ವಿಶ್ವದ ನಂ.1 ನಿರ್ಗತಿಕ ದೇಶ PAK – ಜನರನ್ನೇ ಸಾಕದ ಪಾಕ್‌ಗೆ J&K ಬೇಕಾ?
ಚೀನಾಗಿಂತ ಭಾರತವೇ ಪವರ್‌ಫುಲ್

ಬಡತನ.. ಇದು ಪ್ರತಿಯೊಂದು ದೇಶಗಳಲ್ಲಿ ಇರುತ್ತೆ.. ಸಾಕಷ್ಟು ಜನ ಬಡತನ ರೇಖೆಯಿಂದ ಕೆಳಗಿರುತ್ತಾರೆ. ದೇಶಗಳು ಅಭಿವೃದ್ಧಿ ಆಗದೇ ಇರೋದು ಬಡತನಕ್ಕೆ ದೊಡ್ಡ ಕಾರಣ. ಹಾಗೇ ನಿರ್ಗತಿಕರು ಕೂಡ ವಿಶ್ವದಲ್ಲಿ ದೊಡ್ಡ ಮಟ್ಟದಲ್ಲೇ ಇದ್ದಾರೆ. ಕೋಟಿ ಕೋಟಿ ಜನ ಆಶ್ರಯ, ಆಧಾರ, ಸರ್ಕಾರದಿಂದ ಯಾವುದೇ ಸಹಾಯ ಇಲ್ಲದೇ ಜೀವನ ನಡೆಸುತ್ತಿದ್ದಾರೆೆ. ಜಗತ್ತಿನಲ್ಲಿ ಅತಿ ಹೆಚ್ಚು ನಿರ್ಗತಿಕರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ನಮ್ಮ ಶತ್ರುದೇಶವೇ ಮೊದಲ ಸ್ಥಾನದಲ್ಲಿದೆ. ತನ್ನ ದೇಶದ ಜನರಿಗೆ ಮೂಲ ಸೌಕರ್ಯ ನೀಡುವು ಯೋಗ್ಯತೆ ಇಲ್ಲದಿದ್ದರೂ ಭಾರತದ ಮೇಲೆ ಕೆಂಡಕಾರುತ್ತಲೇ ಇರುತ್ತೆ ಪಾಪಿ ಪಾಕ್.
OECDವರದಿಯನ್ನು ಆಧರಿಸಿ ಪ್ರಕಟವಾಗಿರುವ ಅಂಕಿಅಂಶಗಳ ಪ್ರಕಾರ, ಜಗತ್ತಿನಲ್ಲಿ ಅತಿ ಹೆಚ್ಚು ನಿರ್ಗತಿಕರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಪಾಪಿ ಪಾಕಿಸ್ತಾನ ನಂಬರ್ 1 ಪಟ್ಟ ಅಲಂಕರಿಸಿದೆ. ಆದ್ರೆ ವಿಶ್ವದ ಅತಿ ದೊಡ್ಡ ಜನಸಂಖ್ಯೆಯ ದೇಶವಾದ ಭಾರತದಲ್ಲಿ ಈ ಪ್ರಮಾಣ ಪಾಕಿಸ್ತಾನಕ್ಕಿಂತ 4 ಪಟ್ಟು ಕಡಿಮೆ ಇದೆ. ಹಾಗಿದ್ರೆ ಪಾಕಿಸ್ತಾನದಲ್ಲಿ ಜನ ಬೀದಿಗೆ ಬೀಳುವುದ್ದಕ್ಕೆ ಕಾರಣವೇನು ಅನ್ನೋದ್ದನ್ನ ನೋಡೋದಾದ್ರೆ.
ಪಾಕಿಸ್ತಾನದಲ್ಲಿ 80 ಲಕ್ಷ ಜನ ನಿರ್ಗತಿಕರು ಇದ್ದಾರೆ. ಇಲ್ಲಿ ಜನ ಬೀದಿಗೆ ಬೀಳಲು ಪ್ರಮುಖ ಕಾರಣ ಆ ದೇಶದ ಆರ್ಥಿಕ ಅಸ್ಥಿರತೆ. ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನ ತೀವ್ರ ಹಣದುಬ್ಬರ ಮತ್ತು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಜನರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದರ ಜೊತೆಗೆ, ಭೀಕರ ಪ್ರವಾಹಗಳು ಮತ್ತು ನೈಸರ್ಗಿಕ ವಿಕೋಪಗಳು ಸಾವಿರಾರು ಮನೆಗಳನ್ನು ನಾಶಪಡಿಸಿವೆ. ರಾಜಕೀಯ ಅಸ್ಥಿರತೆ ಮತ್ತು ವಸತಿ ಯೋಜನೆಗಳ ಕೊರತೆಯಿಂದಾಗಿ ಅಲ್ಲಿನ ಸಾಮಾನ್ಯ ಜನರಿಗೆ ಸೂರು ಕಲ್ಪಿಸಿಕೊಡುವುದ್ದಕ್ಕೂ ಕೂಡ ಅಲ್ಲಿನ ಸರ್ಕಾರದ ಕೈಯಲ್ಲಿ ಆಗುತ್ತಿಲ್ಲ.
