ಅವಮಾನ ತಂದ ಉಬ್ಬು ಹಲ್ಲಿನಿಂದಲೇ ಸಿಕ್ಕಿತ್ತು ಜಗತ್ತಿನೆಲ್ಲೆಡೆ ಜನಪ್ರಿಯತೆ
‘ತಾರೆ ಜಮೀನ್ ಪರ್’ ನ ಮುಗ್ಧ ಬಾಲಕ ಈಗ ಮನಸೆಳೆಯೋ ಯುವನಾಯಕ
ತಾರೆ ಜಮೀನ್ ಪರ್ ಸಿನಿಮಾದಿಂದ ಸಖತ್ ಫೇಮಸ್ ಆಗಿರುವ ದರ್ಶೀಲ್ ಸಫಾರಿ, ತನ್ನನ್ನು ಜಗತ್ತಿಗೆ ಪರಿಚಯಿಸಿದ್ದು ತನ್ನ ಉಬ್ಬು ಹಲ್ಲು ಅಂತಾ ಹೇಳಿಕೊಂಡಿದ್ದಾರೆ. ತನ್ನ ಉಬ್ಬು ಹಲ್ಲಿನಿಂದ ಎಷ್ಟು ಅವಮಾನ ಪಟ್ಟಿದ್ದೆನೋ ಅಷ್ಟೇ ಜನಪ್ರಿಯತೆಯನ್ನೂ ಕೂಡಾ ಗಳಿಸಿದ್ದೇನೆ ಅನ್ನೋ ಸತ್ಯವನ್ನು ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಅಂಗಳದಲ್ಲಿ ಮಂಕಾದ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ
ಬಾಲಿವುಡ್‌ನಲ್ಲಿ ಆಮಿರ್ ಖಾನ್ ನಿರ್ದೇಶನದ ‘ತಾರೆ ಜಮೀನ್ ಪರ್’ ಚಿತ್ರ ಸೂಪರ್ ಹಿಟ್ ಆಗಿತ್ತು. ಅಂದು ತಾರೆ ಜಮೀನ್ ಪರ್ ಚಿತ್ರದಲ್ಲಿ ಎಲ್ಲರ ಮನಗೆದ್ದಿದ್ದು ದರ್ಶೀಲ್ ಸಫಾರಿ. ಮಂದಮತಿಯ, ವಿದ್ಯಾಭ್ಯಾಸದಲ್ಲಿ ಚುರುಕು ಇಲ್ಲದ ಬಾಲಕನ ಪಾತ್ರವನ್ನು ದರ್ಶೀಲ್ ಸಫಾರಿ ಮನಮುಟ್ಟುವಂತೆ ಅಭಿನಯಸಿದ್ದ. ಉಬ್ಬು ಹಲ್ಲಿನ ದರ್ಶೀಲ್ ಸಫಾರಿ ಸಿನಿಮಾದಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದ. ಆದರೆ, ತನ್ನ ಶಾಲೆಯಲ್ಲಿ ಇನ್ನಿಲ್ಲದ ಅವಮಾನ ಅನುಭವಿಸಿದ್ದನಂತೆ. ಉಬ್ಬು ಹಲ್ಲು ಇದೆ ಎಂಬ ಕಾರಣಕ್ಕೆ ಎಲ್ಲರೂ ತನ್ನನ್ನು ಆಡಿಕೊಳ್ಳುತ್ತಿದ್ದರು. ಶಾಲೆಯಲ್ಲಿ ಲೇವಡಿ ಮಾಡಲಾಗುತ್ತಿತ್ತು. ಆದರೆ, ಅದೇ ಹಲ್ಲಿನ ಕಾರಣದಿಂದಾಗಿಯೇ ‘ತಾರೆ ಜಮೀನ್ ಪರ್’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅಲ್ಲಿಂದ ತನ್ನ ಬದುಕೇ ಬದಲಾಯ್ತು ಅಂತಾ ದರ್ಶೀಲ್ ಸಫಾರಿ ಹೇಳಿಕೊಂಡಿದ್ದಾರೆ.
2007ರಲ್ಲಿ ‘ತಾರೆ ಜಮೀನ್ ಪರ್’ ಸಿನಿಮಾದಲ್ಲಿ ನಟಿಸಿದ ನಂತರ 2010ರಲ್ಲಿ ಬಂದ ‘ಬಂ ಬಂ ಭೋಲೆ’, 2012ರಲ್ಲಿ ತೆರೆಕಂಡ ‘ಮಿಡ್ನೈಟ್ ಚಿಲ್ಡ್ರನ್’ ಮುಂತಾದ ಚಿತ್ರಗಳಲ್ಲಿ ದರ್ಶೀಲ್ ಸಫಾರಿ ನಟಿಸಿದ್ದರು. ನಂತರದ ದಿನಗಳಲ್ಲಿ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನಹರಿಸಿದ ದರ್ಶೀಲ್ ಸಫಾರಿ ಇತ್ತೀಚೆಗೆ ‘ಕ್ಯಾಪಿಟಲ್ ಎ, ಸ್ಮಾಲ್ ಎ’ ಎಂಬ ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಉಬ್ಬುಹಲ್ಲಿನ ಮುಗ್ಧ ಹುಡುಗನಾಗಿ ಎಲ್ಲರಿಗೂ ಇಷ್ಟವಾಗಿದ್ದ ದರ್ಶೀಲ್ ಸಫಾರಿ, ಈಗ ಹೀರೋ ಲುಕ್‌ಲ್ಲಿ ಕಾಣಿಸ್ತಿದ್ದು, ಸಿನಿಮಾ ಕಡೆ ಒಲವು ತೋರಿದ್ದಾರೆ.