800 ಸಿನಿಮಾದಲ್ಲಿ ನಟಿಸದಂತೆ ವಿಜಯ್ ಸೇತುಪತಿಗೆ ರಾಜಕಾರಣಿಯ ಒತ್ತಡ – ಕಾರಣ ಬಹಿರಂಗ ಪಡಿಸಿದ ಮುತ್ತಯ್ಯ ಮುರಳೀಧರನ್

800 ಸಿನಿಮಾದಲ್ಲಿ ನಟಿಸದಂತೆ ವಿಜಯ್ ಸೇತುಪತಿಗೆ ರಾಜಕಾರಣಿಯ ಒತ್ತಡ – ಕಾರಣ ಬಹಿರಂಗ ಪಡಿಸಿದ ಮುತ್ತಯ್ಯ ಮುರಳೀಧರನ್

ಶ್ರೀಲಂಕಾ ಕ್ರಿಕೆಟ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಜೀವನಾಧಾರಿತ ಚಿತ್ರ ‘800’ ತೆರೆಗೆ ಬರಲು ಸಜ್ಜಾಗಿದೆ. ಅಕ್ಟೋಬರ್ 6 ರಂದು ಸಿನಿಮಾ ರಿಲೀಸ್ ಆಗಲಿದೆ. ಮುತ್ತಯ್ಯ ಮುರಳೀಧರನ್ ಪಾತ್ರಕ್ಕೆ ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬಂದಿತ್ತು. ಅಭಿಮಾನಿಗಳು ಕೂಡಾ ಜಗತ್ತಿನ ಶ್ರೇಷ್ಠ ಸ್ಪಿನ್ ಬೌಲರ್ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸುತ್ತಾರೆ ಅಂತಾನೇ ಭಾವಿಸಿದ್ದರು. ಆದರೆ, ವಿಜಯ್ ಸೇತುಪತಿ ನಟಿಸಲು ಒಪ್ಪಿಕೊಂಡಿರಲಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಸ್ವತಃ ಮುತ್ತಯ್ಯ ಮುರುಳೀಧರನ್ ಹೇಳಿದ್ದಾರೆ.

ಇದನ್ನೂ ಓದಿ: 41ನೇ ವರ್ಷಕ್ಕೆ ಕಾಲಿಟ್ಟ ಬಾಲಿವುಡ್ ಸ್ಟಾರ್ ರಣ್‌ಬೀರ್ ಕಪೂರ್ – ಅನಿಮಲ್ ಸಿನಿಮಾ ತಂಡದಿಂದ ಟೀಸರ್ ರಿಲೀಸ್

ಕ್ರಿಕೆಟ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಜೀವನಾಧಾರಿತ ‘800’ ಸಿನಿಮಾವನ್ನು ಎಂ.ಎಸ್. ಶ್ರೀಪತಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಪ್ರಾರಂಭದಲ್ಲಿ ಮುರಳೀಧರನ್ ಪಾತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಕಾರಣಾಂತರಗಳಿಂದ ವಿಜಯ್ ಸೇತುಪತಿ ಸಿನಿಮಾದಲ್ಲಿ ನಟಿಸಿರಲಿಲ್ಲ. ಇದೀಗ ಖುದ್ದು ಮುತ್ತಯ್ಯ ಮುರಳೀಧರನ್ ಅದಕ್ಕೆ ಕಾರಣ ತಿಳಿಸಿದ್ದಾರೆ. ನಾನು ಐಪಿಎಲ್ ಆಡುತ್ತಿದ್ದಾಗ ನಿರ್ದೇಶಕ ಶ್ರೀಪತಿ, ನಾನು ತಂಗಿದ್ದ ಹೋಟೆಲ್‌ನಲ್ಲಿಯೇ ವಿಜಯ್ ಸೇತುಪತಿ ಕೂಡ ಇದ್ದಾರೆ ಎಂದು ತಿಳಿಸಿದರು. ವಿಜಯ್ ಚಿತ್ರವೊಂದರ ಶೂಟಿಂಗ್‌ಗಾಗಿ ಅಲ್ಲಿಗೆ ಬಂದಿದ್ದರು. ಅವರನ್ನು ಸಂಪರ್ಕಿಸಿದಾಗ ಐದು ದಿನಗಳ ನಂತರ ಎರಡು ತಾಸು ಸಮಯ ನೀಡಿದರು. ಕಥೆ ಕೇಳಿದ ಅವರು ಇಂತಹ ಅವಕಾಶ ಬಿಡಲು ಸಾಧ್ಯವಿಲ್ಲ ಎಂದಿದ್ದರು. ನಂತರ ನಿರ್ಮಾಣ ಸಂಸ್ಥೆಯೂ ಕೈಜೋಡಿಸಿತು. ವಿಷಯ ಗೊತ್ತಾಗಿದ್ದೇ ತಡ ರಾಜಕಾರಣಿಯೊಬ್ಬರು ವಿಜಯ್ ಈ ಸಿನಿಮಾದಲ್ಲಿ ನಟಿಸಬಾರದು ಎಂದರು. ಕೆಲವರು ಅವರ ಕುಟುಂಬಕ್ಕೆ ಬೆದರಿಕೆಯೊಡ್ಡಿದ್ದರು. ಹೀಗಾಗಿ ವಿಜಯ್ ತೀವ್ರ ಒತ್ತಡದಲ್ಲಿದ್ದರು ಎಂದು ಮುರಳೀಧರನ್ ಹೇಳಿಕೊಂಡಿದ್ದಾರೆ. ಹೀಗಾಗಿ ವಿಜಯ್ ಜಾಗಕ್ಕೆ ‘ಸ್ಲಂಡಾಗ್ ಮಿಲಿಯನೇರ್’ ಚಿತ್ರದ ಮಧುರ್ ಮಿತ್ತಲ್ ಎಂಟ್ರಿ ಕೊಟ್ಟರು. ಇದೀಗ ಸಿನಿಮಾ ಪೂರ್ಣಗೊಂಡಿದ್ದು, ಇತ್ತೀಚೆಗಷ್ಟೆ ಟ್ರೇಲರ್ ಬಿಡುಗಡೆಯಾಗಿದೆ. ‘800’ ಇದೇ ಅ.6ರಂದು ತೆರೆಗೆ ಬರಲಿದೆ.

Sulekha