ಪ್ರೇಮಿಯನ್ನು ನೋಡಲು ಗ್ರಾಮದಲ್ಲಿ ವಿದ್ಯುತ್ ಕಟ್ – ಕತ್ತಲಲ್ಲಿ ನಡೆದ ಪ್ರೇಮದಾಟಕ್ಕೆ ಕೊನೆಗೂ ಬಿತ್ತು ಬ್ರೇಕ್..!

ಪ್ರೇಮಿಯನ್ನು ನೋಡಲು ಗ್ರಾಮದಲ್ಲಿ ವಿದ್ಯುತ್ ಕಟ್ – ಕತ್ತಲಲ್ಲಿ ನಡೆದ ಪ್ರೇಮದಾಟಕ್ಕೆ ಕೊನೆಗೂ ಬಿತ್ತು ಬ್ರೇಕ್..!

ಕತ್ತಲಾಗುತ್ತಿದ್ದಂತೆ ಆ ಗ್ರಾಮದಲ್ಲಿ ವಿದ್ಯುತ್ ಕೂಡಾ ದಿಢೀರ್ ಅಂತಾ ಕಟ್ ಆಗುತ್ತಿತ್ತು. ಒಂದೆರೆಡು ಸಲ, ಹೋಗಲಿ ಐದಾರು ಸಲ ಕರೆಂಟ್ ಕೈಕೊಟ್ಟಿದ್ದರೆ ಏನೋ ಕರೆಂಟ್ ಸಮಸ್ಯೆ ಅಂತಾ ಸುಮ್ಮನಾಗಬಹುದಿತ್ತು. ಆದರೆ, ಪದೇ ಪದೇ ರಾತ್ರಿ ಸಮಯದಲ್ಲಿ ಆ ಗ್ರಾಮದಲ್ಲಿ ಕರೆಂಟೇ ಇರುವುದಿಲ್ಲ. ಯಾವಾಗಲೂ ಕಗ್ಗತ್ತಲು. ಯಾಕಪ್ಪಾ ಹೀಗಾಗುತ್ತೆ ಅಂತಾ ವಿದ್ಯುತ್ ಸರಬರಾಜು ಕೇಂದ್ರದಲ್ಲಿ ಕೇಳಿದರೆ ಅವರಿಗೂ ಸಹ ಕಾರಣ ಗೊತ್ತಿಲ್ಲ. ಇದರಿಂದ ಗ್ರಾಮಸ್ಥರಿಗೆ ಅಚ್ಚರಿ ಜೊತೆಗೆ ಗಾಬರಿ. ಆದರೂ, ಕಾರಣ ಗೊತ್ತಾಗಲೇಬೇಕಲ್ಲ. ಅದಕ್ಕಾಗಿ ರಹಸ್ಯ ಕಾರ್ಯಾಚರಣೆಗೆ ಇಳಿದವರು ನಿಜಕ್ಕೂ ಬೆಚ್ಚಿಬಿದ್ದಿದ್ದರು.

ಇದನ್ನೂ ಓದಿ: ‘ಹನಿಟ್ರ್ಯಾಪ್ ಮಾಡಲೆಂದೇ ಸ್ಟುಡಿಯೋ.. ಸುತ್ತಮುತ್ತ ಬರೀ ಆಂಟಿಗಳೇ ಇರ್ತಾರೆ’ – ಶಾಸಕ ಮುನಿರತ್ನ ವಿರುದ್ಧ ಗಂಭೀರ ಆರೋಪ

