ಹೇಳಿದ್ದು ಸರ್ಕಾರಿ ಬಸ್ಸುಗಳಲ್ಲಿ, ಕೇಳ್ತಿರುವುದು ಖಾಸಗಿ ಬಸ್ಸುಗಳಲ್ಲಿ! – ಮಹಿಳೆಯರ ಉಚಿತ ಪ್ರಯಾಣದಲ್ಲೂ ಶುರುವಾಯ್ತು ರಾಜಕೀಯ..!

ಹೇಳಿದ್ದು ಸರ್ಕಾರಿ ಬಸ್ಸುಗಳಲ್ಲಿ, ಕೇಳ್ತಿರುವುದು ಖಾಸಗಿ ಬಸ್ಸುಗಳಲ್ಲಿ! – ಮಹಿಳೆಯರ ಉಚಿತ ಪ್ರಯಾಣದಲ್ಲೂ ಶುರುವಾಯ್ತು ರಾಜಕೀಯ..!

ಸರ್ಕಾರ ಕೊಟ್ಟ ಮಾತಿನಂತೆ ಸರಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿಮಾಡಿದೆ. ಆದರೆ, ಸರ್ಕಾರಿ ಬಸ್‌ಗಳು ಓಡಾಡುವ ಜಿಲ್ಲೆಗಳಲ್ಲಿ ಮಹಿಳೆಯರು ಫ್ರೀಯಾಗಿ ಓಡಾಡಬಹುದು. ಆದರೆ, ಖಾಸಗಿ ಬಸ್‌ಗಳೇ ಹೆಚ್ಚಾಗಿ ಓಡಾಡುವ ಜಿಲ್ಲೆಗಳ ಮಹಿಳೆಯರು ಏನು ಮಾಡಬೇಕು ಅನ್ನೋ ವಿಚಾರ ಈಗ ಭಾರೀ ಚರ್ಚೆಯಾಗುತ್ತದೆ.  ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳದ್ದೇ ಕಾರುಬಾರು. ಹೀಗಿರುವಾಗ ಈ ಜಿಲ್ಲೆಯ ಮಹಿಳೆಯರಿಗೂ ಉಚಿತ ಯೋಜನೆಯ ಲಾಭ ಸಿಗಬೇಕು ಎಂದು ಶಾಸಕ ಸುನಿಲ್ ಕುಮಾರ್ ಕಾರ್ಕಳ ಟ್ವೀಟ್ ಮಾಡಿದ್ದರು. ಈಗ ಇದರ ಬೆನ್ನಲ್ಲೇ, ಇದೀಗ ಸರಕಾರ ಸಹಕರಿಸಿದರೆ ನಾವು ರೆಡಿ ಎಂದು ಖಾಸಗಿ ಬಸ್ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಇದನ್ನೂ ಓದಿ: ತಿಂಗಳ ಮೊದಲ ದಿನವೇ ಖುಷಿ ಸುದ್ದಿ – ವಾಣಿಜ್ಯ ಬಳಕೆಯ LPG ಸಿಲಿಂಡರ್‌ ಬೆಲೆ ಭಾರೀ ಇಳಿಕೆ

ಖಾಸಗಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆ ಮಾಡಲು ನಾವು ಸಿದ್ಧ, ಆದರೆ ಕಂಡಿಷನ್ಸ್ ಅಪ್ಲೈ, ಎಂದು ಖಾಸಗಿ ಬಸ್ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಸರಕಾರಿ ಬಸ್ಸುಗಳಿಗೆ ಕೊಡುವ ಅನುಕೂಲ ಖಾಸಗಿ ಬಸ್ಸುಗಳಿಗೂ ನೀಡಿ. ಹಣದ ರೂಪದಲ್ಲಿ ಅಲ್ಲವಾದರೂ ತೆರಿಗೆ ವಿನಾಯಿತಿ, ಡೀಸೆಲ್ ಸಬ್ಸಿಡಿ ರೂಪದಲ್ಲಿ ಕೊಡಿ. ನಮಗೆ ಆಗುವ ಹೊರೆಯನ್ನು ತುಂಬಿಸಿಕೊಟ್ಟರೆ ಉಚಿತ ಪ್ರಯಾಣಕ್ಕೆ ನಾವು ಸಿದ್ಧ ಎಂದು ಸುರೇಶ್ ನಾಯಕ್ ಹೇಳಿದ್ದಾರೆ. ಮಂಗಳೂರು ಉಡುಪಿ ಶಿವಮೊಗ್ಗ ತುಮಕೂರು ಭಾಗದಲ್ಲಿ ಖಾಸಗಿ ಬಸ್ಸುಗಳ ಓಡಾಟ ಹೆಚ್ಚಿದೆ. ಈ ಭಾಗದ ಮಹಿಳೆಯರು ಹೆಚ್ಚಾಗಿ ಖಾಸಗಿ ಬಸ್ಸುಗಳಲ್ಲಿ ಓಡಾಟ ನಡೆಸುತ್ತಿದ್ದಾರೆ. ಈ ವಿಚಾರದಲ್ಲೂ ಈಗ ರಾಜಕೀಯ ನಡೆಯುತ್ತಿದ್ದು, ಈ ಭಾಗದ ಮಹಿಳೆಯರಿಗೂ ಖಾಸಗಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಸಿಗಬೇಕು ಅನ್ನೋ ರೀತಿ ಚರ್ಚೆ ನಡೆಯುತ್ತಿದೆ.

suddiyaana