ಠಾಣೆಯಲ್ಲಿ ಊಟ ಕದ್ದು ತಿಂದ ನಾಯಿ – ಪೊಲೀಸರು ಏನ್ ಮಾಡಿದ್ರು ಗೊತ್ತಾ?

ಠಾಣೆಯಲ್ಲಿ ಊಟ ಕದ್ದು ತಿಂದ ನಾಯಿ – ಪೊಲೀಸರು ಏನ್ ಮಾಡಿದ್ರು ಗೊತ್ತಾ?

ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಅನ್ನೋ ಗಾದೆ ಮಾತು ಎಂದೆಂದಿಗೂ ಪ್ರಸ್ತುತ. ಕಳ್ಳತನವಾದಾಗ, ಕೊಲೆ ನಡೆದಾಗ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಪತ್ತೆಹಚ್ಚುತ್ತಾರೆ. ಬಳಿಕ ಆರೋಪಿಯನ್ನು ವಿಚಾರಣೆ ನಡೆಸಿ,  ಆರೋಪ ಸಾಭಿತಾದ ಬಳಿಕ ಶಿಕ್ಷೆಯನ್ನು ಪ್ರಕಟಿಸಲಾಗುತ್ತದೆ. ಆದರೆ ಇಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ಪೊಲೀಸರ ಆಹಾರ ಕದ್ದು ತಿಂದದ್ದಕ್ಕೆ ನಾಯಿಯನ್ನು ಆರೋಪಿ ಸ್ಥಾನದಲ್ಲಿ ಕೂರಿಸಲಾಗಿದೆ.

ಇದನ್ನೂ ಓದಿ: ಪ್ಲೀಸ್​ ಅಂದ್ರೆ ಇಲ್ಲಿ ಕಡಿಮೆ ಬೆಲೆಗೆ ಟೀ ಸಿಗುತ್ತೆ!: ಪ್ರೆಸ್ಟನ್​ ಕೆಫೆಯ ಮೆನು ಭಾರಿ ವೈರಲ್​

ಅಮೆರಿಕಾದ ಮಿಚಿಗನ್ ರಾಜ್ಯದ ವಾಯೈನ್ಟೊಂಟ್ಟೆ ಪೊಲೀಸ್ ಠಾಣೆಯ “ಐಸ್” ಶ್ವಾನ ಆಹಾರವನ್ನು ಕದ್ದು ತಿಂದಿದೆಯಂತೆ. ಅದಕ್ಕಾಗಿ ಐಸ್ ಅನ್ನು ಆರೋಪಿ ಸ್ಥಾನದಲ್ಲಿ ಕೂರಿಸಲಾಗಿದೆ.

ಜ.12 ರಂದು ವಾಯೈನ್ಟೊಂಟ್ಟೆ ಪೊಲೀಸ್ ಠಾಣೆಗೆ ಪ್ರಕರಣವೊಂದನ್ನು ಭೇದಿಸಲು ಬಾರ್ವಿಗ್ ಎಂಬ ಅಧಿಕಾರಿ ಬಂದಿದ್ದರು. ವಿಶ್ರಾಂತಿ ಕೋಣೆಯಲ್ಲಿ ಊಟ ಮಾಡುತ್ತಿದ್ದ ವೇಳೆ ಮತ್ತೊಬ್ಬ ಅಧಿಕಾರಿ ಬಾರ್ವಿಗ್ ಅವರನ್ನು ಕರೆದಿದ್ದಾರೆ. ಈ ವೇಳೆ ಟೇಬಲ್‌  ಮೇಲೆ ಊಟ ಇಟ್ಟು ಹೋಗಿದ್ದಾರೆ. ಕೆಲ ಸಮಯದ ಬಳಿಕ ಬಂದು ನೋಡಿದಾಗ ಅರ್ಧ ತಿಂದು ಹೋದ ಊಟ ಪೂರ್ತಿ ಖಾಲಿಯಾಗಿತ್ತು. ಅಧಿಕಾರಿ ತನ್ನ ಆಹಾರವನ್ನು ಕದ್ದ ಕಳ್ಳ ಯಾರು ಅಂತ ಸುತ್ತಲೂ ಗಮನಿಸಿದ್ದಾರೆ. ಈ ವೇಳೆ ಪಕ್ಕದಲ್ಲೇ ಕುಳಿತಿದ್ದ ಪೊಲೀಸ್‌ ಡಾಗ್‌ ಏನೋ ತಿಂದು ಕೈ ನೆಕ್ಕುವಂತೆ ತನ್ನ ಕಾಲುಗಳನ್ನು ನೆಕ್ಕುತ್ತಿತ್ತು. ಹಾಗಾಗಿ ತನ್ನ ಆಹಾರವನ್ನು ಈ ನಾಯಿಯೆ ಕದ್ದು ತಿಂದಿದೆ ಅಂತ ಅಧಿಕಾರಿಗಳು ಆರೋಪಿ ಸ್ಥಾನದಲ್ಲಿ ಕೂರಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ಬಗ್ಗೆ ಪೊಲೀಸರು ಬರೆದು ಐಸ್‌ ಫೋಟೋ ಹಾಕಿದ್ದಾರೆ. ಇದನ್ನು ಕಂಡ ನೆಟ್ಟಿಗರು ‘ಐಸ್‌ ಆಹಾರ ಕದ್ದ ಆರೋಪ ಸಾಬೀತು ಆಗುವವರೆಗೂ ಆತ ಮುಗ್ಧ’ ಎಂದು ಕಮೆಂಟ್‌ ಮಾಡಿದ್ದಾರೆ.

suddiyaana