ಪಾಪ್‌ ಕಾರ್ನ್ ಹುಡ್ಗನ ಡ್ಯಾನ್ಸ್‌ ಟ್ರೆಂಡ್‌.. ರಾತ್ರೋರಾತ್ರಿ ಫೇಮಸ್..‌ ಯುವಕನ ಲಕ್‌ ಚೇಂಜ್

ಪಾಪ್‌ ಕಾರ್ನ್ ಹುಡ್ಗನ ಡ್ಯಾನ್ಸ್‌ ಟ್ರೆಂಡ್‌.. ರಾತ್ರೋರಾತ್ರಿ ಫೇಮಸ್..‌ ಯುವಕನ ಲಕ್‌ ಚೇಂಜ್

ಇದು ಸೋಶಿಯಲ್ ಮೀಡಿಯಾ ಅನ್ನೋದೇ ಹಾಗೇ.. ಯಾರು, ಯಾವಾಗ ವೈರಲ್‌ ಆಗ್ತಾರೆ ಅಂತಾ ಹೇಳೋಕೆ ಸಾಧ್ಯ ಇಲ್ಲ.. ರಾತ್ರಿ ಬೆಳಗಾಗೋದ್ರೊಳಗೆ ಸಾಮಾನ್ಯ ವ್ಯಕ್ತಿ ಕೂಡ ಸೆಲೆಬ್ರಿಟಿಯಾಗಿ ಬಿಡ್ತಾರೆ. ಮೊನ್ನೆ ಮೊನ್ನೆಯಷ್ಟೇ ಬಿರುಗಾಳಿ ಸಿನಿಮಾದ ಹೂವಿನ ಬಾಣದಂತೆ ಸಾಂಗ್‌ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ನಿತ್ಯಾಶ್ರೀ ಈ ಸಾಂಗ್‌ ನ ತನ್ನದೇ ಸ್ಟೈಲ್‌ ನಲ್ಲಿ ಹಾಡಿ ಈಗ ಸೆಲೆಬ್ರಿಟಿಯಾಗಿದ್ದಾಳೆ. ಇದೀಗ ಪಾಪ್‌ ಕಾರ್ನ್‌, ಚಿಪ್ಸ್‌ ಸೇಲ್‌ ಮಾಡೋ ಹುಡುಗನ ಡ್ಯಾನ್ಸ್‌ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಸೋಶಿಯಲ್‌ ಮೀಡಿಯಾದಲ್ಲಿ ಈತನದ್ದೇ ಡ್ಯಾನ್ಸ್‌ ವೈರಲ್‌ ಆಗ್ತಿದೆ.

ಇದನ್ನೂ ಓದಿ: 1 ಸಾವಿರ ರೂಪಾಯಿಗಾಗಿ ಕಿಸ್ ಮಾಡ್ತಿದ್ರಂತೆ ಸೈಫ್ ಅಲಿ ಖಾನ್ – 10 ಬಾರಿ ಗಲ್ಲಕ್ಕೆ ಚುಂಬಿಸುತ್ತಿದ್ದ ಬಾಲಿವುಡ್ ನಟ

