ಆನಂದ್ ಮಹೀಂದ್ರಾ ಸೇರಿದಂತೆ 13 ಮಂದಿ ವಿರುದ್ಧ ವಂಚನೆ ಆರೋಪ – ಎಫ್‌ಐಆರ್ ದಾಖಲಿಸಿದ ಪೊಲೀಸರು

ಆನಂದ್ ಮಹೀಂದ್ರಾ ಸೇರಿದಂತೆ 13 ಮಂದಿ ವಿರುದ್ಧ ವಂಚನೆ ಆರೋಪ – ಎಫ್‌ಐಆರ್ ದಾಖಲಿಸಿದ ಪೊಲೀಸರು

ನವದೆಹಲಿ: ವಂಚನೆ ಸೇರಿದಂತೆ ಇತರ ಗಂಭೀರ ಆರೋಪಗಳ ಅಡಿಯಲ್ಲಿ ಆನಂದ್‌ ಮಹೀಂದ್ರಾ ಸೇರಿದಂತೆ 13 ಮಂದಿ ವಿರುದ್ಧ ಉತ್ತರ ಪ್ರದೇಶದ ಕಾನ್ಪುರದ ರಾಯ್‌ಪುರ್ವಾ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ವರದಿಯಾಗಿದೆ.

ಏನಿದು ಕೇಸ್‌?

ಆನಂದ್‌ ಮಹಿಂದ್ರಾ ಮಾಲೀಕತ್ವದ ಮಹೀಂದ್ರಾ & ಮಹೀಂದ್ರಾ ಕಂಪನಿ ಹಾಗೂ ಅದರ ಉದ್ಯೋಗಿಗಳು ಏರ್‌ಬ್ಯಾಗ್‌ ಇಲ್ಲದ ಕಾರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಜುಹಿ ನಿವಾಸಿಯಾಗಿರುವ ರಾಜೇಶ್‌ ಮಿಶ್ರಾ ಈ ದೂರು ನೀಡಿದ್ದಾರೆ. ಈ ಹಿನ್ನೆಲೆ ವಂಚನೆ ಸೇರಿದಂತೆ ಇತರ ಗಂಭೀರ ಆರೋಪಗಳ ಅಡಿಯಲ್ಲಿ ಉತ್ತರ ಪ್ರದೇಶದ ಕಾನ್ಪುರದ ರಾಯ್‌ಪುರ್ವಾ ಪೊಲೀಸ್‌ ಠಾಣೆಯಲ್ಲಿ ಆನಂದ್‌ ಮಹೀಂದ್ರಾ ಸೇರಿದಂತೆ ಮಹೀಂದ್ರಾ & ಮಹೀಂದ್ರಾ ಕಂಪನಿಯ 13 ಮಂದಿ ಉದ್ಯೋಗಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಇದನ್ನೂ ಓದಿ: ಪಾತಾಳಕ್ಕೆ ಕುಸಿದ ಪಾಪಿ ಪಾಕಿಸ್ತಾನ! – ದೇಶದಲ್ಲಿ ಕಡುಬಡತನ ಶೇ. 39.4ಕ್ಕೆ ಏರಿಕೆ!

ಮಗನಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದ ತಂದೆ!

ಕಾನ್ಪುರದ ಜೂಹಿ ಪ್ರದೇಶದ ನಿವಾಸಿ ರಾಜೇಶ್ ಮಿಶ್ರಾ ಅವರು ಡಿ. 2, 2020 ರಂದು ಜರೀಬ್ ಚೌಕಿಯಲ್ಲಿರುವ ತಿರುಪತಿ ಆಟೋದಿಂದ 17.39 ಲಕ್ಷ ರೂಪಾಯಿಗೆ ಕಪ್ಪು ಸ್ಕಾರ್ಪಿಯೋ ಖರೀದಿಸಿದ್ದರು. ವಾಹನದ ವೈಶಿಷ್ಟ್ಯಗಳು ಮತ್ತು ಸುರಕ್ಷತೆಯ ಬಗ್ಗೆ ಕಂಪನಿ ತಿಳಿಸಿತು. ಇಷ್ಟೇ ಅಲ್ಲ, ಹಲವು ಸಾಮಾಜಿಕ ಜಾಲತಾಣಗಳಲ್ಲಿ ಆನಂದ್ ಮಹೀಂದ್ರಾ ತೋರಿಸುತ್ತಿರುವ ಜಾಹೀರಾತುಗಳನ್ನು ನೋಡಿದ ಅವರು ತಮ್ಮ ಏಕೈಕ ಪುತ್ರ ಡಾ.ಅಪೂರ್ವ ಮಿಶ್ರಾ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಜ. 14, 2022 ರಂದು, ಅಪೂರ್ವ ಲಕ್ನೋದಿಂದ ಕಾನ್ಪುರಕ್ಕೆ ಸ್ನೇಹಿತರೊಂದಿಗೆ ಹಿಂತಿರುಗುತ್ತಿದ್ದರು. ಮಂಜಿನಿಂದಾಗಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಅಪೂರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಂಚಿಸಿ ಕಾರು ಮಾರಾಟ ಮಾಡಿದ ಆರೋಪ

ಮಗ ಸೀಟ್ ಬೆಲ್ಟ್ ಹಾಕಿಕೊಂಡಿದ್ದ. ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ, ಆದರೆ ಏರ್‌ಬ್ಯಾಗ್ ನಿಯೋಜಿಸದ ಕಾರಣ ಮಗ ಸಾವನ್ನಪ್ಪಿದ್ದಾನೆ. ಕಾರನ್ನು ಮೋಸದಿಂದ ತಮಗೆ ಮಾರಾಟ ಮಾಡಲಾಗಿದೆ ಎಂಬುದು ರಾಜೇಶ್ ಅವರ ನೇರ ಆರೋಪ. ಈ ವಿಚಾರವಾಗಿ ಮೊದಲು ಶೋರೂಂ ಉದ್ಯೋಗಿಗೆ ದೂರು ನೀಡಿದಾಗ ಮೊದಲು ಜಗಳ ಆರಂಭಿಸಿದ್ದಾರೆ. ಅಲ್ಲದೆ ಕೊಲೆ ಬೆದರಿಕೆ ಹಾಕಿದ್ದಾರೆ. ಇದಾದ ಬಳಿಕ ರಾಯ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ವಿಚಾರಣೆ ನಡೆಯದಿದ್ದಾಗ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದೆ ಎಂದು ವರದಿಯಾಗಿದೆ.

Shwetha M