ಭಾರತ ನಿರ್ಗತಿಕರ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿದೆ. 140 ಕೋಟಿಗೂ ಹೆಚ್ಚು ಜನ ಸಂಖ್ಯೆ ಇರೋ ಭಾರತದಲ್ಲಿ ನಿರ್ಗತಿಕರ ಸಂಖ್ಯೆ ಕಡಿಮೆ ಅಂತಾನೇ ಹೇಳಬಹುದು. ಭಾರತದಲ್ಲಿರೋ ನಿರ್ಗತಿಕರ ಸಂಖ್ಯೆ 17 ಲಕ್ಷದ 70,000 ಮಾತ್ರ. ಭಾರತ ಸರ್ಕಾರ ನಿರ್ಗತಿಕರಿಗೆ ಆಶ್ರಯ ನೀಡುವ ಕೆಲಸ ಮಾಡುತ್ತಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಕೋಟ್ಯಂತರ ಕುಟುಂಬಗಳಿಗೆ ಸ್ವಂತ ಮನೆ ನಿರ್ಮಿಸಿಕೊಡಲಾಗುತ್ತಿದೆ. ಇದು ವಸತಿ ರಹಿತರ ಸಂಖ್ಯೆಯನ್ನು ಗಣನೀಯವಾಗಿ ಇಳಿಸಿದೆ. ಜೊತೆಗೆ, ಭಾರತದ ಸ್ಥಿರ ಆರ್ಥಿಕ ಬೆಳವಣಿಗೆಯು ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದ್ದು, ಸಣ್ಣ ಮಟ್ಟದ ವಸತಿ ಸೌಕರ್ಯ ಪಡೆಯಲು ಹೆಲ್ಪ ಆಗುತ್ತಿದೆ.
ಭಾರತದಲ್ಲಿ ನಗರೀಕರಣ ಮತ್ತು ಉದ್ಯೋಗ ಹೆಚ್ಚಳವಾಗುತ್ತಿವೆ. ಹೆಚ್ಚುತ್ತಿರುವ ನಗರೀಕರಣದ ನಡುವೆಯೂ ಗ್ರಾಮೀಣ ಭಾಗದಲ್ಲಿ ‘ಉದ್ಯೋಗ ಖಾತರಿ’ಯಂತಹ ಯೋಜನೆಗಳು ಜನರ ವಲಸೆಯನ್ನು ತಡೆದು, ಸ್ವಂತ ಊರಿನಲ್ಲೇ ಸೂರು ಉಳಿಸಿಕೊಳ್ಳಲು ಸಹಾಯ ಮಾಡುತ್ತಿವೆ. ಜೊತೆಗೆ, ಭಾರತದ ಬಲಿಷ್ಠ ಅವಿಭಕ್ತ ಮತ್ತು ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯು ಆರ್ಥಿಕ ಸಂಕಷ್ಟದ ಸಮಯದಲ್ಲಿ ಜನರಿಗೆ ಆಸರೆಯಾಗಿ ನಿಲ್ಲುತ್ತದೆ. ನಾವು ಯವ್ಯಾವ ದೇಶಗಳು ಎಷ್ಟನೇ ಸ್ಥಾನದಲ್ಲಿ ಇವೆ ಅನ್ನೋದ್ದನ್ನ ನೋಡೋಣ.
| ಅತೀ ಹೆಚ್ಚು ನಿರ್ಗತಿಕರಿರುವ ದೇಶಗಳು | ||
| ದೇಶದ ಹೆಸರು | ನಿರ್ಗತಿಕರ ಸಂಖ್ಯೆ (ಅಂದಾಜು) | |
| 1 | ಪಾಕಿಸ್ತಾನ | 80,00,000 |
| 2 | ಸಿರಿಯಾ | 53,00,000 |
| 3 | ಬಾಂಗ್ಲಾದೇಶ | 50,00,000 |
| 4 | ನೈಜೀರಿಯಾ | 45,00,000 |
| 5 | ಫಿಲಿಪೈನ್ಸ್ | 45,00,000 |
| 6 | ಉಗಾಂಡಾ | 40,16,980 |
| 7 | ಅರ್ಜೆಂಟೀನಾ | 36,00,000 |
| 8 | ಸುಡಾನ್ | 30,00,000 |
| 9 | ಚೀನಾ | 25,79,000 |
| 10 | ನೇಪಾಳ | 25,00,000 |
| 11 | ಈಜಿಪ್ಟ್ | 20,00,000 |
| 12 | ಇರಾಕ್ | 20,00,000 |
| 13 | ಭಾರತ | 17,70,000 |
| 14 | ಡಿಆರ್ ಕಾಂಗೋ | 15,00,000 |
| 15 | ಮ್ಯಾನ್ಮಾರ್ | 15,00,00 |
ನಮ್ಮ ಭಾರತವೇ ಎಲ್ಲಾ ದೇಶಕ್ಕೆ ಹೊಲಿಸಿಕೊಂಡ್ರೆ ಗ್ರೇಟ್ ಅನ್ಸುತ್ತೆ. 140 ಕೋಟಿಗೂ ಹೆಚ್ಚು ಜನ ಸಂಖ್ಯೆ ಇದ್ದರೂ ಕೂಡ ನಿರ್ಗತಿಕರ ಸಂಖ್ಯೆ ಕಡಿಮೆ ಇದೆ. ಆದ್ರೆ ಪಾಕಿಸ್ತಾನ ನೋಡಿ ಕಡಿಮೆ ಜನ ಸಂಖ್ಯೆ ಇದ್ದರೂ 80 ಲಕ್ಷ ನಿರ್ಗತಿಕರಿದ್ದಾರೆ.

ನೋಡಿರಿ

