ಪವರ್ ಬ್ಯಾಂಕ್ ನಲ್ಲಿ ಫೋನ್ ಚಾರ್ಜ್ ಮಾಡ್ತೀರಾ? – ಸ್ಮಾರ್ಟ್ ಫೋನ್ ಬ್ಯಾಟರಿ ಹಾಳಾಗುತ್ತೆ ಹುಷಾರ್!

ಪವರ್ ಬ್ಯಾಂಕ್ ನಲ್ಲಿ ಫೋನ್ ಚಾರ್ಜ್ ಮಾಡ್ತೀರಾ? – ಸ್ಮಾರ್ಟ್ ಫೋನ್ ಬ್ಯಾಟರಿ ಹಾಳಾಗುತ್ತೆ ಹುಷಾರ್!

ಮೊಬೈಲ್ ಬ್ಯಾಟರಿ ಚಾರ್ಜ್ ಮಾಡಲು ನೀವೇನಾದ್ರೂ ಪವರ್ ಬ್ಯಾಂಕ್ ಯೂಸ್ ಮಾಡ್ತೀರಾ. ಹಾಗಾದ್ರೆ ಕೇರ್ ಫುಲ್ ಆಗಿರಿ. ಯಾಕೆಂದರೆ ಪವರ್ ಬ್ಯಾಂಕ್ ಬಗ್ಗೆ ಅನೇಕರಿಗೆ ಇರುವ ಪ್ರಶ್ನೆಯೆಂದರೆ, ಇದನ್ನು ಬಳಸುವುದರಿಂದ ಬ್ಯಾಟರಿಗೆ ಹಾನಿಯಾಗುತ್ತದೆಯೇ, ಫೋನ್ ಮೇಲೆ ಪರಿಣಾಮ ಬೀರುತ್ತದೆಯೇ? ಎಂದು.

ಇದನ್ನೂ ಓದಿ : Whatsapp ಬಳಕೆದಾರರೇ ಹುಷಾರ್ – ಇಂತಹ Message ಕ್ಲಿಕ್ ಮಾಡಿದ್ರೆ ಅಪಾಯ ಗ್ಯಾರಂಟಿ!

ಪವರ್ ಬ್ಯಾಂಕ್‌ ಮೂಲಕ ಸ್ಮಾರ್ಟ್​ಫೋನ್ ಬ್ಯಾಟರಿ ಚಾರ್ಜ್ ಮಾಡೋದು ಸುರಕ್ಷಿತವೇ. ಆದ್ರೆ ಒಂದು ಖಂಡೀಷನ್ ಏನಂದ್ರೆ ನೀವು ಉತ್ತಮ ಗುಣಮಟ್ಟದ ಪವರ್ ಬ್ಯಾಂಕ್ ಬಳಸಬೇಕು. ಕೆಲವರು ಕಡಿಮೆ ಬೆಲೆಗೆ ಪವರ್ ಬ್ಯಾಂಕ್ ಸಿಗುತ್ತೆ ಅಂತಾ ಅದನ್ನು ಖರೀದಿಸಿ ಮೊಬೈಲ್ ಚಾರ್ಜ್ ಮಾಡ್ತಾರೆ. ಇದ್ರಿಂದ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಹಾಳಾಗುವ ಚಾನ್ಸಸ್ ಇರುತ್ತೆ. ಓವರ್‌ಚಾರ್ಜ್ ಮಾಡಿದರೆ ಹೆಚ್ಚು ವಿದ್ಯುತ್ ಬಿಡುಗಡೆಯಾಗಿ ಫೋನ್ ಗೆ ಹಾನಿಯಾಗಬಹುದು. ಆದ್ರೆ ಉತ್ತಮವಾದ ಪವರ್ ಬ್ಯಾಂಕ್‌ಗಳಲ್ಲಿ ಕಟ್ಆಫ್ ಟೆಕ್ನಾಲಜಿ ಇರುತ್ತೆ. ಅದು  ಕಂಪ್ಲೀಟ್ ಚಾರ್ಜ್ ಆದ ತಕ್ಷಣ ಪವರ್ ಸಪ್ಲೈನ ಸ್ಥಗಿತಗೊಳಿಸುತ್ತದೆ. ಹೀಗಾಗಿ ಸ್ಮಾರ್ಟ್​ಫೋನ್ ಬ್ಯಾಟರಿ ಹೆಚ್ಚು ದಿನ ಬಾಳಿಕೆ ಬರುತ್ತೆ. ನಿಮ್ಮ ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್‌ಫೋನ್ ಚಾರ್ಜ್ ಮಾಡಲು ಪವರ್ ಬ್ಯಾಂಕ್ ಅಗತ್ಯವಿದ್ದರೆ ಬಜೆಟ್ ಬಗ್ಗೆ ಲೆಕ್ಕ ಹಾಕಬೇಡಿ. ಯಾಕಂದ್ರೆ ನೀವು ನೂರು, 500ಕ್ಕೆ ಕಂಜೂಸ್ ಮಾಡಿದ್ರೆ ಫೋನ್, ಲ್ಯಾಪ್​ಟಾಪ್ ಹಾಳಾಗುವ ಸಾಧ್ಯತೆ ಇರುತ್ತೆ.

Shantha Kumari