SRH ಕೈಯಲ್ಲಿ ಕರುನಾಡ ಬ್ರಹ್ಮಾಸ್ತ್ರ ಅಭಿನವ್ ಮೇಲೆ ಕಣ್ಣಿಟ್ಟಿದ್ದೇಕೆ ಕಾವ್ಯ?
ಪವರ್ ಹಿಟ್ಟರ್ ಮನೋಹರ್ ಜಾದು?

SRH ಕೈಯಲ್ಲಿ ಕರುನಾಡ ಬ್ರಹ್ಮಾಸ್ತ್ರ  ಅಭಿನವ್ ಮೇಲೆ ಕಣ್ಣಿಟ್ಟಿದ್ದೇಕೆ ಕಾವ್ಯ?ಪವರ್ ಹಿಟ್ಟರ್ ಮನೋಹರ್ ಜಾದು?

ಅಭಿನವ್ ಮನೋಹರ್.. ಕರ್ನಾಟಕದ ವಿಸ್ಫೋಟಕ ಬ್ಯಾಟರ್. ಮಿಡಲ್ ಆರ್ಡರ್​ ಆ್ಯಂಡ್ ಲೋವರ್ ಆರ್ಡರ್​ನಲ್ಲಿ ಬ್ಯಾಟ್​ ಬೀಸಬಲ್ಲ ಈ ಟಿ20 ಸ್ಪೆಷಲಿಸ್ಟ್,  ಎಂಥಹ ಘಟಾನುಘಟಿ ಬೌಲರ್​ಗನ್ನಾಗಲಿ ದಂಡಿಸಲ್ಲ ಬೆಸ್ಟ್​ ಸ್ಟ್ರೈಕರ್ . ತನ್ನ ಪವರ್ ಹಿಟ್ಟಿಂಗ್ ಬ್ಯಾಟಿಂಗ್ ಮೂಲಕ ಸಿಕ್ಸರ್​ಗಳ ಮಳೆಯನ್ನೇ ಸುರಿಸ್ತಾರೆ. ಮ್ಯಾಚ್ ಫಿನಿಶರ್​​​​​ ರೋಲ್​​​ ಅದ್ಭುತವಾಗಿ ನಿಭಾಯಿಸಬಲ್ಲ ಈ ಪವರ್ ಹಿಟ್ಟರ್​ ಬ್ಯಾಟರ್..ಹಾಗೇ ​ ಒಂದೇ ಓವರ್​ನಲ್ಲೇ ಗೇಮ್ ಚೇಂಜ್​ ಮಾಡಬಲ್ಲ ತಾಕತ್ತಿದೆ. ತಂಡಕ್ಕಾಗಿ ಯಾವುದೇ ಕ್ರಮಾಂಕದಲ್ಲಾದರು ಬ್ಯಾಟ್ ಬೀಸಬಲ್ಲ ಟೀಮ್ ಮ್ಯಾನ್ ಅಭಿನವ್, ಯಾವುದೇ ಸ್ಟೇಡಿಯಂನಲ್ಲಾದರು ಸಿಕ್ಸರ್​ಗಳ ಸುರಿಮಳೆ ಸುರಿಸಬಲ್ಲರು. ಅವಶ್ಯತೆ ಇದ್ದಾಗ ಬೌಲರ್ ಆಗಿ ನೆರವಾಗುವ ಈತ, ಸೇಫೆಸ್ಟ್ ಫೀಲ್ಡರ್ ಕೂಡ..

