ಆರ್‌ಸಿಬಿ ಸೋಲಿಗೆ ಅಶ್ವಿನಿ ಪುನೀತ್‌ರಾಜಕುಮಾರ್ ಕಾರಣ ಎಂದ ದರ್ಶನ್ ಫ್ಯಾನ್ಸ್ – ಅಪ್ಪು ಫ್ಯಾನ್ಸ್‌ ಫುಲ್‌ ಗರಂ

ಆರ್‌ಸಿಬಿ ಸೋಲಿಗೆ ಅಶ್ವಿನಿ ಪುನೀತ್‌ರಾಜಕುಮಾರ್ ಕಾರಣ ಎಂದ ದರ್ಶನ್ ಫ್ಯಾನ್ಸ್ – ಅಪ್ಪು ಫ್ಯಾನ್ಸ್‌ ಫುಲ್‌ ಗರಂ

ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಅಭಿಮಾನಿಗಳ ನಡುವೆ ಕೆಸರೆರಚಾರ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ತಮ್ಮ ನೆಚ್ಚಿನ ನಟ ಹೆಚ್ಚು ಎಂದು ಬಡಾಯಿ ಕೊಚ್ಚಿಕೊಳ್ಳುವ ಭರದಿಂದ ಮತ್ತೊಬ್ಬ ನಟನ ಬಗ್ಗೆ ಕೆಲವರು ನಿಕೃಷ್ಟವಾಗಿ ಕಾಮೆಂಟ್ ಮಾಡುತ್ತಾರೆ. ಇದೀಗ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಕಿಡಿಗೇಡಿಗಳು ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್‌ ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಗಜಪಡೆ ಎಂಬ ಪೇಜ್ ಸೃಷ್ಟಿಸಿ ಅದರಲ್ಲಿ, ಅಶ್ವಿನಿ ಪುನೀತ್‌ರಾಜಕುಮಾರ್ ಅವರು ಆರ್‌ಸಿಬಿ ಸೋಲಿಗೆ ಕಾರಣ ಎಂದು ಹೇಳಲಾಗಿದೆ. ‘ಕಾರ್ಯಕ್ಕೆ ಮುತ್ತೈದೆಯರನ್ನು ಕರೆಯಬೇಕು. ಅದನ್ನು ಬಿಟ್ಟು ಗಂಡ ಇಲ್ಲದವರನ್ನು ಕರೆದಿದ್ದಾರೆ. ಇದು ಆರ್‌ಸಿಬಿ ಸೋಲಿಗೆ ಕಾರಣ’ ಎಂದು ಪೇಜ್‌ನಲ್ಲಿ ಬರೆದಿದ್ದಾರೆ. ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪವರ್‌ ಸ್ಟಾರ್ ಅಪ್ಪು ಅಭಿಮಾನಿಗಳು ಗರಂ ಆಗಿದ್ದಾರೆ. ಕಮೀಷನರ್ ಭೇಟಿ ಮಾಡಿ ದೂರು ನೀಡಲು ಮುಂದಾಗಿದ್ದಾರೆ.

ಇದನ್ನೂ ಓದಿ: 20 ಅಡಿ.. 20 ಗಂಟೆಗಳ ಮಹಾತಪಸ್ಸು! – ಸಾತ್ವಿಕ್‌ ತಲೆಕೆಳಗಾಗಿ ಬಿದ್ದರೂ ಬದುಕಿದ್ದು ಹೇಗೆ?    