ಈಗ ಫೇಮಸ್‌ ಆಗ್ಬೇಕು ಅಂದ್ರೆ ಜಸ್ಟ್‌ ಒಂದೇ ಒಂದು ವಿಡಿಯೋ ಸಾಕು.. ಡಿಫ್ರೆಂಟ್‌ ಆಗಿ ಹಾಡಿ, ಡ್ಯಾನ್ಸ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ರೆ  ರಾತ್ರೋ ರಾತ್ರಿ ಜಗತ್ತಿಗೆ ಪರಿಚಯವಾಗಿ ಬಿಡ್ತಾರೆ.  ಮೊನ್ನೆಯಷ್ಟೇ ಹೂವಿನ ಬಾಣದಂತೆ ಸಾಂಗ್‌ ಹೇಳಿದ್ದ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಸೆಟ್‌ ಮಾಡಿದ್ಲು. ತನ್ನದೇ ಸ್ಟೈಲ್‌ ನಲ್ಲಿ ಹಾಡಿ ನಿತ್ಯಾಶ್ರೀ ಸೆಲೆಬ್ರಿಟಿ ಆಗಿದ್ದಾಳೆ. ಇದೀಗ ಇದೇ ಸಾಲಿಗೆ ಪಾಪ್‌ ಕಾರ್ನ್‌, ಚಿಪ್ಸ್‌ ಸೇಲ್‌ ಮಾಡ್ತಿದ್ದ ಯುವಕ ಸೇರಿದ್ದಾನೆ. ಯುವ ದಸರಾದಲ್ಲಿ ಯುವತಿರ ಜೊತೆ ಭರ್ಜರಿ ಡ್ಯಾನ್ಸ್‌ ಮಾಡಿ ವೈರಲ್‌ ಆಗಿದ್ದಾನೆ. ಕೈಯಲ್ಲಿ ಚಿಪ್ಸ್‌ ಪ್ಯಾಕ್‌ ಹಿಡ್ಕೊಂಡು ಭರ್ಜರಿ ಸ್ಟೇಪ್ಸ್‌ ಹಾಕಿದ್ದಾನೆ.

ಮೈಸೂರು ದಸರಾ ಬಂತಂದ್ರೆ ಸಾಕು.. ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರ್ಯಕ್ರಮಗಳನ್ನ ನೋಡಲು ಹೆಚ್ಚು ಯುವಕ ಯುವತಿಯೇ ಸೇರ್ತಾರೆ. ಸ್ಟೇಜ್ ಮೇಲೆ ಕಲಾವಿದರು ಹಾಡು,  ಡಾನ್ಸ್ ಮೂಲಕ ರಂಜಿಸ್ತಾ ಇದ್ರೆ, ಇತ್ತ ಯುವಕ ಯುವತಿಯರು ಸ್ಟೇಜ್‌ ಮುಂದೆ ಭರ್ಜರಿ ಸ್ಟೆಪ್ಸ್‌ ಹಾಕ್ತಾರೆ. ಇದೇ ರೀತಿ ಈ ವರ್ಷದ ದಸರಾದಲ್ಲಿ ಪಾಪ್‌ಕಾರ್ನ್‌, ಚಿಪ್ಸ್‌  ಮಾರೋ ಯುವಕನೊಬ್ಬ ಭರ್ಜರಿ ಡ್ಯಾನ್ಸ್‌ ಮಾಡಿದ್ದಾನೆ. ಆತ ಬಿಂದಾಸ್ ಆಗಿ ಸ್ಟೆಪ್ಸ್‌ ಹಾಕಿರೋ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಆತನಿಗೆ ಅಲ್ಲೇ ಇದ್ದ ಯುವತಿ ಕೂಡ ಸಾಥ್‌ ನೀಡಿದ್ದಾಳೆ. ಇದೀಗ ವಿಡಿಯೋ ವೈರಲ್‌ ಆಗ್ತಿದ್ದಂತೆ ಆತ ಯಾರು? ಆತನ ಹಿನ್ನೆಲೆ ಏನು ಅನ್ನೋದು ರಿವೀಲ್‌ ಆಗಿದೆ. ಪಾಪ್‌ ಕಾರ್ನ್‌ ಸೇಲ್‌ ಮಾಡ್ತಾ ಡ್ಯಾನ್ಸ್‌ ಮಾಡ್ತಾ ಇದ್ದ ಯುವಕನ ಹೆಸರು ನಂದ ಕುಮಾರ್‌..

