ಶ್ರಾವಣ ಮಾಸದಲ್ಲಿ ಸೋಮವಾರ ಪೂಜೆ ಹೇಗಿರಬೇಕು – ಸಂಪತ್ತು, ಸಮೃದ್ಧಿ, ಅದೃಷ್ಟ ಬರಬೇಕಂದ್ರೆ ಹೇಗಿರಬೇಕು ಭಕ್ತಿ?

ಶ್ರಾವಣ ಮಾಸದ ಪ್ರತಿಯೊಂದು ದಿನವೂ ನಮಗೆ ವಿಶೇಷವೆಂದು ಎನಿಸಿದರೂ ಶ್ರಾವಣ ಮಾಸದ ಸೋಮವಾರವೂ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಶ್ರಾವಣ ಮಾಸದ ಸಮಯದಲ್ಲಿ ಶಿವ ಭಕ್ತರು ಶಿವನನ್ನು ಶ್ರದ್ಧಾ – ಭಕ್ತಿಯಿಂದ ಪೂಜಿಸುತ್ತಾರೆ. ಶ್ರಾವಣ ಮಾಸದ ಪ್ರತಿಯೊಂದು ದಿನವೂ ಶಿವನಿಗೆ ಸಮರ್ಪಿತವಾಗಿದೆ. ಶ್ರಾವಣ ಮಾಸದಲ್ಲಿ ಶಿವನ ವಿಗ್ರಹ ಅಥವಾ ಫೋಟೋವನ್ನು ಪೂಜಿಸುವುದಕ್ಕಿಂತಲೂ ಶಿವಲಿಂಗವನ್ನು ಪೂಜಿಸುವುದು ಬಹಳ ಶ್ರೇಷ್ಠ. ಶಿವಲಿಂಗದ ಪೂಜೆಯು ಸಂಪತ್ತು, ಸಮೃದ್ಧಿಯನ್ನು, ಅದೃಷ್ಟವನ್ನು ತರುವುದರ ಜೊತೆಗೆ ಗ್ರಹ ದೋಷಗಳನ್ನು ಕೂಡ ದೂರ ಮಾಡುತ್ತದೆ.
ಶ್ರಾವಣ ಮಾಸದ ಸೋಮವಾರದ ದಿನದಂದು ಭಕ್ತರು ಶಿವಲಿಂಗಕ್ಕೆ ಹಾಲು, ಮೊಸರು, ನೀರು ಮತ್ತು ಜೇನುತುಪ್ಪ ಇತ್ಯಾದಿಗಳಿಂದ ಅಭಿಷೇಕವನ್ನು ಮಾಡುತ್ತಾರೆ. ಈ ರೀತಿ ಶಿವನಿಗೆ ಸೋಮವಾರದಂದು ಅಭಿಷೇಕ ಮಾಡುವುದರಿಂದ ಭಕ್ತರ ಬೇಡಿಕೆ ಈಡೇರುತ್ತದೆ ಅನ್ನೋ ನಂಬಿಕೆ. ಇದು ಭಕ್ತರಿಗೆ ಶಿವನ ಆಶೀರ್ವಾದವನ್ನು ಸರಳವಾಗಿ ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಶ್ರಾವಣ ಮಾಸದ ಸೋಮವಾರ ದಿನದಂದು ಅಂದರೆ ಶ್ರಾವಣ ಸೋಮವಾರದಂದು ಶಿವಲಿಂಗವನ್ನು ನಿಮ್ಮ ರಾಶಿಗನುಗುಣವಾಗಿ ಪೂಜಿಸಬೇಕಾಗುತ್ತೆ..
ಶ್ರಾವಣ ಸೋಮವಾರ ದಿನದಂದು ನೀವು ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಬೇಕು. ಅಭಿಷೇಕವನ್ನು ಮಾಡುವುದಕ್ಕಾಗಿ ಗಂಗಾ ಜಲವನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ನಂತರ ಸ್ವಲ್ಪ ಸ್ವಲ್ಪವೇ ಅಭಿಷೇಕವನ್ನು ಮಾಡಬೇಕು. ಶಿವಲಿಂಗಕ್ಕೆ ನೀವು ಗಂಗಾಜಲದಿಂದ ಅಭಿಷೇಕವನ್ನು ಮಾಡುವಾಗ ಶಿವನ ಮಂತ್ರವನ್ನು 108 ಬಾರಿ ಪಠಿಸಬೇಕು. ಅಭಿಷೇಕದ ನಂತರ ಶಿವಲಿಂಗದ ಮೇಲೆ ಒಂದು ಹಿಡಿಯಷ್ಟು ಅಕ್ಷತೆಯನ್ನು ಮತ್ತು ಬಿಲ್ವಪತ್ರೆ ಎಲೆಯನ್ನು ಹಾಕಬೇಕು. ಈ ಮೂರು ವಸ್ತುಗಳಿಂದ ಶಿವಲಿಂಗವನ್ನು ಯಾವ ವ್ಯಕ್ತಿ ಶ್ರಾವಣ ಸೋಮವಾರದ ದಿನದಂದು ಪೂಜಿಸುತ್ತಾನೋ ಆತನು ದನ ಲಾಭವನ್ನು ಹೊಂದುತ್ತಾನೆ. ಆತನ ಮಾನಸಿಕ ಹಾಗೂ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತದೆ. ಶನಿಗೆ ಸಂಬಂಧಿಸಿದ ದೋಷಗಳು ಕೂಡ ಕಳೆಯುತ್ತದೆ.

ನೋಡಿರಿ

