ಈ ಕೆಲ್ಸ ಮಾಡಿದ್ರೆ ಒಂದೇ ಬಾರಿಗೆ 50 ಸಾವಿರ ರೂ. ಗೆಲ್ಲಬಹುದು! – ಸರ್ಕಾರ ಕೋಡ್ತಿರೋ ಆಫರ್ ನ ಮಿಸ್ ಮಾಡ್ಕೊಳ್ಬೇಡಿ!
ಈಗಿನ ಕಾಲದಲ್ಲಿ ದುಡ್ಡು ಎಷ್ಟು ಮುಖ್ಯ ಅನ್ನೋದು ಗೊತ್ತೆ ಇದೆ. ಒಂದು ರೂಪಾಯಿ ಸಂಪಾದನೆ ಆಗಬೇಕು ಅಂದ್ರೂ ಕಷ್ಟ ಪಡಲೇಬೇಕು.. ಆದ್ರೀಗ ನೀವು ಒಂದೇ ಒಂದು ರೂಪಾಯಿ ಖರ್ಚೂ ಮಾಡದೆ ಒಂದೇ ಬಾರಿಗೆ 50 ಸಾವಿರ ರೂ. ಗೆಲ್ಲಬಹುದು. ಆದ್ರೆ ಅದಕ್ಕಾಗಿ ತಲೆ ಮತ್ತು ಕೈಗೆ ಕೆಲಸಕೊಡಬೇಕು. ಆಗ ಈ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ ಅದು ಹೇಗೆ? ಅದಕ್ಕಾಗಿ ಏನು ಮಾಡಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ಮಾಹಿತಿ.
ಇದನ್ನೂ ಓದಿ: ಕಾಂಗ್ರೆಸ್ ನಾಯಕರಿಗೆ ಅನಂತ್ ಕುಮಾರ್ ಹೆಗಡೆ ಟಾಂಗ್ – ನೇರಾನೇರ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
50 ಸಾವಿರ ರೂ. ಗೆಲ್ಲಬೇಕೆಂದರೆ, ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕು.. ರಾಷ್ಟ್ರೀಯ ಮಹಿಳಾ ಆಯೋಗವು MyGov ವೆಬ್‌ಸೈಟ್‌ನಲ್ಲಿ ಲೋಗೋ ವಿನ್ಯಾಸ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಮಹಿಳಾ ಸಬಲೀಕರಣದ ಲೋಗೋವನ್ನು ವಿನ್ಯಾಸಗೊಳಿಸಬೇಕಿದೆ. ಹೊಸ ಅಸ್ಮಿತೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಮಹಿಳಾ ಆಯೋಗಕ್ಕೆ ಪೂರಕವಾದ ಲೋಗೋವನ್ನು ಚಿತ್ರಿಸಬೇಕಿದೆ. ಲಿಂಗ ಸಮಾನತೆ ಮತ್ತು ಮಹಿಳಾ ಹಕ್ಕುಗಳಿಗಾಗಿ ಮಹಿಳಾ ಆಯೋಗದ ಹೋರಾಟವನ್ನೂ ಲೋಗೋ ಪ್ರತಿಬಿಂಬಿಸಬೇಕಿದೆ. ಸ್ಪರ್ಧೆಯಲ್ಲಿ PEG, PNG, BMP, TIFF, SVG ಫಾರ್ಮ್ಯಾಟ್‌ನಲ್ಲಿ ಲೋಗೋದ ಹೆಚ್ಚಿನ ರೆಸಲ್ಯೂಶನ್ (600 dpi) ಚಿತ್ರವನ್ನು ಅಪ್‌ಲೋಡ್ ಮಾಡಬೇಕು. ಹಾಗೆಯೇ ಲೋಗೋ ವಿಶಿಷ್ಟವಾಗಿರಬೇಕು. ವೆಬ್‌ಸೈಟ್, ಸಾಮಾಜಿಕ ಮಾಧ್ಯಮ, ಪತ್ರಿಕಾ ಪ್ರಕಟಣೆ, ಲೇಖನ ಸಾಮಗ್ರಿಗಳು, ಲೇಬಲ್‌ಗಳು, ನಿಯತಕಾಲಿಕೆಗಳು, ವಾಣಿಜ್ಯ, ಪೋಸ್ಟರ್‌ಗಳು ಹಾಗೂ ಕರಪತ್ರಗಳು ಸೇರಿದಂತೆ ಇತ್ಯಾದಿಗಳಿಗೆ ಬಳಸುವಂತೆ ಉಪಯುಕ್ತವಾಗಿರಬೇಕು.
ಈ ಸ್ಪರ್ಧಿಗಳು ಮೂಲ ಫೈಲ್ ಅನ್ನು ಸಬ್ ಮೀಟ್ ಮಾಡ್ಬೇಕು. ಲೋಗೋ ಬ್ಲರ್ ಆಗಿರಬಾರದು. ಲೋಗೋದಲ್ಲಿ ಯಾವುದೇ ವಾಟರ್‌ಮಾರ್ಕ್ ಇರಬಾರದು. ಈ ಲೋಗೋದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳನ್ನು ಬಳಸಬೇಕು. ಇದು ಪ್ರಸ್ತುತ ಮಹಿಳಾ ಆಯೋಗದ ಅಧಿಕೃತ ಲಾಂಛನದಂತೆಯೇ ಇರಬೇಕು. ಜನವರಿ 31 ರವರೆಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಇದರಲ್ಲಿ ಗೆದ್ದರೆ ಭಾಗವಹಿಸುವಿಕೆ ಪ್ರಮಾಣಪತ್ರದೊಂದಿಗೆ 50,000 ರೂ. ಬಹುಮಾನ ದೊರೆಯಲಿದೆ. ಸಂಪೂರ್ಣ ವಿವರಗಳಿಗಾಗಿ MYGOV ವೆಬ್‌ಸೈಟ್ WWW.MYGOV.IN ಗೆ ಭೇಟಿ ನೀಡಿ.