ನಟ ಪುನೀತ್‌ರಾಜಕುಮಾರ್ ಅವರು ಇಲ್ಲದೇ ಇದ್ದಾಗ ಇಂತಹ ಅವಮಾನಗಳು ಹೆಚ್ಚಾಗಿವೆ. ಅಶ್ವಿನಿ ಪುನೀತ್‌ರಾಜಕುಮಾರ್ ಅವರಿಗೆ ಅವಮಾನ ಮಾಡಿದ್ದಕ್ಕೆ ಅಪ್ಪು ಅಭಿಮಾನಿಗಳು ಗರಂ ಆಗಿದ್ದಾರೆ. ಇದಕ್ಕೆ ಸಂಪೂರ್ಣವಾಗಿ ಕಡಿವಾಣ ಬೀಳಬೇಕು ಎಂದು ಅಪ್ಪು ಫ್ಯಾನ್ಸ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಆರ್​ಸಿಬಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಈ ವಿಡಿಯೋನಲ್ಲಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಕಾಣಿಸಿಕೊಂಡಿದ್ದಾರೆ. ಅಶ್ವಿನಿ ಪುನೀತ್ ರಾಜ್​ಕುಮಾರ್, ತಮ್ಮ ಲ್ಯಾಪ್​ಟ್ಯಾಪ್​ನ ಪಾಸ್​ವರ್ಡ್ ಬದಲಾಯಿತುತ್ತಿರುತ್ತಾರೆ. ವಿಡಿಯೋನಲ್ಲಿ ಮೊದಲಿಗೆ ಅಣ್ಣಾವ್ರ ಚಿತ್ರ ತೋರಿಸಲಾಗುತ್ತದೆ. ಬಳಿಕ ಪುನೀತ್​ರ ಸಣ್ಣ ಪುತ್ಥಳಿ ತೋರಿಸಲಾಗುತ್ತದೆ. ಬಳಿಕ ಅಶ್ವಿನಿ ಅವರು ಲ್ಯಾಪ್​ಟಾಪ್​ನಲ್ಲಿ ‘ರಾಯಲ್ ಚಾಲೆಂಜರ್ಸ್ ಬ್ಯಾಂಗಲೂರ್’ ಎಂದು ಇಂಗ್ಲೀಷ್​ನಲ್ಲಿ ಪಾಸ್​ವರ್ಡ್ ಅಪ್​ಡೇಟ್ ಮಾಡುತ್ತಾರೆ. ಆದರೆ ಆ ಪಾಸ್​ವರ್ಡ್​ ಅನ್ನು ಲ್ಯಾಪ್​ಟಾಪ್ ಅಕ್ಸೆಪ್ಟ್ ಮಾಡದೆ, ‘ಹಳೆಯ ಪಾಸ್​ವರ್ಡ್​ ಅನ್ನು ಮತ್ತೊಮ್ಮೆ ಬಳಸುವಂತಿಲ್ಲ’ ಎನ್ನುತ್ತದೆ. ಆಗ ಅಶ್ವಿನಿ ಅವರು ‘ಬ್ಯಾಂಗಲೂರ್’ ಅನ್ನು ಅಳಿಸಿ ಹೊಸ ಪಾಸ್​ವರ್ಡ್​ ಸೆಟ್ ಮಾಡುತ್ತಾರೆ. ಬಳಿಕ ಕ್ಯಾಮೆರಾ ಕಡೆ ತಿರುಗಿ ‘ಅರ್ಥವಾಯ್ತಾ?’ ಎಂದು ಕೇಳುತ್ತಾರೆ.

ಇಷ್ಟು ದಿನ ಆರ್​ಸಿಬಿ ಹೆಸರು ‘ರಾಯಲ್ ಚಾಲೆಂಜರ್ಸ್ ಬ್ಯಾಂಗಲೂರ್’ ಎಂದಿತ್ತು. ಆದರೆ ಅದನ್ನು ಈ ಬಾರಿ ಬದಲಾಯಿಸಲಾಗುತ್ತಿದ್ದು, ಇನ್ನು ಮುಂದೆ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಎಂದು ಮಾಡಲಾಗುತ್ತಿದೆ. ಮಾರ್ಚ್ 15ರಂದು ಅದ್ಧೂರಿಯಾಗಿ ಆರಂಭಗೊಂಡ ಆರ್​ಸಿಬಿ ಅನ್​ಬಾಕ್ಸಿಂಗ್ ಇವೆಂಟ್​ನ ಪ್ರಚಾರ ಜಾಹೀರಾತು ಇದಾಗಿದೆ. ಇದಕ್ಕೆ ಕಿಡಿಗೇಡಿಗಳು ಕಿಡಿ ಹೊತ್ತಿಸಿದ್ದಾರೆ.

Shwetha M