ಕಳೆದ 3 ಸೀಸನ್​ಗಳಲ್ಲಿ ಗುಜರಾತ್ ಟೈಟನ್ಸ್ ಪ್ರತಿನಿಧಿಸಿದ್ದ ಅಭಿನವ್​​ಗೆ ಹೇಳಿಕೊಳ್ಳುವ ಅವಕಾಶಗಳು ಸಿಕ್ಕಿರಲಿಲ್ಲ. ಆದ್ರೆ, ಮೆಗಾ ಆಕ್ಷನ್‌ಗೂ ಮುನ್ನ ಫ್ರಾಂಚೈಸಿಗಳ ಗಮನ ಸೆಳೆದಿದ್ದ ಈ ಟಿ20 ಸ್ಪೆಷಲಿಸ್ಟ್​, ಮೆಗಾ ಹರಾಜಿನಲ್ಲಿ ಬಿಗ್ ಅಮೌಂಟ್​ಗೆ ಸೇಲ್ ಆದ್ರು. ಈ ಬಾರಿ 30 ಲಕ್ಷದ ಕನಿಷ್ಠ ಬೆಲೆಯೊಂದಿಗೆ ಮೆಗಾ ಹರಾಜಿಗೆ ಪ್ರವೇಶಿಸಿದ ಅಭಿನವ್ ಮನೋಹರ್‌ಗೆ ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಆರ್‌ಸಿಬಿ ಮತ್ತು ಕೆಕೆಆರ್ ಜೊತೆಗೆ ಸನ್‌ರೈಸರ್ಸ್ ಹೈದರಾಬಾದ್ ಪೈಪೋಟಿ ನಡೆಸಿತು. ಕೊನೆಗೆ ಅಭಿನವ್ ಮನೋಹರ್  ಬರೋಬ್ಬರಿ 3.20 ಕೋಟಿಗೆ ಎಸ್‌ಆರ್‌ಹೆಚ್ ತಂಡದ ಪಾಲಾದ್ರು.

ಐಪಿಎಲ್​​ನಲ್ಲಿ ಸರಿಯಾದ ಅವಕಾಶ ಸಿಗದಿದ್ದರೂ, 2024ರ ಮಹಾರಾಜ ಟ್ರೋಫಿಯಲ್ಲಿ ಅಭಿನವ್ ಮನೋಹರ್​, ರನ್‌ ಹೊಳೆಯನ್ನೇ ಹರಿಸಿದ್ರು. ಟೂರ್ನಿಯಲ್ಲಿ ಆಡಿದ 10 ಪಂದ್ಯಗಳಿಂದ 507 ರನ್‌ ಸಿಡಿಸಿದ ಅಭಿನವ್, ಸಿಕ್ಸರ್​ಗಳ ಸುನಾಮಿಯಿಂದಲೇ 312 ರನ್‌ ಕೊಳ್ಳೆ ಹೊಡೆದರು. ಟೂರ್ನಿಯಲ್ಲಿ ಮನೋಹರ್ ಸಿಡಿಸಿದ 52 ಮನಮೋಹಕ ಸಿಕ್ಸರ್​ಗಳು ಎಲ್ಲರ ಹುಬ್ಬೇರುವಂತೆ ಮಾಡಿದ್ದು ಸುಳ್ಳಲ್ಲ. ಮಹಾರಾಜ ಟೂರ್ನಿಯಲ್ಲಿ ಮಾತ್ರವಲ್ಲ. ರಣಜಿ ಟ್ರೋಪಿಯಲ್ಲಿ ಡೆಬ್ಯೂ ಮಾಡಿರುವ ಅಭಿನವ್ ಮನೋಹರ್, ಅದ್ಭುತ ಆಟದಿಂದ ಗಮನ ಸೆಳೆದಿದ್ರು. 3 ರಣಜಿ ಪಂದ್ಯಗಳ 5 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿದ್ದ ಅಭಿನವ್, 1 ಅರ್ಧಶತಕ ಒಳಗೊಂಡ 146 ರನ್ ಗಳಿಸಿದ್ರು. ಹೀಗಾಗಿ ಇವರ ಮೇಲೆ ಎಲ್ಲಾ ಪ್ರಾಂಚೈಸಿಗಳು ಕಣ್ಣಿಟ್ಟಿದ್ವು.