ಮೈಸೂರು ದಸರಾದಲ್ಲಿ ಡ್ಯಾನ್ಸ್‌ ಮಾಡಿ ವೈರಲ್‌ ಆದ ನಂದಕುಮಾರ್‌ ಮೈಸೂರಿನ ರಾಮನಹಳ್ಳಿಯವರು.. ನಂದಕುಮಾರ್‌ ಓದಿದ್ದು 8 ನೇ ಕ್ಲಾಸ್‌. ತಂದೆ ಇಲ್ಲ.. ತಾಯಿ ಮನೆ ಕೆಲಸ ಮಾಡ್ತಿದ್ದಾರೆ. ಮನೆಯಲ್ಲಿ ಬಡತನ ಇರೋದ್ರಿಂದಾಗಿ ಓದು ಮುಂದುವರಿಸಲು ಆಗಿಲ್ಲ. ಹೀಗಾಗಿ ಮೈಸೂರಿನ ಮಾರ್ಕೆಟ್‌ನಲ್ಲಿ ಫ್ರೂಟ್ಸ್‌ ಸೇಲ್‌ ಮಾಡ್ತಾ, ಕಾರ್ಯಕ್ರಮಗಳಿದ್ದಲ್ಲಿ ಚಿಪ್ಸ್‌, ಪಾಪ್‌ ಕಾರ್ನ್ ಸೇಲ್‌ ಮಾಡಿ, ಅದ್ರಲ್ಲಿ ಬಂದ ಹಣದಿಂದ ಜೀವನ ನಡೆಸ್ತಾ ಇದ್ದಾರೆ ಎಂದು ಸಂದರ್ಶನವೊಂದ್ರಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ನಂದಕುಮಾರ್‌ ಡ್ಯಾನ್ಸ್‌ ಮಾತ್ರವಲ್ಲದೇ ನಟನೆಯಲ್ಲೂ ಆಸಕ್ತಿ ಇದ್ಯಂತೆ. ಯಾವುದಾದ್ರೂ ವೇದಿಕೆಯಲ್ಲಿ ಚಾನ್ಸ್ ಸಿಕ್ಕಿದ್ರೆ ಭಾಗವಹಿಸ್ತೀನಿ. ಜೀ ಕನ್ನಡದಲ್ಲಿ ಶುರುವಾಗಲಿರೋ ಡಿಕೆಡಿ ಶೋಗೆ ಕರೆದ್ರೆ ಅಲ್ಲಿಗೂ ಹೋಗ್ತೀನಿ ಅಂತಾ ಹೇಳಿದ್ದಾರೆ. ಇದೀಗ ಯುವ ದಸರಾದಲ್ಲಿ ಚಿಪ್ಸ್‌ ಮಾರ್ತಾ,  ಡ್ಯಾನ್ಸ್‌ ಮಾಡೋ ಮೂಲಕ ಸೋಶಿಯಲ್‌ ಮೀಡಿಯಾ ಸ್ಟಾರ್‌ ಆಗಿದ್ದಾರೆ. ಇದೀಗ ಸೋಶಿಯಲ್‌ ಮೀಡಿಯಾ ಬಳಕೆದಾರರು ಈತನ ಡ್ಯಾನ್ಸ್‌ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಡವರು ಮಕ್ಕಳು ಬೆಳಿಬೇಕು.. ಇದು ರಿಯಲ್‌ ಟ್ಯಾಲೆಂಟ್‌ ಅಂತಾ ಕಾಮೆಂಟ್‌ ಮಾಡ್ತಿದ್ದಾರೆ.

ಒಟ್ಟಾರೆ.. ಚಿಪ್ಸ್‌ ಸೇಲ್‌ ಮಾಡ್ತಿದ್ದ ಯುವಕ ತನ್ನ ಅದ್ಬುತ ಡ್ಯಾನ್ಸ್‌ ಮೂಲಕ ರಾತ್ರೋ ರಾತ್ರಿ ಫೇಮಸ್‌ ಆಗಿದ್ದಾನೆ. ಈತನ ಟ್ಯಾಲೆಂಟ್‌ಗೆ ಉತ್ತಮ ವೇದಿಕೆ ಸಿಗ್ಲಿ.. ಒಳ್ಳೆ ಹೆಸ್ರು ಮಾಡ್ಲಿ ಅನ್ನೋದು ಎಲ್ಲರ ಆಶಯ.

Shwetha M