ಜೈಲಿನಲ್ಲಿ ರಾಜಾತಿಥ್ಯ ವಿಡಿಯೋ ಲೀಕ್ ಕೇಸ್! – ಪೊಲೀಸರನ್ನೇ ಯಾಮಾರಿಸಿದ್ರಾ ನಟ ಧನ್ವೀರ್?

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಕೈಯಲ್ಲಿ ಮೊಬೈಲ್, ಟಿವಿ ವ್ಯವಸ್ಥೆ ಮದ್ಯದ ಪಾರ್ಟಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದ್ರ ಬೆನ್ನಲ್ಲೇ ದರ್ಶನ್ ಆಪ್ತ ಧನ್ವೀರ್ ವಿರುದ್ಧ ವಿಡಿಯೋ ಲೀಕ್ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಧನ್ವೀರ್ ಅವರನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದ್ರೆ ಧನ್ವೀರ್ ಈ ಬಗ್ಗೆ ನನಗೇನು ಗೊತ್ತೇ ಇಲ್ಲ ಅಂತ ವಾದಿಸುತ್ತಲೇ ಬಂದಿದ್ದಾರೆ. ಇದೀಗ ಧನ್ವೀರ್ ಪೊಲೀಸರನ್ನೇ ಯಾಮಾರಿಸ್ತಿದ್ದಾರಾ ಅನ್ನೋ ಅನುಮಾನ ಕಾಡ್ತಿದೆ.
ಇದನ್ನೂ ಓದಿ: ಗಿಲ್ಲಿ ಚುಚ್ಚು ಮಾತಿಗೆ ಕಣ್ಣೀರಿಟ್ಟ ಕಾವ್ಯ – ವಿಲನ್ ಕೊಟ್ಟ ಟಾಸ್ಕ್ನಲ್ಲಿ ಗಿಲ್ಲಿ ಗೆದ್ರಾ?
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದಾಗಿನಿಂದಲೂ ಧನ್ವೀರ್ ಗೌಡ, ದರ್ಶನ್ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ದರ್ಶನ್ಗೆ ಬಹಳ ಆಪ್ತರಾಗಿರುವ ಧನ್ವೀರ್ ಗೌಡ, ರೇಣುಕಾ ಸ್ವಾಮಿ ಕೊಲೆ ಪ್ರಕರಣದ ನ್ಯಾಯಾಲಯದ ವಿಚಾರಣೆ, ವಕೀಲರ ನೇಮಕ ಇನ್ನಿತರೆ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದರ್ಶನ್, ಬಳ್ಳಾರಿ ಜೈಲಿನಲ್ಲಿದ್ದಾಗಲೂ ಸಹ ಕೆಲವು ಬಾರಿ ಜೈಲಿಗೆ ಭೇಟಿ ನೀಡಿದ್ದರು. ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗಲೂ ಅವರ ಭೇಟಿ ಮಾಡುತ್ತಲೇ ಇರುತ್ತಾರೆ. ಆದರೆ ಇದೀಗ ಅವರ ಕೊರಳಿಗೆ ಪ್ರಕರಣವೊಂದು ಸುತ್ತಿಕೊಂಡಿದೆ. ಪರಪ್ಪನ ಅಗ್ರಹಾರದಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡಿರುವ ವಿಡಿಯೋ ವೈರಲ್ ಮಾಡಿರುವ ಪ್ರಕಣದಲ್ಲಿ ನಟ ಧನ್ವೀರ್ ಗೆ ಸಂಕಷ್ಟ ಎದುರಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಬಳಸುತ್ತಿರುವುದು, ಜೈಲಿನಲ್ಲಿ ಖೈದಿಗಳು ಎಣ್ಣೆ ಪಾರ್ಟಿ ಮಾಡುತ್ತಿರುವ ಚಿತ್ರ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಖೈದಿಗಳ ಪಾರ್ಟಿ ವಿಡಿಯೋ ವೈರಲ್ ಮಾಡಿರುವ ಆರೋಪ ಧನ್ವೀರ್ ವಿರುದ್ಧ ಕೇಳಿಬಂದಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಧನ್ವೀರ್ ಅವರ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದ ಪೊಲೀಸರು ಡಾಟಾ ರಿಟ್ರೀವ್ ಮಾಡಲು ಸೈಬರ್ ಸೆಲ್ನ ಲ್ಯಾಬ್ಗೆ ಕಳುಹಿಸಿದ್ದರು. ಇದೀಗ ಲ್ಯಾಬ್ ವರದಿ ಬಂದಾಗಿದೆ. ಆದರೆ ಧನ್ವೀರ್ ಮೊಬೈಲ್ನಿಂದ ಯಾವುದೇ ಡಾಟಾ ರಿಕವರಿ ಆಗಿಲ್ಲ. ಪೊಲೀಸರಿಗೆ ಮೊಬೈಲ್ ನೀಡುವ ಮೊದಲೇ ಧನ್ವೀರ್ ಅವರು ಫೋನಿನಲ್ಲಿದ್ದ ಎಲ್ಲ ಡಾಟಾ ಅನ್ನು ಎರೇಸ್ ಮಾಡಿದ್ರಾ? ಅಥವಾ ಬೇರೊಂದು ಫೋನನ್ನು ಪೊಲೀಸರಿಗೆ ನೀಡಿದರೆ ಎಂಬ ಅನುಮಾನವೂ ಪೊಲೀಸರಿಗಿದೆ. ಪೊಲೀಸರು ಇದೀಗ ಎಫ್ಎಸ್ಎಲ್ ವರದಿಗಾಗಿ ನಿರೀಕ್ಷೆ ಮಾಡುತ್ತಿದ್ದಾರೆ. ಎಫ್ಎಸ್ಎಲ್ ವರದಿ ಬಂದ ಬಳಿಕ ಚಾರ್ಜ್ಶೀಟ್ನಲ್ಲಿ ಧನ್ವೀರ್ ವಿರುದ್ಧ ಸಾಕ್ಷ್ಯನಾಶದ ಕೇಸು ದಾಖಲಿಸುವ ಸಾಧ್ಯತೆ ಇದೆ.

ನೋಡಿರಿ

