ಅಕ್ಟೋಬರ್ 20ಕ್ಕೆ ಬೆಂಗಳೂರಿನಲ್ಲಿ ಮೊದಲ ವಿಶ್ವಕಪ್ ಪಂದ್ಯ – ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಖಾಕಿ ಹೈಅಲರ್ಟ್

ಅಕ್ಟೋಬರ್ 20ಕ್ಕೆ ಬೆಂಗಳೂರಿನಲ್ಲಿ ಮೊದಲ ವಿಶ್ವಕಪ್ ಪಂದ್ಯ – ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಖಾಕಿ ಹೈಅಲರ್ಟ್

ಬೆಂಗಳೂರಿನಲ್ಲಿ ಈ ಬಾರಿ ಮೊದಲ ವಿಶ್ವಕಪ್ ಪಂದ್ಯ ಅಕ್ಟೋಬರ್ 20ರಂದು ನಡೆಯಲಿದೆ.  ಪಂದ್ಯಕ್ಕೆ ಸಕಲ ಸಿದ್ದತೆಗಳನ್ನು ಕೆಎಸ್‌ಸಿಎ ಮಾಡಿಕೊಂಡಿದೆ. ಇತ್ತ ಪಂದ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಹಿಸಿರುವ ಬೆಂಗಳೂರು ಪೊಲೀಸರು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಹೈಅಲರ್ಟ್ ಘೋಷಿಸಿದ್ದಾರೆ. ಮತ್ತೊಂದೆಡೆ ಬೆಂಗಳೂರಿನಲ್ಲಿರುವ ಪಾಕಿಸ್ತಾನ ತಂಡದಲ್ಲಿ ಕೆಲವರು ವೈರಲ್ ಫೀವರ್‌ನಿಂದ ಬಳಲುತ್ತಿದ್ದಾರೆ.

ಇದನ್ನೂ ಓದಿ: ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಜೈ ಶ್ರೀರಾಮ್ ಘೋಷಣೆ – ಉದಯನಿಧಿ ಸ್ಟಾಲಿನ್‌ಗೆ ಗೌರವ್ ಭಾಟಿಯಾ ‘ನಮಾಜ್’ ಕೌಂಟರ್

2023ರ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನ, ಇದೀಗ ತನ್ನ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುತ್ತಿದೆ. ಉಭಯ ತಂಡಗಳ ಈ ಕದನ ಅಕ್ಟೋಬರ್ 20 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಬೆಂಗಳೂರಿನಲ್ಲಿ ವಿಶ್ವಕಪ್‌ನ ಮೊದಲ ಪಂದ್ಯ ನಡೆಯುತ್ತಿರುವುದರಿಂದ ಇಡೀ ಕ್ರೀಡಾಂಗಣ ಭರ್ತಿಯಾಗುವ ಸಾಧ್ಯತೆ ಇದೆ. ಅಲ್ಲದೆ ಈಗಾಗಲೇ ಮೊದಲ ಪಂದ್ಯದ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಹೀಗಾಗಿ ಈ ಪಂದ್ಯದಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಲು ಕೆಲವು ಸಂಘನೆಗಳು ತಯಾರಿ ನಡೆಸಿವೆ ಎಂದು ವರದಿಯಾಗಿದೆ. ಈ ಹಿನ್ನಲೆಯಲ್ಲಿ ಮತ್ತಷ್ಟು ಅಲರ್ಟ್ ಆಗಿರುವ ಪೊಲೀಸರು ಮ್ಯಾಚ್ ವಿಕ್ಷಣೆಗೆ ಬರುವವರ ಮೇಲೆ ಹದ್ದಿನಕಣ್ಣಿಡಲು ತೀರ್ಮಾನಿಸಿದ್ದಾರೆ.

ಏಕದಿನ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲು ಬೆಂಗಳೂರಿಗೆ ಆಗಮಿಸಿರುವ ಪಾಕಿಸ್ತಾನ ತಂಡ ಸಂಕಷ್ಟದಲ್ಲಿದೆ. ಭಾರತದ ವಿರುದ್ಧ ಸೋಲಿನ ಬಳಿಕ ಪಾಕ್ ತಂಡದ ಆಟಗಾರರು ವೈರಲ್ ಫೀವರ್​ನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ತಂಡದ ಹಲವು ಆಟಗಾರರಲ್ಲಿ ವೈರಲ್ ಫೀವರ್​ ಕಾಣಿಸಿಕೊಂಡಿದ್ದು, ಇದರಲ್ಲಿ ಬಹುತೇಕ ಆಟಗಾರರ ಆರೋಗ್ಯ ಈಗ ಸುಧಾರಿಸಿದೆ. ಆದರೆ ಇನ್ನೂ ಇಬ್ಬರು ಆಟಗಾರರ ಆರೋಗ್ಯದಲ್ಲಿ ಚೇತರಿಕೆ ಕಂಡಿಲ್ಲ ಎಂದು ವರದಿಯಾಗಿದೆ.

Sulekha