ಸಿರಿಯಾ ಹಿಂಸಾಚಾರ –  ಸಿರಿಯಾದಿಂದ ಹೊರಡುವಂತೆ ಭಾರತೀಯ ಪ್ರಜೆಗಳಿಗೆ ಕೇಂದ್ರ ಸರ್ಕಾರ ಸೂಚನೆ

ಸಿರಿಯಾ ಹಿಂಸಾಚಾರ –  ಸಿರಿಯಾದಿಂದ ಹೊರಡುವಂತೆ ಭಾರತೀಯ ಪ್ರಜೆಗಳಿಗೆ ಕೇಂದ್ರ ಸರ್ಕಾರ ಸೂಚನೆ

ಸಿರಿಯಾ ಈಗ ಧಗಧಗಿಸುತ್ತಿದೆ. ಇಸ್ಲಾಮಿಕ್ ಬಂಡಾಯ ಗುಂಪು ಸಿರಿಯಾ ಸರ್ಕಾರದ ವಿರುದ್ಧ ದಂಗೆದ್ದಿದೆ. ಇದರ ಪರಿಣಾಮ ಸಿರಿಯಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿರುವ ಕಾರಣ ಭಾರತೀಯ ವಿದೇಶಾಂಗ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸಿರಿಯಾಗೆ ಅಥವಾ ಸಿರಿಯಾ ಮೂಲಕ ಯಾರೂ ಪ್ರಯಾಣಿಸಬೇಡಿ ಎಂದು ಎಚ್ಚರಿಸಿದೆ. ಇದರ ಜೊತೆಗೆ ಸಿರಿಯಾಲ್ಲಿರುವ ಭಾರತೀಯ ನಾಗರೀಕರು ಈ ತಕ್ಷಣವೇ ಹೊರಟುಬರಲು ಸೂಚಿಸಿದೆ. ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ತಕ್ಷಣವೆ ಹೊರಟು ಬರಲು ಸೂಚನೆ ನೀಡಲಾಗಿದೆ. ಹಾಗೇ ಸಿರಿಯಾದಲ್ಲಿರುವ ಭಾರತೀಯ ನಾಗರೀಕರು ಭಾರತದ ರಾಯಭಾರ ಕಚೇರಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರಲು ಸೂಚಿಸಿದೆ. ಸುರಕ್ಷತೆಯ ಸ್ಥಳದಲ್ಲಿರುವಂತೆ ಎಚ್ಚರಿಸಿದೆ. ಹಾಗಿದ್ರೆ ಸಿರಿಯಾದಲ್ಲಿ ಏನಾಗತ್ತಿದೆ. ಭಾರತೀಯರಿಗೆ ಯಾಕೆ ಎಚ್ಚರಿಕೆ ನೀಡಲಾಗಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಒಬ್ಬರಿಗೆ ಆಟ ಅರ್ಥ ಆಗಿಲ್ಲ.. ಮತ್ತೊಬ್ಬರಿಗೆ ಬಿಗ್‌ ಬಾಸ್‌ ಮೇಲೆ ರೆಸ್ಪೆಕ್ಟ್​ ಇಲ್ಲ! – ತ್ರಿಮೋಕ್ಷಿಗೆ ಕಿಚ್ಚನ ಕ್ಲಾಸ್?‌