ಬಿಹಾರದಲ್ಲಿ ಬೆಟ್ಟಿಯಾ ಎಂಬ ಗ್ರಾಮವಿದೆ. ಅಲ್ಲಿ ಇಡೀ ಗ್ರಾಮದಲ್ಲಿ ರಾತ್ರಿವೇಳೆ ಪದೇ ಪದೇ ವಿದ್ಯುತ್ ಕೈಕೊಡುತ್ತಲೇ ಇತ್ತು. ಹತ್ತು ಹದಿನೈದು ದಿನಗಳವರೆಗೆ ರಾತ್ರಿವೇಳೆ ಕರೆಂಟ್ ಇರುವುದೇ ಇಲ್ಲ. ಇದರ ಪರಿಣಾಮ ಹಲವು ಮನೆಗಳಲ್ಲಿ ಕಳ್ಳತನ ನಡೆಯುತ್ತಿದ್ದವು. ಇದರಿಂದ ಬೇಸತ್ತ ಗ್ರಾಮಸ್ಥರು ಯಾಕೆ ಹೀಗಾಗುತ್ತಿದೆ ಎಂದು ತಿಳಿಯಲು ಕಾರ್ಯಾಚರಣೆಗೆ ಇಳಿದಿದ್ದರು. ಆಗ ಬಯಲಾಗಿದ್ದು ಪ್ರೇಮ ಪ್ರಕರಣ. ರಾಜ್​ ಕುಮಾರ್ ಮತ್ತು ಪ್ರೀತಿ ಪರಸ್ಪರ ಪ್ರೀತಿಸುತ್ತಿದ್ದರು. ರಾತ್ರಿವೇಳೆ ಮಾತ್ರವೇ ಪ್ರೇಮಿಗಳು ಭೇಟಿಯಾಗುತ್ತಿದ್ದರು. ಇದಕ್ಕಾಗಿ ಗ್ರಾಮದ ವಿದ್ಯುತ್ ಸರಬರಾಜು ಕೇಂದ್ರಕ್ಕೆ ತೆರಳಿ ಪ್ರಿಯತಮೆಯೇ ಪ್ರತಿದಿನ ಫ್ಯೂಸ್ ತೆಗೆಯುತ್ತಿದ್ದಳು ಎನ್ನುವುದು ಪತ್ತೆಯಾಗಿದೆ. ಈ ಬಗ್ಗೆ ಮಾತನಾಡಿದ ಗ್ರಾಮಸ್ಥರೊಬ್ಬರು, ನಮ್ಮ ಗ್ರಾಮದಲ್ಲಿ ಪದೇ ಪದೇ ಏಕೆ ವಿದ್ಯುತ್‌ ಹೋಗುತ್ತಿದೆ ಎಂದು ಅಧಿಕಾರಿಗಳಿಗೂ ಕೂಡ ದೂರು ನೀಡಿದ್ದವು. ಕಾರಣ ತಿಳಿಯಲು ಕಾದು ಕುಳಿತಿದ್ದೆವು. ಕರೆಂಟ್‌ ಹೋದ ತಕ್ಷಣ ಇವರಿಬ್ಬರ ಭೇಟಿಯಾಗುವುದನ್ನು ಕಂಡು ಹಿಡಿದೆವು. ಅವರಿಬ್ಬರನ್ನು ನೋಡಿ ಶಾಕ್ ಆದೆವು. ಈ ಇಬ್ಬರು ಭೇಟಿಯಾಗುವುದಕ್ಕೆ ಕರೆಂಟ್ ತೆಗೆಯುತ್ತಿದ್ದರು ಎನ್ನುವುದು ಬಹಿರಂಗವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇನ್ನು ಇವರಿಬ್ಬರ ಪ್ರೀತಿ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಕೋಪದಲ್ಲಿ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ನಂತರ ಯುವಕ ತನ್ನ ಗ್ಯಾಂಗ್​ಗೆ ಕರೆ ಮಾಡಿ ಗ್ರಾಮಸ್ಥರ ಮೇಲೆ ಹಲ್ಲೆ ಮಾಡಲು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಇಷ್ಟೆಲ್ಲಾ ಜಗಳವಾದ ನಂತರ ಎರಡೂ ಗುಂಪಿನವರು ಸಮಸ್ಯೆ ಬಗೆಹರಿಸಿಕೊಳ್ಳಲು ಕುಳಿತು ಮಾತನಾಡಿಕೊಂಡಿಕೊಂಡಿದ್ದಾರೆ. ಕೊನೆಗೆ ಇಬ್ಬರಿಗೂ ಮದುವೆ ಮಾಡಲು ನಿಶ್ಚಯಿಸಿದ್ದಾರೆ. ನಂತರ ಪ್ರೇಮಿಗಳು ಗ್ರಾಮದ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.

suddiyaana