ಇನ್ನು ಇವಪ ಕಳೆದ ಐಪಿಎಲ್ ಜರ್ನಿ ನೋಡೋದಾದ್ರೆ. 2022 ರ ಐಪಿಎಲ್ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್  ₹2.6 ಕೋಟಿಗೆ ಅಭಿನವ್ ಮನೋಹರ್ ಅವರನ್ನು ಆಯ್ಕೆ ಮಾಡಿತು. ಮಾರ್ಚ್ 28, 2022 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್   ವಿರುದ್ಧದ ಪಂದ್ಯದಲ್ಲಿ ಅವರು ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು, ಈ ಪಂದ್ಯದಲ್ಲಿ 7 ಎಸೆತಗಳಲ್ಲಿ ಅಜೇಯ 15 ರನ್‌ಗಳನ್ನು ಗಳಿಸಿದರು. ಅದೇ ವರ್ಷ ರಾಜಸ್ಥಾನ ರಾಯಲ್ಸ್  ವಿರುದ್ಧ ಇವರಿಗೆ ಅತ್ಯುತ್ತಮ ಐಪಿಎಲ್ ಸ್ಕೋರ್ ಬಂದಿತು 28 ಎಸೆತಗಳಲ್ಲಿ 43 ರನ್ ಗಳಿಸಿದರು ಇದು ಸದ್ಯ ಇವರ ಐಪಿಎಲ್‌ ಹೈಯಸ್ಟ್ ಸ್ಕೋರ್ .. 2022 ರಿಂದ 2024 ರ ತನಕ ಜಿಟಿ ಪರ 20 ಪಂದ್ಯಗಳನ್ನ ಆಡಿದ್ರು, ಆದ್ರೆ ಈ ಬಾರಿ ಇವರ ಮೇಲೆ ತಂಬಾ ಹೋಪ್ ಇಟ್ಟು ಹೈದರಾಬಾದ್ ಇವರನ್ನ ಖರೀದಿ ಮಾಡಿದೆ.

ಆರ್‌ಸಿಬಿ ಖರೀದಿ ಮಾಡಿದ್ರೆ ವರ ಆಗುತ್ತಿದ್ದರು ಅಭಿನವ್

ಒಂದು ವೇಳೆ ಈ ಅಭಿನವ್‌ನನ್ನ ಎಲ್ಲಾದ್ರೂ ಆರ್‌ಸಿಬಿ ಖರೀದಿ ಮಾಡಿದ್ರೆ ಸಾಕಷ್ಟು ಲಾಭ ಆಗುತಿತ್ತು.  ಯಾಕಂದ್ರ ಅದ್ಭುತವಾಗಿ ಬ್ಯಾಟ್ ಬೀಸಬಲ್ಲ ಅಭಿನವ್, ಫಿನಿಶರ್ ಇಲ್ಲದ ಕೊರಗು ನೀಗಿಸುತ್ತಿದ್ದರು. ಚಿನ್ನಸ್ವಾಮಿಯಲ್ಲಿ ಆಡಿರುವ ಅನುಭವ ಆರ್‌ಸಿಬಿಗೆ ಪ್ಲೇಸ್ ಆಗುತಿತ್ತು.  ಆದ್ರೆ ಒಂದೇ ಓವರ್​​ನಲ್ಲಿ ಪಂದ್ಯದ ಗತಿ ಬದಲಿಸಬಲ್ಲ ಅಭಿನವ್ ಮನೋಹರ್  ಆರ್‌ಸಿಬಿ ಕೈ ತಪ್ಪಿ ಹೋಗಿದ್ದು, SRH ಪಾಲಾಗಿದ್ದಾರೆ. ಒಟ್ನಲ್ಲಿ ಕನ್ನಡಿಗ ಅಭಿನವ್ ಮನೋಹರ್ ಈ ಬಾರಿಯ ಐಪಿಎಲ್‌ನಲ್ಲಿ ಮಿಂಚು ಹರಿಸಿ, ಆದಷ್ಟು ಬೇಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಡಲಿ ಅನ್ನೋದು ಕನ್ನಡಿಗರ ಬಯಕೆ.

Kishor KV