ಸರಿಯಾದಲ್ಲಿರುವ ಬಾರತೀಯರಿಗೆ ತಕ್ಷಣವೇ ಹೊರಟ ಬರಲು ಸೂಚನೆ ನೀಡಲಾಗಿದೆ.  ಈ ತಕ್ಷಣಕ್ಕೆ ಹೊರಡಲು ಸಾಧ್ಯವಾಗುವ ಭಾರತೀಯರಿಗೆ ವಾಣಿಜ್ಯ ವಿಮಾನಗಳು ಲಭ್ಯವಿದೆ. ಈ ವಿಮಾನದ ಮೂಲಕ ಭಾರತಕ್ಕೆ ವಾಪಾಸ್ ಆಗುವಂತೆ ವಿದೇಶಾಂಗ ಇಲಾಖೆ ಮಾರ್ಗಸೂಚಿ ಬಿಡುಡೆ ಮಾಡಿದೆ. ಯಾರಿಗೆ ತಕ್ಷಣಕ್ಕೆ ಹೊರಡಲು ಸಾಧ್ಯವಾಗುವುದಿಲ್ಲ, ಅವರು ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಿ ಸಲಹೆ ಪಾಲಿಸಲು ಸೂಚಿಸಿದೆ. ಇದೇ ವೇಳೆ ಸಿರಿಯಾದ ಡಮಾಸ್ಕಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಹಾಯವಾಣಿ ಸಂಖ್ಯೆಯನ್ನು ನೀಡಲಾಗದೆ. ಈ ಸಂಖ್ಯೆಗೆ +963 993385973 ಕರೆ ಮಾಡಿ ಸಲಹೆ ಪಡೆಯಲು ಸೂಚಿಸಿದೆ. ಸಿರಿಯಾದಲ್ಲಿ ರಷ್ಯಾ ಹಾಗೂ ಇರಾನ್ ಬೆಂಬಲಿತ ಬಶರ್ ಅಲ್ ಅಸ್ಸಾದ್ ನೇತೃತ್ವದ ಸರ್ಕಾರವಿದೆ. ಆದರೆ ಈ ಸರ್ಕಾರ ವಿರುದ್ಧ ಸ್ಥಳೀಯ ಭಯೋತ್ಪಾದಕ ಗುಂಪು ತಿರುಗಿ ಬಿದ್ದಿದೆ.

ಟರ್ಬಿ ಬೆಂಬಿಲಿತ ಈ ಇಸ್ಲಾಮಿಕ್  ಬಂಡಾಯ ಗುಂಪು ಕಳೆದ ವಾರ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಕಿತ್ತೆಸೆಯುವ ಎಚ್ಚರಿಕೆ ನೀಡಿತ್ತು.  ಸಿರಿಯಾದ ಹಲವು ನಗರಗಳ ಮೇಲೆ ಈ ಗುಂಪು ದಾಳಿ ನಡೆಸಿದೆ. ಭಾರಿ ಹಿಂಸಾಚಾರದ ಮೂಲಕ ನಗರಗಳನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಸರ್ಕಾರದ ಪ್ರಮುಖ ಕೇಂದ್ರಗಳನ್ನು ಟಾರ್ಗೆಟ್ ಮಾಡಿದ್ದಾರೆ. ಈಗಾಗಲೇ ಹಲವು ನಗರಗಳು ಈ ಭಯೋತ್ಪಾದಕರ ಕೈಸೇರಿದೆ. ಅಲೆಪ್ಪೋ, ಹಮಾ ಸೇರಿದಂತೆ ಕೆಲ ನಗರಗಳು ಇದೀಗ ಬಂಡಾಯ ಗುಂಪಿನ ಕೈಯಲ್ಲಿದೆ.  ಸಂಪೂರ್ಣ ಸಿರಿಯಾ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಈ ಬಂಡಾಯ ಹಾಗೂ ಇಸ್ಲಾಮಿಕ್ ಬಯೋತ್ಪಾದಕ ಗುಂಪುಗಳು ಸಜ್ಜಾಗಿದೆ. ಹೀಗಾಗಿ ಸಿರಿಯಾದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಸಿರಿಯಾ ಸರ್ಕಾರವೇ ಪತನದ ಅಂಚಿನಲ್ಲಿದೆ. ಹೀಗೆ ಮುಂದುವರಿದರೆ ಸಿರಿಯಾ ಬಂಡಾಯ ಹಾಗೂ ಇಸ್ಲಾಮಿಕ್ ಭಯೋತ್ಪಾದಕರ ಕೈಸೇರಲಿದೆ. ಇದೇ ಕಾರಣದಿಂದ ಭಾರತೀಯ ವಿದೇಶಾಂಗ ಇಲಾಖೆ, ಎಚ್ಚರಿಕೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

Shwetha M