ಸೊಸೆ ರಶ್ಮಿ ಮೇಲೆ ಜಿಮ್ ಸೀನ ಹಲ್ಲೆ – ಮಗನನ್ನು ಅರೆಸ್ಟ್ ಮಾಡಿಸಿದ ಮಿಲಿಟ್ರಿ ಮಾದಪ್ಪ

ಸೊಸೆ ರಶ್ಮಿ ಮೇಲೆ ಜಿಮ್ ಸೀನ ಹಲ್ಲೆ – ಮಗನನ್ನು ಅರೆಸ್ಟ್ ಮಾಡಿಸಿದ ಮಿಲಿಟ್ರಿ ಮಾದಪ್ಪ

ಅಣ್ಣಯ್ಯ ಧಾರಾವಾಹಿಯಲ್ಲಿ ಗುಂಡಮ್ಮ ಮತ್ತು ಜಿಮ್ ಸೀನನ ಎಪಿಸೋಡ್ ವೀಕ್ಷಕರಿಗೆ ಇಷ್ಟವಾಗಿದೆ. ಜಿಮ್ ಸೀನನಿಗೆ ಪತ್ನಿ ರಶ್ಮಿ ಮೇಲೆ ಪ್ರೀತಿಯಿಲ್ಲ. ಪಿಂಕಿ ಕಂಡ್ರೆ ತುಂಬಾ ಪ್ರೀತಿ. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ ಗುಂಡಮ್ಮನ ಕಂಡ್ರೆ ಸಿಡಿಮಿಡಿ ಮಾಡ್ತಾ ಇರುತ್ತಾನೆ. ಇದೀಗ ಜಿಮ್ ಸೀನ ಪತ್ನಿ ಮೇಲೆ ಹಲ್ಲೆ ನಡೆಸಿ ಅಪ್ಪನ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ಇದರ ಪರಿಣಾಮ ಜಿಮ್ ಸೀನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾನೆ.

ಇದನ್ನು ಓದಿ:ಭಾಗ್ಯ ಅಲ್ಲ.. ಕುಸುಮಾ ಸೊಸೆ ಶ್ರೇಷ್ಠಾ! – ಮಕ್ಕಳಿಗಾಗಿ ಭಾಗ್ಯ ದೊಡ್ಡ ನಿರ್ಧಾರ!

ಮಾರಿಗುಡಿ ವಾಣಿ ಪತ್ರಿಕೆ ಓದಿದವರೆಲ್ಲಾ ಶಾಕ್ ಆಗಿದ್ದಾರೆ. ಜಿಮ್ ಸೀನ ಅರೆಸ್ಟ್ ಆಗಿರುವ ಸುದ್ದಿ ಪೇಪರ್‌ನಲ್ಲಿ ಬಂದಾಗಿದೆ. ಜಿಮ್ ಸೀನ ತನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ಅನ್ಯಾಯವನ್ನು ಸಹಿಸದ ಸೀನನ ತಂದೆ ಸ್ವಂತ ಮಗನ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಜಿಮ್ ಸೀನನನ್ನು ಬಂಧಿಸಿದ್ದಾರೆ. ಜಿಮ್ ಸೀನನಿಗೆ ಗುಂಡಮ್ಮನನ್ನು ಮದುವೆಯಾಗುವುದು  ಇಷ್ಟವಿರಲಿಲ್ಲ. ಮದುವೆಯಾದ ಮೇಲೆ ಪತ್ನಿ ಜೊತೆ ಪ್ರೀತಿ ಮೂಡಲೇ ಇಲ್ಲ. ಜಿಮ್ ಸೀನನಿಗೆ ಪಿಂಕಿ ಮೇಲೆ ಪ್ರೀತಿ. ಮದುವೆಯಾದ ಮೇಲೂ ಪ್ರೇಮಿಯೊಬ್ಬಳ ಪ್ರೇಮಪಾಶದಲ್ಲಿ ಸಿಲುಕಿರೋ ಸೀನ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ತನ್ನ ಸೊಸೆಗೆ ಆಗಿರುವ ಅನ್ಯಾಯವನ್ನು ನೋಡಲಾಗದೇ ಖುದ್ದು ಅಪ್ಪ ಮಾದಪ್ಪನೇ ಈಗ ಮಗನನ್ನು ಅರೆಸ್ಟ್​ ಮಾಡಿಸಿದ್ದಾನೆ. ಮಗನ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ಪೊಲೀಸರು ಬಂದು ಜಿಮ್​ ಸೀನನನ್ನು ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ.

ಹೆಣ್ಣನ್ನು ಗೌರವಿಸಬೇಕು. ಹೆಣ್ಣು ಹೆತ್ತು ಗಂಡನ ಮನೆಗೆ ಕಳುಹಿಸಿರುವ ಪೋಷಕರಿಗೆ ನಾವು ಕಾವಲಾಗಿರಬೇಕು ಎಂದಿದ್ದಾನೆ ಮಾದಪ್ಪ. ಅತ್ತೆ- ಮಾವನಾದವರು ಸೊಸೆಗೆ ಅಪ್ಪ-ಅಮ್ಮ ಆಗಿರಬೇಕು. ಆಕೆ ನಮಗೆ ಮಗಳಾಗಬೇಕು ಎಂದಿರುವ ಮಾದಪ್ಪನ ಮಾತಿಗೆ ವೀಕ್ಷಕರು ಭಾರಿ ಮೆಚ್ಚುಗೆ ಸೂಸಿದ್ದಾರೆ. ಈ ಘಟನೆಯ ಬಗ್ಗೆ ಸೀರಿಯಲ್​ನ ಮಾರಿಗುಡಿ ವಾಣಿಯಲ್ಲಿ ಪ್ರಕಟ ಆಗಿರೋ ಈ ಸುದ್ದಿಯನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿಕೊಂಡಿದೆ. ಸೊಸೆ ಮೇಲೆ ಹಲ್ಲೆ, ಸ್ವಂತ ಮಗನ ಮೇಲೆ ದೂರು ನೀಡಿದ ತಂದೆ. ಮಾರಿಗುಡಿ ಮಾದಪ್ಪನ ಮಾದರಿ ನಿರ್ಧಾರ, ಜಿಮ್​ ಸೀನನ ಬಂಧನ ಎಂದು ಹೆಡ್ಡಿಂಗ್​ ಕೊಡಲಾಗಿದೆ.

Sulekha