ಗಳಲ್ಲಿ ಪವರ್ ಪ್ಲೇನಲ್ಲಿ ಬ್ಯಾಟ್ ಬೀಸಿದ್ದಾರೆ. ಬರೋಬ್ಬರಿ, 162ರ ಸ್ಟ್ರೈಕ್ರೇಟ್ನಲ್ಲಿ 421 ರನ್ ಸಿಡಿಸಿದ್ದಾರೆ. ಜೈಸ್ವಾಲ್ 3.5 ಎಸೆತಕ್ಕೊಂದು ಬೌಂಡರಿ ಸಿಡಿಸಿದ್ದಾರೆ. ಆ ಮೂಲಕ ಪವರ್ ಪ್ಲೇನ ಸೂಪರ್ ಸ್ಟ್ರೈಕರ್ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ರೋಹಿತ್ ಶರ್ಮಾ ಆ್ಯಂಡ್ ಕೆ.ಎಲ್.ರಾಹುಲ್ ಟಿ20 ಫಾರ್ಮೆಟ್ನ ನಂಬರ್.1 ಜೋಡಿ. ಪವರ್ ಪ್ಲೇನಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ಹೆಗ್ಗಳಿಕೆ ಈ ಜೋಡಿಗಿದೆ. ಇವರನ್ನೇ ಈಗ ಜೈಸ್ವಾಲ್ ಬೀಟ್ ಮಾಡಿದ್ದಾರೆ. ಪವರ್ ಪ್ಲೇನ ವೈಯಕ್ತಿಕ ಗರಿಷ್ಠ ಸ್ಕೋರ್ನ ಟಾಪ್-5ನಲ್ಲಿ ಯಶಸ್ವಿ ಜೈಸ್ವಾಲ್, 53 ರನ್ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಇದ್ದಾರೆ. ಈ ಮೂಲಕ ಸೀನಿಯರ್ಗಳ ಸ್ಥಾನವನ್ನ ಸಮರ್ಥವಾಗಿ ತುಂಬೋ ಸಂದೇಶವನ್ನ ಈಗಾಗಲೇ ರವಾನಿಸಿದ್ದಾರೆ. ತನ್ನ ಪವರ್ಫುಲ್ ಹಿಟ್ಟಿಂಗ್ನಿಂದಲೇ ಜೈಸ್ವಾಲ್, ಡೇರಿಂಗ್ ಓಪನರ್ ಆಗಿ ಭವಿಷ್ಯ ರೂಪಿಸಿಕೊಳ್ಳೋದ್ರಲ್ಲಿ ನೋ ಡೌಟ್.
ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಜೋಡಿಯ ರೆಕಾರ್ಡ್ ಬ್ರೇಕ್ ಮಾಡಿದ ಬೆನ್ನಲ್ಲೇ ಯಶಸ್ವಿ ಜೈಸ್ವಾಲ್ ಸಾಧನೆಗೆ ಮತ್ತೊಂದು ಗರಿ ಸಿಕ್ಕಿದೆ. ಐಸಿಸಿ ನೂತನ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ 4 ಸ್ಥಾನ ಜಿಗಿತ ಕಂಡಿದ್ದಾರೆ. ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ 6ನೇ ಸ್ಥಾನ ಅಲಂಕರಿಸಿದ್ದಾರೆ. ಇನ್ನು ಸೂರ್ಯಕುಮಾರ್ ಯಾದವ್ ಹಾಗೂ ಯಶಸ್ವಿ ಜೈಸ್ವಾಲ್ ಅವರ ಬಳಿಕ ರುತುರಾಜ್ ಗಾಯಕ್ವಾಡ್ ಅಗ್ರ ಹತ್ತರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ನಿಮ್ಗೊಂದು ಇಂಟ್ರಸ್ಟಿಂಗ್ ಮಾಹಿತಿ ಕೊಡ್ಲೇಬೇಕು. ಟೀಮ್ ಇಂಡಿಯಾದ ಈ ಯಂಗ್ ವೆಪನ್ ಅಷ್ಟೊಂದು ಈಸಿಯಾಗಿ ರನ್ ಹೊಡೆಯೋದು ಹೇಗೆ ಅನ್ನೋದು. ಇದ್ರಲ್ಲೂ ಜೈಸ್ವಾಲ್ ಒಂದು ಸೀಕ್ರೆಟ್ ಮೇಂಟೈನ್ ಮಾಡ್ತಿದ್ದಾರೆ. ಟೀಮ್ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ರೀತಿಯೇ ಜೈಸ್ವಾಲ್ ಕೂಡಾ ಹಿಂದಿ ಹಾಡು ಹೇಳ್ತಾನೇ ಬ್ಯಾಟ್ ಬೀಸ್ತಾರಂತೆ. ಹಿಂದಿ ಹಾಡನ್ನ ಹೇಳುತ್ತಾ ಬಾಲನ್ನೇ ನೋಡುತ್ತಾ ಅಟ್ಯಾಕ್ ಮಾಡ್ತಾರಂತೆ. ಜೈಸ್ವಾಲ್ ಚೈಲ್ಡ್ವುಡ್ ಕೋಚ್ ಹೇಳುವ ಪ್ರಕಾರ, ಜೈಸ್ವಾಲ್ ಅವರು ವಿರೇಂದ್ರ ಸೆಹ್ವಾಗ್ರ ಅಪ್ಗ್ರೇಡ್ ವರ್ಷನ್.. ವಿರೇಂದ್ರ ಸೆಹ್ವಾಗ್ ಬಿಗ್ ಶಾಟ್ಸ್ ಆಡೋವಾಗ ತಮ್ಮ ಕಾಲನ್ನ ಚೆನ್ನಾಗಿ ಬಳಸಿಕೊಳ್ತಾ ಇದ್ರು. ಬಾಡಿ ಬ್ಯಾಲೆನ್ಸ್ ತುಂಬಾ ಚೆನ್ನಾಗಿರ್ತಿತ್ತು. ಜೈಸ್ವಾಲ್ ಕೂಡ ಅಷ್ಟೇ. ಶಾಟ್ ಆಡುವಾಗಲೆಲ್ಲಾ ಬಾಡಿ ಬ್ಯಾಲೆನ್ಸ್ ಬಗ್ಗೆ ಹೆಚ್ಚು ಫೋಕಸ್ ಮಾಡ್ತಿದ್ದಾರೆ. ಸ್ವಲ್ಪ ಬ್ಯಾಲೆನ್ಸ್ ತಪ್ಪಿದ್ರೂ ಕ್ಯಾಚ್ ಹೋಗುವ ಸಾಧ್ಯತೆ ಹೆಚ್ಚಿರುತ್ತೆ. ಇದು ಯಶಸ್ವಿ ಜೈಸ್ವಾಲ್ರ ಸೆಹ್ವಾಗ್ ವರ್ಷನ್ ಆದ್ರೆ, ಇನ್ನು ಗಂಗೂಲಿ ಸ್ಟೈಲ್ನಲ್ಲೂ ಜೈಸ್ವಾಲ್ ಬ್ಯಾಟಿಂಗ್ ಮಾಡ್ತಾರೆ. ನಿಮಗೆ ಗೊತ್ತಿರೋ ಹಾಗೆ ಸೌರವ್ ಗಂಗೂಲಿಯನ್ನ ಆಫ್ ಸೈಡ್ ದೇವ್ರು ಅಂತಾನೆ ಕರೀತಾ ಇದ್ರು. ಯಾಕಂದ್ರೆ, ಆಫ್ಸೈಡ್ನಲ್ಲಿ ಎಷ್ಟೇ ಫೀಲ್ಡರ್ಸ್ ನಿಲ್ಲಿಸಿದ್ರೂ ಗಂಗೂಲಿ ಗ್ಯಾಪ್ ನೋಡಿ ಬೌಂಡರಿ ಹೊಡೀತಿದ್ರು. ಯಶಸ್ವಿ ಜೈಸ್ವಾಲ್ ಕೂಡ ಅಷ್ಟೇ, ಆಫ್ಸೈಡ್ಗೆ ಅದ್ಭೂತವಾಗಿ ಪ್ಲೇಸ್ಮೆಂಟ್ ಮಾಡ್ತಾರೆ. ಗಂಗೂಲಿ ಶೈಲಿಯಲ್ಲೇ ಜೈಸ್ವಾಲ್ ಕೂಡ ಸ್ಕ್ವಾರ್ಕಟ್ ಹೊಡೀತಾರೆ. ಇನ್ನು ಕೇವಲ ಟಿ-20ಯಲ್ಲಷ್ಟೇ ಅಲ್ಲ, ವಂಡೇ, ಟೆಸ್ಟ್ ಸೇರಿ ಕ್ರಿಕೆಟ್‌ನ ಮೂರೂ ಫಾರ್ಮೆಟ್ಗಳಲ್ಲೂ ಪರ್ಫಾಮ್ ಮಾಡೋ ಆಟಗಾರ ಅಂದ್ರೆ ಅದು ಜೈಸ್ವಾಲ್. ಮೂರೂ ಫಾರ್ಮೆಟ್ಗಳಲ್ಲೂ ಸ್ಕೋರ್ ಡೆಲಿವರಿ ಮಾಡೋ ಕೆಪಾಸಿಟಿ ಜೈಸ್ವಾಲ್‌ಗೆ ಇದೆ. ಟಿ-20ಯಲ್ಲಿ ಯಾವ ರೀತಿ ಫಾಸ್ಟ್ ಆಗಿ ಸ್ಕೋರ್ ಮಾಡಬೇಕು.. ಟೆಸ್ಟ್ನಲ್ಲಿ ಹೇಗೆ ಕ್ರೀಸ್ನಲ್ಲಿ ಫಿಕ್ಸ್ ಆಗಿ ಲಾಂಗ್ ಇನ್ನಿಂಗ್ಸ್ ಆಡಬೇಕು ಅನ್ನೋದು ಜೈಸ್ವಾಲ್‌ಗೆ ಚೆನ್ನಾಗಿಯೇ ಗೊತ್ತಿದೆ. ಮ್ಯಾಚ್ಗೂ ಮುನ್ನ ಅದಕ್ಕೆ ತಕ್ಕಂತೆ ಪ್ರಾಕ್ಟೀಸ್ ಕೂಡ ಮಾಡ್ತಾರೆ. ಯಶಸ್ವೀ ಜೈಸ್ವಾಲ್‌ಗೆ ಈ ಪವರ್ ಪ್ಲೇ ಯಶಸ್ಸು ಸುಮ್ ಸುಮ್ನೇ ಬಂದಿಲ್ಲ. ಅದಕ್ಕೆ ತಕ್ಕಂತೆ ಪ್ರಾಕ್ಟೀಸ್ ಮಾಡಿ ಬೆವರು ಹರಿಸಿದ್ದರ ಪ್ರತಿಫಲ ಇದು.