ನೀನು ಸುಂದರವಾಗಿದ್ದೀಯಾ! – ಲಾಕಪ್‌ನಲ್ಲಿದ್ದ ಮಹಿಳಾ ಆರೋಪಿ ಜೊತೆಯೇ ಪೊಲೀಸಪ್ಪನ ಅಸಭ್ಯ ವರ್ತನೆ!

ನೀನು ಸುಂದರವಾಗಿದ್ದೀಯಾ! – ಲಾಕಪ್‌ನಲ್ಲಿದ್ದ ಮಹಿಳಾ ಆರೋಪಿ ಜೊತೆಯೇ ಪೊಲೀಸಪ್ಪನ ಅಸಭ್ಯ ವರ್ತನೆ!

ಪೊಲೀಸ್‌ ಅಧಿಕಾರಿಯೊಬ್ಬರು ಮಹಿಳಾ ಆರೋಪಿ ಜೊತೆ ಅಸಭ್ಯ ಬೇಡಿಕೆಯಿಟ್ಟು ಕಿರುಕುಳ ಕಿರುಕುಳ ನೀಡಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಅಕೋಲಾದಲ್ಲಿ ನಡೆದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹಿರಿಯ ಅಧಿಕಾರಿಗಳು, ಸಂಬಂಧಪಟ್ಟ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಅನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ವಂದೇ ಭಾರತ್ ರೈಲಿನಲ್ಲಿ ಆಹಾರ ಸೇವಿಸಿದ ಮಹಿಳೆ ಶಾಕ್!‌ – ಊಟ ಮಾಡಿದ ಮೇಲೆ ಏನಾಯ್ತು?

ಏನಿದು ಘಟನೆ?

80 ಲಕ್ಷ ವಂಚನೆ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿ ಲಾಕಪ್‌ನಲ್ಲಿ ಇರಿಸಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಎಎಸ್‌ಐ, ಮಹಿಳೆಯ ಬಳಿ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಆಕೆಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದರು. ನೀವು ಸುಂದರವಾಗಿದ್ದೀರಿ, ನಿಮ್ಮ ಮಗಳು ಕೂಡ ಸುಂದರವಾಗಿರುತ್ತಾಳೆ ಎಂದು ಹೇಳಿದ್ದಾರೆ. ಬಳಿಕ ಮಹಿಳೆಯ ಮೇಲೆ ಒತ್ತಡ ಹೇರಿ ಅಸಭ್ಯ ಬೇಡಿಕೆಯನ್ನು ಇಟ್ಟಿದ್ದ ಎನ್ನಲಾಗಿದೆ.

ಈ ವಿಷಯವು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆಯೇ  ಕೃತ್ಯದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲಾಗಿದ್ದು, ಅಧಿಕಾರಿಯ ತಪ್ಪಿತಸ್ಥ ನಡವಳಿಕೆ ದೃಢಪಟ್ಟಿದೆ. ತಕ್ಷಣವೇ ಜಾರಿಗೆ ಬರುವಂತೆ ಆ ಎಎಸ್‌ಐ ಅಮಾನತುಗೊಳಿಸಲಾಗಿದೆ.

ಪೊಲೀಸ್ ಠಾಣೆಯ ಲಾಕಪ್‌ನಲ್ಲಿರುವ ಮಹಿಳೆಯರಿಗೂ ರಕ್ಷಣೆ ಇಲ್ಲದಂತಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿ ಯಾವುದೇ ತಪ್ಪು ಮಾಡಿರಲಿ, ಕಾನೂನುಬದ್ಧವಾಗಿ ವಿಚಾರಣೆ ನಡೆಸಬೇಕಾದ ಪೊಲೀಸರೇ ಈ ರೀತಿ ವರ್ತಿಸುವುದು ಖಂಡನೀಯ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಇಲಾಖಾ ತನಿಖೆ ಮುಂದುವರಿದಿದ್ದು, ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಕೋಲಾ ಪೊಲೀಸ್ ಮೂಲಗಳು ತಿಳಿಸಿವೆ.

Shwetha M